ಸೂಕಿ ಬಂಧನಕ್ಕೆ ಪೊಲೀಸರು ಸಜ್ಜು

ಉಚ್ಚಾಟಿತ ಮಾಯನ್ಮಾರ ಅಧ್ಯಕ್ಷೆ  ಆಂಗ್ ಸಾನ್ ಸೂಕಿ ವಿರುದ್ಧ ಕಾನೂನುಬಾಹಿರವಾಗಿ ಸಂವಹನ ಸಾಧನಗಳನ್ನು ಆಮದು ಮಾಡಿಕೊಂಡ ಕಾರಣ ನೀಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  ಮತ್ತು ತನಿಖೆಗಾಗಿ ಫೆಬ್ರವರಿ 15 ರ ವರೆಗೆ  ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಮ್ಯಾನ್ಮಾರ್‌ನ ಸೈನ್ಯವು ಸೋಮವಾರ ಅಧಿಕಾರವನ್ನುತನ್ನ ವಶಕ್ಕೆ ತೆಗೆದುಕೊಂಡ ನಂತರ ಈ ಬೆಳವಣಿಗೆ ನಡೆದಿದೆ. 75 ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಸೂಕಿ ವಿರುದ್ಧದ ಆರೋಪಗಳನ್ನು  ನ್ಯಾಯಾಲಯಕ್ಕೆ ವಿವರಿಸುವ ಸಂದರ್ಭದಲ್ಲಿ ಪೊಲೀಸರು  ರಾಜಧಾನಿ ನಾಯ್ಪಿಡಾವ್‌ನಲ್ಲಿರುವ ಅವರ ಮನೆಯ ಹುಡುಕಾಟದ ಸಮಯದಲ್ಲಿ  ವಾಕಿ-ಟಾಕಿ ರೇಡಿಯೊಗಳು ಕಂಡುಬಂದಿವೆ. ರೇಡಿಯೊಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಹಾಗೂ ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಹೇಳಿದ್ದಾರೆ.

ದೇಶದ ಪ್ರಜಾಪ್ರಭುತ್ವ ಆಂದೋಲನ   ಮುನ್ನಡೆಸಿದ್ದರಿಂದ ಸೂಕಿ 1989 ಮತ್ತು 2010ರ ನಡುವೆ ಸುಮಾರು 15 ವರ್ಷಗಳ ಗೃಹಬಂಧನದಲ್ಲಿದ್ದರು.   2017 ರಲ್ಲಿ ಮುಸ್ಲಿಂ ರೋಹಿಂಗ್ಯಾ ನಿರಾಶ್ರಿತರನ್ಹಾನು ದೇಶದಿಂದ ಹೊರಹಾಕಿದ್ದಕ್ಕೆ  ಅವರ ಅಂತಾರಾಷ್ಟ್ರೀಯ ಖ್ಯಾತಿಗೆ ಧಕ್ಕೆ ತಂದರೂ ಅವರು ತಮ್ಮ ದೇಶದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ.

ದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement