ನಿಮ್ಗೆ ‘ಸಹಾ’ ಸಿನಿಮಾ ಇಷ್ಟವಾಗ್ಲಿಲ್ಲ ಅಂದ್ರೆ ಸರ್ಕಲ್‌ನಲ್ಲಿ ತಲೆ ಬೋಳಿಸಿಕೊಳ್ತೇನೆ: ಪ್ರೇಕ್ಷಕರಿಗೆ ನಟಿಯ ಚಾಲೆಂಜ್

ಹೈದರಾಬಾದ್: ‘ಸಹಾ’ (Sahaa) ಚಿತ್ರದ ಬಿಡುಗಡೆಗೆ ಮುನ್ನ ಚಿತ್ರದ ನಾಯಕಿ ನಟಿ ಶ್ವೇತಾ ಲಕ್ಷ್ಮಣನ್‌ ನೀಡಿರುವ ಹೇಳಿಕೆ ಇದೀಗ ಸಿನಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಿತ್ರದ ಗುಣಮಟ್ಟದ ಬಗ್ಗೆ ತಮ್ಮ ಅಪಾರ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುವುದರ ಜೊತೆಗೆ ಪ್ರೇಕ್ಷಕರಿಗೆ ನೇರ ಸವಾಲು ಹಾಕಿದರು.
“ನಮ್ಮ ಸಿನಿಮಾ ನೋಡಿ ನಿಮಗೆ ನಿರಾಶೆಯಾಗಿದೆಯೆಂದು ಅನಿಸಿದರೆ, ನಾನು ಅಮೀರ್‌ಪೇಟ್ ಸೆಂಟರ್‌ನಲ್ಲಿ ನಿಂತು ತಲೆ ಬೋಳಿಸಿಕೊಳ್ಳುತ್ತೇನೆ!” ಎಂದು ಶ್ವೇತಾ ಲಕ್ಷ್ಮಣನ್‌ ಹೇಳಿದ್ದಾರೆ. ಈ ಹೇಳಿಕೆ ಕಾರ್ಯಕ್ರಮದಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಬಜೆಟ್‌ನ ಸಿನಿಮಾಗಳಿಗೆ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡಗಳು ಮತ್ತು ಕಲಾವಿದರು ಹೆಚ್ಚು ಆಕ್ರಮಣಕಾರಿ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿದ್ದು, ಕುತೂಹಲ ಮೂಡಿಸಲು ಹಾಗೂ ಚಿತ್ರದತ್ತ ಜನರ ಗಮನ ಸೆಳೆಯಲು ಇಂತಹ ಹೇಳಿಕೆಗಳನ್ನು ನೀಡುವುದು ಸಾಮಾನ್ಯವಾಗುತ್ತಿದೆ.

‘ಸಹಾ’ ಚಿತ್ರದ ಪರವಾಗಿ ಶ್ವೇತಾ ಲಕ್ಷ್ಮಣನ್‌ ನೀಡಿರುವ ಈ ಹೇಳಿಕೆ ಇತ್ತೀಚಿನ ಪ್ರಚಾರ ತಂತ್ರಗಳಲ್ಲಿ ಅತ್ಯಂತ ಗಮನಾರ್ಹವಾದುದಾಗಿದೆ. ತಮ್ಮನ್ನು ತಾವು ಪಣಕ್ಕೊಡ್ಡುವ ಮೂಲಕ ನಟಿ ಚಿತ್ರದ ಮೇಲೆ ಹೊಂದಿರುವ ತಮ್ಮ ಅಪಾರ ನಂಬಿಕೆಯನ್ನು ಬಹಿರಂಗವಾಗಿ ಪ್ರದರ್ಶಿಸಿದ್ದಾರೆ. ಪ್ರೇಕ್ಷಕರೊಂದಿಗೆ ಸಿನಿಮಾ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಲಿದೆ ಮತ್ತು ಉತ್ತಮ ಪ್ರತಿಕ್ರಿಯೆ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ನಟಿ ಶ್ವೇತಾ ಲಕ್ಷ್ಮಣನ್, ‘ನಮ್ಮ ಬಳಿ ಹಣ ಇರಲಿಲ್ಲ, ಆದರೆ ಸಿನಿಮಾದ ಮೇಲೆ ನಂಬಿಕೆ ಇತ್ತು. ಎಲ್ಲರೂ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ದಯವಿಟ್ಟು ಸಿನಮಾ ನೋಡಿ. ಈ ಸಿನಿಮಾ ಪ್ರೇಕ್ಷಕರಿಗೆ ಖಂಡಿತ ನಿರಾಸೆ ಮಾಡುವುದಿಲ್ಲ ಎಂಬ ಭರವಸೆ ಇದೆ  ಎಂದು ಹೇಳಿದ್ದಾರೆ.

ನೀವು ಚಿತ್ರ ಮಂದಿರಕ್ಕೆ ಹೋಗಿ ಸಿನೆಮಾ ನೋಡಿ ನಿರಾಸೆಗೊಂಡರೆ ನಾನು ಚಾಲೆಂಜ್ ಮಾಡುತ್ತೇನೆ, ಅಮೀರ್ ಪೇಟ್ ಸರ್ಕಲ್​​ನಲ್ಲಿ ನಿಂತು ತಲೆ ಬೋಳಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
.ಚಿತ್ರ ಬಿಡುಗಡೆಯಾದ ಬಳಿಕ ‘ಸಹಾ’ಗೆ ಉತ್ತಮ ಮೌಖಿಕ ಪ್ರಶಂಸೆ (ವರ್ಡ್ ಆಫ್ ಮೌತ್) ದೊರೆತು ಯಶಸ್ಸು ಸಾಧಿಸಿದರೆ, ಶ್ವೇತಾ ಲಕ್ಷ್ಮಣ ಅವರ ಈ ಹೇಳಿಕೆಯನ್ನು ಆತ್ಮವಿಶ್ವಾಸಭರಿತ ಹಾಗೂ ಯಶಸ್ವಿ ಪ್ರಚಾರ ತಂತ್ರವೆಂದು ನೆನಪಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದರೆ ಏನು ಮಾಡುತ್ತಾರೆ..? ಇದು ಅಂತಿಮವಾಗಿ ‘ಸಹಾ’ ಚಿತ್ರಕ್ಕೆ ಪ್ರೇಕ್ಷಕರು ನೀಡುವ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿದೆ.

ಪ್ರಮುಖ ಸುದ್ದಿ :-   ಒಂದೇ ಕುಟುಂಬದ ಐವರು ಸಾವು ; ಹಿಂದಿನ ರಾತ್ರಿ ನೂಡಲ್ಸ್‌ ಸೇವಿಸಿದ್ದ ಕುಟುಂಬ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement