ಮಥುರಾದಲ್ಲಿ ಭವ್ಯ ಕೃಷ್ಣ ದೇವಾಲಯ ನಿರ್ಮಾಣ ಆಗುವವರೆಗೆ ದಿನಕ್ಕೆ ಒಂದೇ ಊಟ ಮಾಡುವ ಪ್ರತಿಜ್ಞೆ ಮಾಡಿದ ರಾಜಸ್ಥಾನದ ಸಚಿವ…!

ನವದೆಹಲಿ : ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ ಭವ್ಯ ಮಂದಿರ ನಿರ್ಮಾಣ ಆಗುವವರೆಗೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುವುದಾಗಿ ರಾಜಸ್ಥಾನದ ಶಿಕ್ಷಣ ಸಚಿವ ಮದನ ದಿಲಾವರ್ ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ.
“ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸದಿದ್ದರೆ, ಇಂದಿನಿಂದ ನಾನು ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತೇನೆ” ಎಂದು ದಿಲಾವರ್ ಕೋಟಾದ ತಮ್ಮ ಕ್ಷೇತ್ರವಾದ ರಾಮಗಂಜ್ ಮಂಡಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿದರು.
ದಿಲಾವರ್ ಅವರು ತಮ್ಮ ಭಾಷಣದಲ್ಲಿ, ಈಗ ರಾಜ್ಯದ ಕ್ಯಾಬಿನೆಟ್ ಸಚಿವರಾಗಿರುವ ಡಾ.ಕಿರೋರಿಲಾಲ ಮೀನಾ ಮತ್ತು ನೂರಾರು ಕರಸೇವಕರು ಅಯೋಧ್ಯೆಯಲ್ಲಿ 1992 ರಲ್ಲಿ ತಮ್ಮ ಸಹೋದ್ಯೋಗಿಗಳ ಅಕ್ರಮ ಬಂಧನ ಹಾಗೂ ಅವರ ವಿರುದ್ಧ ಕೊಲೆ ಆರೋಪ ರಚಿಸಿದ್ದರ ವಿರುದ್ಧ ಹೇಗೆ ಪ್ರತಿಭಟನೆ ನಡೆಸಿದರು ಎಂಬುದನ್ನು ನೆನಪಿಸಿಕೊಂಡರು.

ಆರು ಬಾರಿ ಶಾಸಕರಾಗಿ ಮತ್ತು ಮೂರು ಬಾರಿ ಸಚಿವರಾಗಿದ್ದ ದಿಲಾವರ್ ಅವರು ಫೆಬ್ರವರಿ 1990 ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವವರೆಗೆ ತಾನು ಹೂಮಾಲೆ ಸ್ವೀಕರಿಸುವುದಿಲ್ಲ ಅಥವಾ ಹೂಮಾಲೆ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು ಎಂಬುದು ಗನಾರ್ಹವಾಗಿದೆ.
ಸೋಮವಾರ, ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಮುಗಿದ ನಂತರ, ಅವರ ಬೆಂಬಲಿಗರು ಅವರಿಗೆ 34 ಕೆಜಿ ಹಾರವನ್ನು ಮತ್ತು ಇನ್ನೊಂದು 108 ಅಡಿ ಉದ್ದದ ಹಾರವನ್ನು ಅರ್ಪಿಸಿದರು. ಆದರೆ ಜನವರಿ 31 ರಂದು ಅಯೋಧ್ಯೆಯ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಅದನ್ನು ಧರಿಸುವುದಾಗಿ ಹೇಳಿ ದಿಲಾವರ್ ಅದನ್ನು ಸ್ವೀಕರಿಸಲು ನಿರಾಕರಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಹುಲಿ-ಕರಡಿ ಮಧ್ಯೆ "ಅಪರೂಪದ" ಮುಖಾಮುಖಿ; ಆಕ್ರಮಣಕಾರಿ ಕರಡಿಗೆ ಹುಲಿಯ ತಣ್ಣನೆಯ ಉತ್ತರ | ವೀಕ್ಷಿಸಿ

ಫೆಬ್ರವರಿ 1990 ರಲ್ಲಿ, ದಿಲ್ವಾರ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ನೇ ವಿಧಿಯನ್ನು ರದ್ದುಪಡಿಸುವವರೆಗೂ ಹಾಸಿಗೆಯಲ್ಲಿ ಮಲಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. 2019 ರಲ್ಲಿ ವಿವಾದಾತ್ಮಕ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವವರೆಗೆ, ಅವರು ಚಾಪೆಯ ಮೇಲೆ ಮಲಗುತ್ತಿದ್ದರು ಎಂದು ಹೇಳಲಾಗುತ್ತದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement