ವೀಡಿಯೊ | ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ವಾಹನಕ್ಕೆ ಏರ್ ಕೆನಡಾ ವಿಮಾನ ಡಿಕ್ಕಿ : ಅಪಘಾತದ ದೃಶ್ಯ ಸೆರೆ

ಸೋಮವಾರ ರಾತ್ರಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವೊಂದು ಅಗ್ನಿಶಾಮಕ ದಳದ ಟ್ರಕ್‌ಗೆ ಡಿಕ್ಕಿ ಹೊಡೆದ ಘಟನೆಯು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಅಪಘಾತದ ಸ್ಪಷ್ಟ ದೃಶ್ಯಗಳು ಲಭ್ಯವಾಗಿವೆ. ಏರ್ ಕೆನಡಾ ಎಕ್ಸ್‌ಪ್ರೆಸ್ ಫ್ಲೈಟ್ AC8646 (ಬಾಂಬಾರ್ಡಿಯರ್ CRJ-900 ಮಾದರಿ) ಈ ವಿಮಾನವು ಮಾಂಟ್ರಿಯಲ್‌ನಿಂದ ಆಗಮಿಸಿದ್ದು, ಏರ್ ಕೆನಡಾದ ಪ್ರಾದೇಶಿಕ … Continued

ಇ-ಮೇಲ್ ನಿಂದ ಮೂನ್ ಲೈಟಿಂಗ್ ಕಳ್ಳಾಟ ಬಯಲು ; ಭಾರತದ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ 15 ವರ್ಷ ಜೈಲು

ನ್ಯೂಯಾರ್ಕ್: ಈ ಹಿಂದೆ ಭಾರತದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮೂನ್ ಲೈಟಿಂಗ್ ಇದೀಗ ಅಮೆರಿಕದಲ್ಲೂ ಸದ್ದು ಮಾಡುತ್ತಿದ್ದು, ಭಾರತ ಮೂಲದ ವ್ಯಕ್ತಿ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನ ಸರ್ಕಾರಿ ಕಚೇರಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಾ ಬೇರೊಂದು ಸಂಸ್ಥೆಗೆ ಅನೌಪಚಾರಿಕವಾಗಿ ಕೆಲಸ ಮಾಡುತ್ತಿದ್ದ (ಮೂನ್‌ಲೈಟ್‌) ಭಾರತ ಮೂಲದ 39 ವರ್ಷದ … Continued

ಟ್ರಂಪ್ ಒತ್ತಡದ ನಂತರವೂ ‘ಮೇಕ್ ಇನ್ ಇಂಡಿಯಾ’ ಬದ್ಧತೆ ಪುನರುಚ್ಚರಿಸಿದ ಆಪಲ್

ನವದೆಹಲಿ: ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಹೇಳಿಕೆ ನಂತರವೂ ಭಾರತದಲ್ಲಿ ತನ್ನ ಉತ್ಪಾದನೆ ಮತ್ತು ಹೂಡಿಕೆ ಯೋಜನೆಗಳು ಯಥಾಸ್ಥಿತಿಯಲ್ಲಿ ಇರಲಿವೆ ಎಂದು ಆಪಲ್ ದೃಢಪಡಿಸಿದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಭಾರತದಲ್ಲಿ ಉತ್ಪಾದನೆಯನ್ನು ಕಡಿಮೆ ಮಾಡಿ ಅಮೆರಿಕದಲ್ಲಿ ಹೆಚ್ಚಿಸುವಂತೆ ಒತ್ತಾಯಿಸಿದ ನಂತರ ಇದು ಬಂದಿದೆ. … Continued

ಕಾಲೇಜಿಗೆ ಹೋಗಲು 3,200 ಕಿ.ಮೀ. ದೂರ ವಿಮಾನದಲ್ಲಿ ಪ್ರಯಾಣಿಸುವ ಕಾನೂನು ವಿದ್ಯಾರ್ಥಿನಿ…!

ಹೆಚ್ಚಿನ ಜನರು ತಮ್ಮ ಅಧ್ಯಯನ ಅಥವಾ ಉದ್ಯೋಗಕ್ಕಾಗಿ ನಗರ ಅಥವಾ ವಿವಿಧ ದೇಶಗಳಿಗೆ ಸ್ಥಳಾಂತರಗೊಳ್ಳುತ್ತಾರೆ. ಆದರೆ 30 ವರ್ಷದ ಕಾನೂನು ವಿದ್ಯಾರ್ಥಿನಿ ನ್ಯಾಟ್ ಸೆಡಿಲ್ಲೊ ಎಂಬ ಮಹಿಳೆ ಮಾತ್ರ ಇದಕ್ಕೆ ಅಪವಾದವಾಗಿದ್ದಾರೆ. ಯಾಕೆಂದರೆ ಅವರು ತಮ್ಮ ತರಗತಿಗಳಿಗೆ ಹಾಜರಾಗಲು ಪ್ರತಿ ವಾರ ಮೆಕ್ಸಿಕೋ ನಗರದಿಂದ ನ್ಯೂಯಾರ್ಕ್ ನಗರಕ್ಕೆ 3,200 ಕಿಮೀ ವಿಮಾನದಲ್ಲಿ ಹೋಗುತ್ತಾರೆ. ದಿ ನ್ಯೂಯಾರ್ಕ್ … Continued

ವೀಡಿಯೊ | ಗಿರಿಗಿರಿ ತಿರುಗುತ್ತ ನದಿಗೆ ಬಿದ್ದ ಹೆಲಿಕಾಪ್ಟರ್ ; ಟೆಕ್ ಸಿಇಒ ಸೇರಿ ಕುಟುಂಬದ ಐವರು ಸಾವು

ನ್ಯೂಯಾರ್ಕ್: ಗುರುವಾರ ನ್ಯೂಯಾರ್ಕ್‌ನ ಹಡ್ಸನ್ ನದಿಗೆ ಪ್ರವಾಸಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಮೂವರು ಮಕ್ಕಳು ಸೇರಿದಂತೆ ಐವರು ಸ್ಪ್ಯಾನಿಷ್ ಪ್ರವಾಸಿಗರ ಕುಟುಂಬ ಸೇರಿ ಆರು ಜನ ಸಾವಿಗೀಡಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿನ ವೀಡಿಯೊಗಳು – ಬೆಲ್ 206 – ಹೆಲಿಕಾಪ್ಟರ್‌ನ ಭಾಗಗಳು – ನ್ಯೂಜೆರ್ಸಿಯ ಜೆರ್ಸಿ ನಗರದ ಕರಾವಳಿಯ ಬಳಿ ಗಾಳಿಯಲ್ಲಿ ನೀರಿಗೆ ಬೀಳುತ್ತಿರುವುದನ್ನು ತೋರಿಸಿವೆ. ಪೈಲಟ್ ಜೊತೆಗೆ, … Continued

ಟಿ20 ವಿಶ್ವಕಪ್ 2024 : ಭಾರತ -ಪಾಕಿಸ್ತಾನ ಪಂದ್ಯದ ವೇಳೆ ‘ಒಂಟಿ ತೋಳ’ ದಾಳಿಯ ಬೆದರಿಕೆ ಹಾಕಿದ ಐಸಿಸ್‌-ಕೆ ಭಯೋತ್ಪಾದಕ ಸಂಘಟನೆ…!

ನ್ಯೂಯಾರ್ಕ್: ಮುಂದಿನ ತಿಂಗಳು ಅಮೆರಿಕದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಐಸಿಸ್-ಕೆ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿಗೆ ಕರೆ ನೀಡಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಭದ್ರತಾ ಎಚ್ಚರಿಕೆ ನೀಡಿದ್ದಾರೆ. ನಸ್ಸೌ ಕೌಂಟಿಯ ಕಾರ್ಯನಿರ್ವಾಹಕ ಬ್ರೂಸ್ ಬ್ಲೇಕ್‌ಮ್ಯಾನ್ ಮತ್ತು ಪೊಲೀಸ್ ಕಮಿಷನರ್ ಪ್ಯಾಟ್ರಿಕ್ ರೈಡರ್ ಅವರು, ಭಾರತ ಮತ್ತು ಪಾಕಿಸ್ತಾನದ ವಿಶ್ವಕಪ್ … Continued

ನ್ಯೂಯಾರ್ಕ್ ಕಾರ್ಯಕ್ರಮದಲ್ಲಿ ವ್ಯಕ್ತಿಯಿಂದ ಇರಿತ: ಗಾಯಗೊಂಡ ಸಾಹಿತಿ ಸಲ್ಮಾನ್ ರಶ್ದಿಗೆ ವೆಂಟಿಲೇಟರ್‌ ಅಳವಡಿಕೆ, ಒಂದು ಕಣ್ಣು ಕಳೆದುಕೊಳ್ಳುವ ಭೀತಿ : ವರದಿ

ನ್ಯೂಯಾರ್ಕ್‌: ಶುಕ್ರವಾರ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಲವು ಬಾರಿ ಇರಿತಕ್ಕೊಳಗಾದ ಲೇಖಕ ಸಲ್ಮಾನ್ ರಶ್ದಿ ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರ ಪುಸ್ತಕ ಏಜೆಂಟ್ ಆಂಡ್ರ್ಯೂ ವೈಲಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಆಂಡ್ರ್ಯೂ ವೈಲಿ ಪ್ರಕಾರ, ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ರಶ್ದಿಯನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು ಮತ್ತು ಅವರ ತೋಳುಗಳಲ್ಲಿನ ನರಗಳನ್ನು ಕತ್ತರಿಸಲಾಯಿತು. ರಶ್ದಿಯ … Continued

ನಾಪತ್ತೆಯಾದ 50 ವರ್ಷಗಳ ನಂತರ ನ್ಯೂಯಾರ್ಕ್‌ನಲ್ಲಿ ₹ 1.7 ಕೋಟಿ ಮೌಲ್ಯದ 12ನೇ ಶತಮಾನದ ಪಾರ್ವತಿ ದೇವಿಯ ವಿಗ್ರಹ ಪತ್ತೆ

ಚೆನ್ನೈ: ಅರ್ಧ ಶತಮಾನದ ಹಿಂದೆ ಕುಂಭಕೋಣಂನ ತಂಡನ್ತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ ದೇವಾಲಯದಿಂದ ನಾಪತ್ತೆಯಾಗಿದ್ದ ಪಾರ್ವತಿ ದೇವಿಯ ವಿಗ್ರಹವು ನ್ಯೂಯಾರ್ಕ್‌ನಲ್ಲಿ ಪತ್ತೆಯಾಗಿದೆ ಎಂದು ತಮಿಳುನಾಡು ಐಡಲ್ ವಿಂಗ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೋಮವಾರ ತಿಳಿಸಿದೆ. ನ್ಯೂಯಾರ್ಕ್‌ನ ಬೋನ್‌ಹಾಮ್ಸ್ ಹರಾಜು ಹೌಸ್‌ನಲ್ಲಿ ವಿಗ್ರಹ ಪತ್ತೆಯಾಗಿದೆ ಎಂದು ಸಿಐಡಿ ತಿಳಿಸಿದೆ. 1971ರಲ್ಲಿ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿತ್ತು ಮತ್ತು … Continued