ಮಹಾರಾಷ್ಟ್ರದ (Maharashtra) ಥಾಣೆಯ ಭಿವಾಂಡಿಯ ದೇನೆನಗರದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಹಿಂಸಾತ್ಮಕ ಜಗಳದ ವೇಳೆ ಮನೆಯ ಛಾವಣಿ ಕುಸಿದು ಬಿದ್ದಿದೆ. ಈ ವೇಳೆ ಮೇಲಿನ ಮಹಡಿಯಿಂದ ಕೆಳಗಿನ ಮಹಡಿಗೆ ಕೆಲವರು ಉರುಳಿಬಿದ್ದಿದ್ದು, ಅವರಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ..
ಸಣ್ಣ ಕಾರಣಕ್ಕೆ ದೊಡ್ಡ ಜಗಳ ನಡೆದ ನಂತರ ಈ ಆಘಾತಕಾರಿ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ವೈರಲ್ ದೃಶ್ಯಗಳಲ್ಲಿ, ವಸತಿ ಕಟ್ಟಡದ ಮೇಲ್ಛಾವಣಿಯ ಮೇಲೆ ಸುಮಾರು 8 ರಿಂದ 10 ಜನರು ಹೊಡೆದಾಟದಲ್ಲಿ ತೊಡಗಿರುವುದನ್ನು ಕಾಣಬಹುದು. ಕೂಗುವುದು, ತಳ್ಳುವುದು ಮತ್ತು ಹೊಡೆದಾಡುವುದುನಡೆದಿತ್ತು. ಪುರುಷರು ಮತ್ತು ಮಹಿಳೆಯರು ಸಕ್ರಿಯವಾಗಿ ಜಗಳದಲ್ಲಿ ತೊಡಗಿಕೊಂಡಿದ್ದರು.
ಇದ್ದಕ್ಕಿದ್ದಂತೆ, ಸಂಪೂರ್ಣವಾಗಿ ಅನಿರೀಕ್ಷಿತ ಕ್ಷಣದಲ್ಲಿ, ಮೇಲ್ಛಾವಣಿಗೆ ಈ ಜಗಳವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅದು ಒಮ್ಮೆಲೇ ಕುಸಿದಿದೆ. ಅದರೊಟ್ಟಿಗೆ ಹಲವಾರು ಜನರು ಕೆಳಗೆ ಉರುಳಿ ಬಿದ್ದಿದ್ದಾರೆ. ಈ ಘಟನೆಯಿಂದ ಜಗಳವಾಡುತ್ತಿದ್ದ ಅಕ್ಕಪಕ್ಕದವರು ದಿಗ್ಭ್ರಮೆಗೊಂಡಿದ್ದಾರೆ.
ಘಟನೆಯ ನಂತರ, ಎರಡೂ ಕುಟುಂಬಗಳ ಸದಸ್ಯರು ಮೇಲ್ಛಾವಣಿ ಕುಸಿತದಿಂದ ಉಂಟಾದ ಹಾನಿಗಾಗಿ ಮನೆ ಮಾಲೀಕರಿಗೆ ಅದರ ನಷ್ಟ ನೀಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಎರಡೂ ಕುಟುಂಬಗಳು ಪರಸ್ಪರರ ವಿರುದ್ಧ ದೂರು ನೀಡಿದ್ದು, ಅಧಿಕಾರಿಗಳು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ