ಜಗತ್ತಿನ 2ನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದ ಟಿಸಿಎಸ್

ನವದೆಹಲಿ: ಭಾರತೀಯ ಹೆಮ್ಮೆಯ ಸಂಸ್ಥೆ, ಟಿಸಿಎಸ್ ಜಗತ್ತಿನ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ.
ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ 2022ರ ಪ್ರಮುಖ 500 ಐಟಿ ಸೇವಾ ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಇನ್ ಫೋಸಿಸ್ ಕಂಪನಿ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಜಗತ್ತಿನ ಐದು ಪ್ರಮುಖ ಕಂಪನಿಗಳಲ್ಲಿ ಎರಡು ಭಾರತೀಯ ಕಂಪನಿಗಳು ಸ್ಥಾನ ಪಡೆದಿವೆ. 2021ರ ಪಟ್ಟಿಯಲ್ಲಿ ಟಿಸಿಎಸ್ ಮೂರನೇ ಸ್ಥಾನದಲ್ಲಿತ್ತು. ಅಮೆರಿಕ ಮೂಲದ ಕಂಪನಿ ಐಬಿಎಂ 2ನೇ ಸ್ಥಾನದಲ್ಲಿತ್ತು. ಈ ಬಾರಿ ಐಬಿಎಂ ಕಂಪನಿ 4ನೇ ಸ್ಥಾನಕ್ಕೆ ಇಳಿದಿದೆ.
ಕಂಪನಿ ವರದಿ ಪ್ರಕಾರ ಈ ವರ್ಷ ಟಿಸಿಎಸ್ ಕಂಪನಿ ಶೇ. 12.5ರಷ್ಟು (1.844 ಬಿಲಿಯನ್ ಡಾಲರ್) ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಂಡಿದೆ. ಉತ್ತಮ ಹಣಕಾಸು ನಿರ್ವಹಣೆ ಹಾಗೂ ಹೂಡಿಕೆದಾರರ ನಂಬಿಕೆಯೇ ಈ ಪ್ರಗತಿ ಕಾರಣ ಎಂದು ವಿಶ್ಲೇಷಿಸಲಾಗಿದೆ. ಟಿಸಿಎಸ್ ಕಂಪನಿ ಹಲವು ವರ್ಷಗಳಿಂದ ಸ್ಥಿರ ಹಾಗೂ ಉತ್ತಮ ಪ್ರಗತಿಯನ್ನು ದಾಖಲಿಸುತ್ತಲೇ ಬಂದಿದೆ.
ಅಮರಿಕ ಮೂಲಕ ಎಕ್ಸೆಂಚರ್ ಕಂಪನಿ ಮೊದಲ ಸ್ಥಾನದಲ್ಲಿದೆ.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement