1982ರಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿ ಬ್ಯಾಚ್‌ಮೇಟ್‌ಗಳಿಗೆ ಶೇರು ಆಗಿದ್ದ ತಾಲಿಬಾನ್‌ ಉನ್ನತ ವ್ಯಕ್ತಿ..!

ಶೆರ್ ಮೊಹಮ್ಮದ್ ಅಬ್ಬಾಸ್ ಸ್ತಾನಿಕ್‌ಜಾಯ್, ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥರಾಗಿದ್ದಾರೆ. ಅವರಿಗೂ ಭಾರತಕ್ಕೂ ಸಂಬಂಧವಿದೆ.

ಯಾಕೆಂದರೆ ಅವರು ಹಿಂದೆ ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಒಬ್ಬ ಸಂಭಾವಿತ ಕೆಡೆಟ್ ಆಗಿದ್ದರು, ಅಲ್ಲಿ ಅವರನ್ನು ಬ್ಯಾಚ್‌ಮೇಟ್‌ಗಳು ‘ಶೇರು’ ಎಂದು ಕರೆಯುತ್ತಿದ್ದರು.
ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡಿದ ನಂತರ, ಶೇರ್ ಮೊಹಮ್ಮದ್ ಸ್ತಾನಿಕ್‌ಜಾಯ್ ಡೆಹ್ರಾಡೂನಿನ ಭಾರತೀಯ ಮಿಲಿಟರಿ ಅಕಾಡೆಮಿ(ಐಎಮ್‌ಎ)ಗೆ ಸೇರಿದರು, ಭಾರತೀಯ ಸೇನಾ ಸಂಸ್ಥೆ ಅಫ್ಘಾನಿಸ್ಥಾನಕ್ಕೆ ತನ್ನ ಬಾಗಿಲು ತೆರೆದ ನಂತರ ಅಲ್ಲಿ ಅವರು 1.5 ವರ್ಷಗಳ ಕಾಲ ತರಬೇತಿ ಪಡೆದಿದ್ದರು, ಈಗ ಅವರು ತಾಲಿಬಾನ್‌ನ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ, ಅವರು ತಾಲಿಬಾನ್ ಆಡಳಿತದ ಪ್ರಮುಖ ಭಾಗವಾಗುತ್ತಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ‘ಶೇರು’ ಅಥವಾ ಶೇರ್ ಮೊಹಮ್ಮದ್ ಸ್ತಾನಿಕ್‌ಜಾಯ್ ಅವರು ಡೆಹ್ರಾಡೂನ್‌ನಲ್ಲಿ 1982 ರ ಬ್ಯಾಚ್‌ನಲ್ಲಿ ಐಎಂಎಗೆ ಸೇರಿದಾಗ ಅವರಿಗೆ 20 ವರ್ಷ. ಭಾರತೀಯ ಸೇನೆಯ ಇತರ ಕೆಡೆಟ್‌ಗಳಿಗಿಂತ ಸ್ವಲ್ಪ ದೊಡ್ಡವನಾಗಿದ್ದ ಎಂದು ನಿವೃತ್ತ ಮೇಜರ್ ಜನರಲ್ ಅವರನ್ನು ನೆನಪಿಸಿಕೊಂಡಿದ್ದಾರೆ.
“ಆ ಸಮಯದಲ್ಲಿ ಅವರು ಖಂಡಿತವಾಗಿಯೂ ಯಾವುದೇ ಮೂಲಭೂತವಾದದ ದೃಷ್ಟಿಕೋನಗಳನ್ನು ಹೊಂದಿರಲಿಲ್ಲ” ಎಂದು ಮೇಜರ್ ಜನರಲ್ (ನಿವೃತ್ತ) ಡಿಎ ಚತುರ್ವೇದಿ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕರ್ನಿಲ್ (ನಿವೃತ್ತ) ಕೇಸರ್ ಸಿಂಗ್ ಶೇಖಾವತ್, ಸ್ತಾನಿಕ್‌ಜಾಯ್‌ ಬ್ಯಾಚ್‌ಮೇಟ್, ಸ್ತಾನಿಕ್‌ಜಾಯ್‌ ಅವರು ಇತರರ ಜೊತೆ ವಾರಾಂತ್ಯದ ಟ್ರಿಪ್‌ಗಳು ಮತ್ತು ನದಿ ದಂಡೆಯ ಸಣ್ಣ ಪ್ರವಾಸಗಳನ್ನು ಮಾಡಿದ್ದನ್ನು ನೆನಪಿಸಿಕೊಂಡರು. “ನಾವು ರಿಷಿಕೇಶದಲ್ಲಿ ನದಿಗೆ ಹೋಗಿ ಗಂಗಾ ಸ್ನಾನ ಮಾಡಿದ ದಿನದ ಅವರ ಛಾಯಾಚಿತ್ರವಿದೆ” ಎಂದು ಕರ್ನಲ್ ಶೇಖಾವತ್ ನೆನಪಿಸಿಕೊಂಡರು. ಎಂದು ವರದಿ ಹೇಳಿದೆ.
ಐಎಂಎಯಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಸ್ತಾನಿಕ್‌ಜಾಯ್ ಅಫ್ಘಾನ್ ರಾಷ್ಟ್ರೀಯ ಸೇನೆಗೆ ಲೆಫ್ಟಿನೆಂಟ್ ಆಗಿ ಸೇರಿಕೊಂಡರು. ಅವರು ಸೋವಿಯತ್-ಅಫ್ಘಾನ್ ಯುದ್ಧ ಮತ್ತು ಅಫ್ಘಾನಿಸ್ತಾನದ ಇಸ್ಲಾಮಿಕ್ ವಿಮೋಚನೆ ಹೋರಾಟ ನಡೆಸಿದರು.
ಹಿಂದಿನ ತಾಲಿಬಾನ್ ಆಡಳಿತದ ಅವಧಿಯಲ್ಲಿ, ಸ್ತಾನಿಕ್‌ಜಾಯ್ ವಿದೇಶಾಂಗ ವ್ಯವಹಾರಗಳ ಉಪ ಮಂತ್ರಿಯಾಗಿ ಸೇವೆ ಸಲ್ಲಿಸಿದರು ಮತ್ತು ಬಿಲ್ ಕ್ಲಿಂಟನ್ ಆಡಳಿತಾವಧಿಯಲ್ಲಿ ತಾಲಿಬಾನ್ ಪರವಾಗಿ ರಾಜತಾಂತ್ರಿಕ ಮಾತುಕತೆಗಾಗಿ ಅಮೆರಿಕ್ಕೆ ಪ್ರಯಾಣಿಸಿದ್ದರು. 2015 ರಲ್ಲಿ, ಕತಾರ್‌ನಲ್ಲಿ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥರಾಗಿ ಅವರನ್ನು ನೇಮಿಸಲಾಯಿತು

ಪ್ರಮುಖ ಸುದ್ದಿ :-   ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement