ಇ-ಮೇಲ್ ನಿಂದ ಮೂನ್ ಲೈಟಿಂಗ್ ಕಳ್ಳಾಟ ಬಯಲು ; ಭಾರತದ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ 15 ವರ್ಷ ಜೈಲು

ನ್ಯೂಯಾರ್ಕ್: ಈ ಹಿಂದೆ ಭಾರತದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮೂನ್ ಲೈಟಿಂಗ್ ಇದೀಗ ಅಮೆರಿಕದಲ್ಲೂ ಸದ್ದು ಮಾಡುತ್ತಿದ್ದು, ಭಾರತ ಮೂಲದ ವ್ಯಕ್ತಿ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಅಮೆರಿಕದ ನ್ಯೂಯಾರ್ಕ್‌ನ ಸರ್ಕಾರಿ ಕಚೇರಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಾ ಬೇರೊಂದು ಸಂಸ್ಥೆಗೆ ಅನೌಪಚಾರಿಕವಾಗಿ ಕೆಲಸ ಮಾಡುತ್ತಿದ್ದ (ಮೂನ್‌ಲೈಟ್‌) ಭಾರತ ಮೂಲದ 39 ವರ್ಷದ ವ್ಯಕ್ತಿಗೆ ಅಮೆರಿಕ ನ್ಯಾಯಾಲಯ, 15 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
ಭಾರತ ಮೂಲದ ನೌಕರ ಮೆಹುಲ್ ಗೋಸ್ವಾಮಿ ಶಿಕ್ಷೆಗೆ ಗುರಿಯಾದವರಾಗಿದ್ದು, ಒಂದು ಉದ್ಯೋಗದ ಗುತ್ತಿಗೆ ಸಕ್ರಿಯವಾಗಿರುವಾಗ ಅದರ ನಿಯಮ ಉಲ್ಲಂಘಿಸಿ ಬೇರೆ ಕೆಲಸ ಮಾಡುವುದು ತೆರಿಗೆದಾರರ 50 ಸಾವಿರ ಡಾಲರ್‌ (43 ಲಕ್ಷ ರೂ) ವಂಚಿಸಿದ ಅಪರಾಧಕ್ಕೆ ಸಮ ಎಂದು ಸರಟೊಗಾ ಕೌಂಟಿ ಶೆರೀಫ್‌ ಕಚೇರಿಯು ಅಭಿಪ್ರಾಯಪಟ್ಟಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಮೆಹುಲ್ ಗೋಸ್ವಾಮಿ ನ್ಯೂಯಾರ್ಕಿನ ರಾಜ್ಯ ಸರ್ಕಾರಿ ಸ್ವಾಮ್ಯದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಬೇರೊಂದು ಖಾಸಗಿ ಕಂಪನಿಯಲ್ಲಿ (ಗ್ಲೋಬಲ್ ಫೌಂಡರೀಸ್) ಕಂಟ್ರಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಅಲ್ಲದೆ ನ್ಯೂಯಾರ್ಕ್ ನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ 50 ಸಾವಿರ ಡಾಲರ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪಗಳಿದ್ದು ತನಿಖೆಯಲ್ಲಿ ಹಾಗೂ ವಿಚಾರಣೆಯಲ್ಲಿ ಆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಗೋಸ್ವಾಮಿಗೆ ಶಿಕ್ಷೆ ವಿಧಿಸಲಾಗಿದೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ ಮೆಹುಲ್
ಮೂಲಗಳ ಪ್ರಕಾರ ಮೆಹುಲ್ ಗೋಸ್ವಾಮಿ ಅವರು ಮನೆಯಿಂದಲೇ ನ್ಯೂಯಾರ್ಕ್‌ನ ಸರ್ಕಾರಿ ಕಚೇರಿಗೆ ಕೆಲಸ ಮಾಡುತ್ತಿದ್ದರು. ಇದು ಅವರ ಪ್ರಾಥಮಿಕ ಉದ್ಯೋಗವಾಗಿತ್ತು. ಆದರೆ, ಅದೇ ವೇಳೆಗೆ ಮಾಲ್ಟಾದಲ್ಲಿರುವ ಗ್ಲೋಬಲ್‌ಫೌಂಡ್ರೀಸ್‌ ಎಂಬ ಸೆಮಿ ಕಂಡಕ್ಟರ್‌ ಕಂಪನಿಗೂ 2022ರಿಂದ ಕೆಲಸ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಇ-ಮೇಲ್ ನಿಂದ ಮಾಹಿತಿ ಬಹಿರಂಗ…
ಸರ್ಕಾರಿ ಕಚೇರಿಗೆ ಬಂದ ಅನಾಮದೇಯ ಇ-ಮೇಲ್‌ ಒಂದು ಕಳ್ಳಾಟ ಬಯಲು ಮಾಡಿತ್ತು. ಸರ್ಕಾರಿ ನೌಕರನಾಗಿ ಕೆಲಸ ಮಾಡಬೇಕಾದ ಅವಧಿಯಲ್ಲೇ ಖಾಸಗಿ ಕಂಪನಿಯಲ್ಲೂ ಕೆಲಸ ಮಾಡುತ್ತಿದ್ದ ವಿವರ ಅದರಲ್ಲಿತ್ತು. ಈ ಬಗ್ಗೆ ಅಮೆರಿಕ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.

ಆದರೆ ಮೆಹುಲ್ ಗೋಸ್ವಾಮಿ ಅವರು ಆ ನಂಬಿಕೆಯನ್ನು ಮುರಿದಿದ್ದಾರೆ. ರಾಜ್ಯಕ್ಕೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು, ಅದೇ ಸಮಯದಲ್ಲಿ ಬೇರೊಂದು ಸಂಸ್ಥೆಗೆ ಕೆಲಸ ಮಾಡುವ ಮೂಲಕ ನಂಬಿಕೆ ದ್ರೋಹದ ಜತೆಗೆ, ತೆರಿಗೆದಾರರ ಹಣವನ್ನು ನಷ್ಟ ಮಾಡಿದ್ದಾರೆ ಎಂದು ಇನ್‌ಸ್ಪೆಕ್ಟರ್ ಜನರಲ್ ಲೂಸಿ ಲ್ಯಾಂಗ್‌ ಹೇಳಿದ್ದಾರೆ ಎಂದು ವರದಿ ಮಾಡಿದೆ.
ಕೋಟಿ ಹಣ ಗಳಿಕೆ
ಈ ಪ್ರಕರಣ ಸಂಬಂಧ ಅ. 15ರಂದು ಗೋಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಇವರ ಮೇಲಿನ ಆರೋಪ ಗಂಭೀರ ಸ್ವರೂಪದ್ದಾಗಿರುವುದರಿಂದ 15 ವರ್ಷಗಳ ಶಿಕ್ಷೆಗೆ ಇವರು ಗುರಿಯಾಗಿದ್ದಾರೆ. ಮೆಹುಲ್ ಅವರು 2024ರಲ್ಲಿ ಸರ್ಕಾರಿ ಕಚೇರಿಯಿಂದ 1.17 ಲಕ್ಷ (1.03ಕೋಟಿ ರೂ) ಅಮೆರಿಕನ್‌ ಡಾಲರ್‌ ಗಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement