‘ಜಿಲೇಬಿ ಬಾಬಾ’ನ ಸಾಲುಸಾಲು ದುಷ್ಕೃತ್ಯ : ಮಾದಕ ದ್ರವ್ಯ, 100 ಮಹಿಳೆಯರ ಮೇಲೆ ಅತ್ಯಾಚಾರ, 14 ವರ್ಷಗಳ ಜೈಲು ಶಿಕ್ಷೆ

ಫತೇಹಾಬಾದ್ : ಹರ್ಯಾಣದ ಫತೇಹಾಬಾದ್‌ನ ತ್ವರಿತ ನ್ಯಾಯಾಲಯವು ಅಮರಪುರಿ ಅಥವಾ ಜಿಲೇಬಿ ಬಾಬಾ ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವನಿಗೆ 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದುಷ್ಕೃತ್ಯದ ವೀಡಿಯೊ ಕ್ಲಿಪ್‌ಗಳನ್ನು ಮಾಡಿದ್ದಕ್ಕಾಗಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿ ಜಿಲೇಬಿ ಬಾಬಾ ಸಹಾಯ ಕೇಳಲು ಬರುವ ಮಹಿಳೆಯರಿಗೆ ಮಾದಕ ವಸ್ತು ನೀಡಿ ಅತ್ಯಾಚಾರವೆಸಗುತ್ತಿದ್ದ. ಕೃತ್ಯವನ್ನು ರೆಕಾರ್ಡ್ ಮಾಡುತ್ತಿದ್ದ ಆತ, ನಂತರ ವಿಡಿಯೋಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಸಿ ಹಣಕ್ಕಾಗಿ ಮಹಿಳೆಯರನ್ನು ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಲ್ವಂತ್ ಸಿಂಗ್ ಅವರು 63 ವರ್ಷದ ಅಮರಪುರಿ ಉರ್ಫ್‌ ಜಿಲೇಬಿ ಬಾಬಾಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಅಪ್ರಾಪ್ತ ವಯಸ್ಕರನ್ನು ಎರಡು ಬಾರಿ ಅತ್ಯಾಚಾರ ಮಾಡಿದ್ದಕ್ಕಾಗಿ 14 ವರ್ಷಗಳ ಜೈಲು, ಸೆಕ್ಷನ್ 376 ರ ಅಡಿಯಲ್ಲಿ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ತಲಾ 7 ವರ್ಷಗಳ ಜೈಲು ಶಿಕ್ಷೆ ಹಾಗೂ ಭಾರತೀಯ ದಂಡ ಸಂಹಿತೆಯ ಸಿ ಮತ್ತು ಐಟಿ ಕಾಯಿದೆಯ ಸೆಕ್ಷನ್ 67-ಎ ಅಡಿಯಲ್ಲಿ 5 ವರ್ಷ ಜೈಲುವಿಧಿಸಿದರು. ಆದಾಗ್ಯೂ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಖುಲಾಸೆಗೊಳಿಸಲಾಯಿತು.
ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ ಮತ್ತು ದೇವಮಾನವ 14 ವರ್ಷಗಳನ್ನು ಜೈಲಿನಲ್ಲಿ ಕಳೆಯುತ್ತಾನೆ ಎಂದು ಸಂತ್ರಸ್ತರ ಪರ ವಕೀಲರಾದ ಸಂಜಯ ವರ್ಮಾ ಹೇಳಿದ್ದಾರೆ.
ಅಮರಪುರಿ ಅಲಿಯಾಸ್ ಬಿಲ್ಲು ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವ ಅಮರವೀರ್‌ನನ್ನು ಅತ್ಯಾಚಾರದ ಆರೋಪದಡಿಯಲ್ಲಿ ಫತೇಹಾಬಾದ್ ನ್ಯಾಯಾಲಯವು ಜನವರಿ 5 ರಂದು ದೋಷಿ ಎಂದು ತೀರ್ಪು ನೀಡಿತ್ತು. ನ್ಯಾಯಾಧೀಶರು ಅಪರಾಧಿ ಎಂದು ತೀರ್ಪು ನೀಡಿದ ನಂತರ ದೇವಮಾನವ ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡ.
ಹಲವಾರು ಮಹಿಳೆಯರ ಪೈಕಿ ಆರು ಮಂದಿ ಸಂತ್ರಸ್ತರು ಈತನ ವಿರುದ್ಧ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮೂವರು ಸಂತ್ರಸ್ತರ ಹೇಳಿಕೆಗಳ ಆಧಾರದ ಮೇಲೆ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ಏನಿದು ಪ್ರಕರಣ?
ಹರಿಯಾಣ ಪೊಲೀಸರು 2018 ರಲ್ಲಿ ಫತೇಹಾಬಾದ್‌ನ ತೋಹಾನಾ ಪಟ್ಟಣದಿಂದ ಅಮರಪುರಿಯನ್ನು ಬಂಧಿಸಿದರು ಮತ್ತು ಆತನ ಮೊಬೈಲ್ ಫೋನ್‌ನಿಂದ 120 ಲೈಂಗಿಕ ವೀಡಿಯೊ ಕ್ಲಿಪ್ಪಿಂಗ್‌ಗಳನ್ನು ವಶಪಡಿಸಿಕೊಂಡರು. ಅಮರಪುರಿ ಹರಿಯಾಣದ ತೊಹಾನಾದಲ್ಲಿರುವ ಬಾಬಾ ಬಾಲಕ್ ನಾಥ್ ಮಂದಿರದಲ್ಲಿ ಮುಖ್ಯ ದಾರ್ಶನಿಕ ಬಿಂಬಿಸಲ್ಪಟ್ಟಿದ್ದ.
ಅಂದಿನ ಫತೇಹಾಬಾದ್ ಮಹಿಳಾ ಪೊಲೀಸ್ ಸೆಲ್ ಉಸ್ತುವಾರಿ ಬಿಮ್ಲಾ ದೇವಿ, ಆರೋಪಿ ಅಮರಪುರಿ ಮೊಬೈಲ್ ಫೋನ್‌ನಿಂದ 120 ಲೈಂಗಿಕ ವೀಡಿಯೊ ಕ್ಲಿಪ್ಪಿಂಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಖಚಿತಪಡಿಸಿದ್ದರು.
ಮಹಿಳೆಯರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ತಾಂತ್ರಿಕ ಎಂದು ಖ್ಯಾತಿ ಬೆಳೆಸಿಕೊಂಡಿದ್ದ ಅಮರಪುರಿಯನ್ನು ಸಂಪರ್ಕಿಸುತ್ತಿದ್ದರು. ಆತ ಯಾವುದೋ ರೂಪದಲ್ಲಿ ಮಹಿಳೆಯರಿಗೆ ಮಾದಕ ದ್ರವ್ಯ ನೀಡಿ, ಲೈಂಗಿಕ ಶೋಷಣೆ ಮಾಡುತ್ತಿದ್ದ ಮತ್ತು ಕೃತ್ಯದ ವಿಡಿಯೋ ಮಾಡುತ್ತಿದ್ದ. ನಂತರ ವಿಡಿಯೋವನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಸಿ ಹಣಕ್ಕಾಗಿ ಈ ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.
ಜುಲೈ 19, 2018 ರಂದು, ಮಾಹಿತಿದಾರರು ಅಂದಿನ ತೋಹಾನಾ ಪೊಲೀಸ್ ಠಾಣೆಯ ಗೃಹ ಅಧಿಕಾರಿ (ಎಸ್‌ಎಚ್‌ಒ) ಪ್ರದೀಪಕುಮಾರ ಅವರಿಗೆ ಲೈಂಗಿಕ ವೀಡಿಯೊ ಕ್ಲಿಪ್ ಅನ್ನು ತೋರಿಸಿದಾಗ ಈ ಘಟನೆಗಳು ಬೆಳಕಿಗೆ ಬಂದವು. ಎಸ್‌ಎಚ್‌ಒ ಅವರ ದೂರಿನ ಮೇರೆಗೆ ಆರೋಪಿ ಜಿಲೇಬಿ ಬಾಬಾನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292, 293, 294, 376, 384, 509 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67-ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಮರವೀರ್‌, ವಿಧುರನಾಗಿದ್ದು ನಾಲ್ವರು ಪುತ್ರಿಯರು ಮತ್ತು ಇಬ್ಬರು ಪುತ್ರರ ತಂದೆ. ಆತ ಪಂಜಾಬ್‌ನ ಮಾನ್ಸಾದಿಂದ

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

ಯಾರು ಈ ಜಿಲೇಬಿ ಬಾಬಾ..?
ಪಂಜಾಬಿನ ಈತ 1984ರಲ್ಲಿ ಹರಿಯಾಣದ ಫತೇಹಬಾದ್‌ನ ತೊಹಾನಾಕ್ಕೆ ಬಂದು ನೆಲೆಸಿದ. ಅಲ್ಲಿ ಜಿಲೇಬಿ ಅಂಗಡು ಶುರುಮಾಡಿ ಬದುಕು ಸಾಗಿಸಲಾರಂಭಿಸಿದ್ದ. ಇದೇ ಸಂದರ್ಭದಲ್ಲಿ ಆತನಿಗೆ ಮಾಟಗಾರನೊಬ್ಬನ ಪರಿಚಯವಾಗಿದೆ. ಅದಾಗಿ ಕೆಲ ವರ್ಷ ಆತ ನಿಗೂಢವಾಗಿ ನಾಪತ್ತೆಯಾಗಿದ್ದ. ಬಳಿಕ ಪುನಃ ತೊಹಾನಾಗೆ ಬಂದ ಆತ ಅಲ್ಲಿ ದೇಗುಲ ಕಟ್ಟಿದ. ಹಾಗೆ ಆತ ಜಿಲೇಬಿ ಬಾಬಾ ಆದ. ಕೆಲವರು ಆತನ ಅನುಯಾಯಿಗಳಾದರು. ಅವರಲ್ಲಿ ಹೆಚ್ಚಿನವರು ಮಹಿಳೆಯರು. 2018ರಲ್ಲಿ ಮೊದಲ ಸಲ ಒಬ್ಬ ಅನುಯಾಯಿಯ ಪತ್ನಿ, ಅಮರವೀರ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಆದರೆ ಈ ಕೇಸ್‌ನಲ್ಲಿ ಜಾಮೀನು ಪಡೆಯಲು ಅಮರವೀರ್‌ ಯಶಸ್ವಿಯಾಗಿದ್ದ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement