ಚಿರತೆ ಹಿಡಿದುಕೊಂಡು ಸಂಭ್ರಮಿಸಿದ ಗ್ರಾಮಸ್ಥರು, ಅದರೊಂದಿಗೆ ಸೆಲ್ಫಿ ತೆಗೆದುಕೊಂಡರು | ವೀಕ್ಷಿಸಿ

ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಹಲವಾರು ಗ್ರಾಮಸ್ಥರು ಚಿರತೆಯನ್ನು ಹಿಡಿದುಕೊಂಡು ಸಂಭ್ರಮಿಸುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಮಂಗಳವಾರ ಮಧ್ಯಾಹ್ನ ಕಾಳಿ ಸಿಂಧ್ ನದಿಯ ದಡದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಈ ಪ್ರಾಣಿಯನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವೈರಲ್ ಆಗಿರುವ ವೀಡಿಯೊದಲ್ಲಿ, ಚಿರತೆ ಆಲಸ್ಯವಾಗಿ ಇರುವಂತೆ ಕಾಣಿಸಿಕೊಂಡಿದ್ದು, ಅದು ನಡೆಯಲು ಕಷ್ಟಪಡುತ್ತಿದೆ.
ಆರಂಭದಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದರೂ, ಚಿರತೆ ಯಾವುದೇ ಪ್ರತಿರೋಧ ತೋರದೇ ಇದ್ದಾಗ ಚಿರತೆಯೊಂದಿಗೆ ಆಟವಾಡತೊಡಗಿದರು. ಕೆಲವರು ಚಿರತೆಯೊಂದಿಗೆ ಚಿತ್ರ, ವೀಡಿಯೊ, ಸೆಲ್ಫಿಗೆ ಪೋಸ್ ನೀಡಿದರೆ, ಇನ್ನೂ ಹಲವರು ಚಿರತೆ ಬೆನ್ನ ಮೇಲೆ ಸವಾರಿ ಮಾಡಿದರು.

ಏತನ್ಮಧ್ಯೆ, ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ಸ್ಥಳಕ್ಕೆ ಆಗಮಿಸಿದರು, ನಂತರ ಉಜ್ಜಯಿನಿಯಿಂದ ರಕ್ಷಣಾ ತಂಡವು ಬಂದಿತು. ದೇವಾಸ್ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ತಂಡವು ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಉಪವಿಭಾಗಾಧಿಕಾರಿ ಸಂತೋಷ ಶುಕ್ಲಾ ಮಾತನಾಡಿ, ಚಿರತೆಯ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಆದಾಗ್ಯೂ, ಪ್ರಾಣಿ ಅನಾರೋಗ್ಯದಿಂದ ಬಳಲುತ್ತಿರಬಹುದು ಅಥವಾ ಅದು ಅತಿಯಾಗಿ ತಿಂದಿರಬಹುದು ಎಂದು ಊಹಿಸಿದ್ದಾರೆ.
ಚಿರತೆಯ ಸ್ಥಿತಿ ಚಿಂತಾಜನಕವಾಗಿದೆ. ಹೀಗಿದ್ದರೂ ಜನರು ಅದಕ್ಕೆ ತೊಂದರೆ ಕೊಡುತ್ತಿದ್ದರು. ಗ್ರಾಮಸ್ಥರನ್ನು ಅಲ್ಲಿಂದ ತೆರವು ಮಾಡಿದೆವು. ಇದರ ನಂತರ, ಪಶುವೈದ್ಯರನ್ನು ಇಂದೋರಿನ ಮೋವ್‌ನಿಂದ ಕರೆಸಲಾಯಿತು” ಎಂದು ಶುಕ್ಲಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ಹಾವಿನ ತಲೆಗಾಗಿ ಹೋಗಿದ್ದೇವೆ....': ಪಾಕ್ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯ ಬಗ್ಗೆ

ಚಿರತೆ ತಲೆ ಸುತ್ತು ಬಂದ ಸ್ಥಿತಿಯಲ್ಲಿ ಕಾಡಿನಲ್ಲಿ ಅಲೆದಾಡುತ್ತಿದ್ದು, ಅದಕ್ಕೆ ಸರಿಯಾಗಿ ನಡೆಯಲು ಸಹ ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಸಿಬ್ಬಂದಿ ಜಿತೇಂದ್ರ ಚೌಹಾಣ ತಿಳಿಸಿದ್ದಾರೆ. ಚಿರತೆಗೆ ವಾನ್ ವಿಹಾರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿರತೆಗೆ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದರು.
ಚಿರತೆಯನ್ನು ರಾತ್ರಿಯಿಡೀ ದೌಲತ್‌ಪುರದ ವಿಶ್ರಾಂತಿ ಗೃಹದಲ್ಲಿ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿತ್ತು. ಈಗ ಚಿಕಿತ್ಸೆಗಾಗಿ ಇಂದೋರ ಮೃಗಾಲಯಕ್ಕೆ ಕರೆದೊಯ್ಯಲಾಗುತ್ತದೆ. ಚೇತರಿಸಿಕೊಂಡ ನಂತರ ಅದನ್ನು ಮತ್ತೆ ಕಾಡಿಗೆ ಬಿಡಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಯುದ್ಧ ನಿಲ್ಲಿಸುವಂತೆ ಅಮೆರಿಕಕ್ಕೆ ಪಾಕಿಸ್ತಾನ ಗೋಗರೆದಿದ್ದೇಕೆ..? ಭಾರತದ ಬ್ರಹ್ಮೋಸ್‌ ಶಕ್ತಿಗೆ ಪಾಕ್‌ ಪರಮಾಣು ಶಸ್ತ್ರಾಗಾರದ ಬಳಿಯ ಮಿಲಿಟರಿ ನೆಲೆಗಳು ಧ್ವಂಸ ; ಪಾಕ್‌ ಕಂಗಾಲು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement