ವೀಡಿಯೊ | ಬೆಂಗಳೂರು : ಆಭರಣ ಅಂಗಡಿಗೆ ನುಗ್ಗಿ ಗನ್ ತೋರಿಸಿ ಚಿನ್ನಾಭರಣ ಲೂಟಿ

ಬೆಂಗಳೂರು: ಬೆಂಗಳೂರಿನ ಹೊರವಲಯದ ನೆಲಮಂಗಲದಲ್ಲಿರುವ ಆಭರಣ ಅಂಗಡಿಯಲ್ಲಿ ಮಂಗಳವಾರ ಶಸ್ತ್ರಸಜ್ಜಿತ ದರೋಡೆಕೋರರು ಹಗಲು ಹೊತ್ತಿನಲ್ಲಿ ದರೋಡೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಬಳಿಯ ದಾಸನಪುರದಲ್ಲಿರುವ ರಾಮದೇವ ಜ್ಯುವೆಲ್ಲರಿಯಲ್ಲಿ ಸಂಜೆ ಸುಮಾರು 5:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಅಂಗಡಿಗೆ ಬರುತ್ತಿರುವುದು ಕಂಡುಬಂದಿದೆ. ಒಳಗೆ ಹೋದ ನಂತರ, ಅವರು ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ.

ಆರೋಪಿಗಳು ಗ್ರಾಹಕರಂತೆ ನಟಿಸಿ ನಿರ್ದಿಷ್ಟ ಕಿವಿಯೋಲೆ ವಿನ್ಯಾಸಗಳನ್ನು ತೋರಿಸಲು ಕೇಳಿದ್ದು, ಸಿಬ್ಬಂದಿ ಅವರು ಕೇಳಿದ ವಿನ್ಯಾಸಗಳ ಆಭರಣ ಲಭ್ಯವಿಲ್ಲ ಎಂದು ತಿಳಿಸಿದಾಗ, ಅವರು ಪಿಸ್ತೂಲ್ ಹೊರತೆಗೆದು, ಸಿಬ್ಬಂದಿಯನ್ನು ಬೆದರಿಸಿ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ – ಅವರ ಮುಖಗಳನ್ನು ಪರಚಿ, ಅವರು ಬೇರೆಯವರಿಗೆ ಈ ಬಗ್ಗೆ ಎಚ್ಚರಿಕೆ ನೀಡದಂತೆ ಅವರ ಬಾಯಿ ಮುಚ್ಚಿದ್ದಾರೆ.
ಶಂಕಿತರು ಸ್ಥಳದಿಂದ ಪರಾರಿಯಾಗುವ ಮೊದಲು ಸುಮಾರು 30 ಗ್ರಾಂ ಚಿನ್ನಾಭರಣ ಮತ್ತು 50,000 ರೂ. ನಗದನ್ನು ದೋಚಿದ್ದಾರೆ ಎಂದು ಹೇಳಲಾಗಿದೆ.

ದರೋಡೆ ನಡೆದ ಸಮಯದಲ್ಲಿ, ಅಂಗಡಿಯ ಮಾಲೀಕ ಅವರ ಇಬ್ಬರು ಮಕ್ಕಳು ಅಂಗಡಿಯನ್ನು ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಹತ್ತಿರದ ಅಂಗಡಿಯಲ್ಲಿದ್ದ ಮಾಲೀಕರ ಪತ್ನಿ ತಮ್ಮ ಮಕ್ಕಳ ಕಿರುಚಾಟ ಕೇಳಿ ಅಂಗಡಿಯ ಆವರಣಕ್ಕೆ ಧಾವಿಸಿದರು, ಆದರೆ ದರೋಡೆಕೋರರು ಆಗಲೇ ಪರಾರಿಯಾಗಿದ್ದರು ಎನ್ನಲಾಗಿದೆ.
ಘಟನೆಯ ನಂತರ, ಪೊಲೀಸರು ಪರಿಶೀಲನೆ ನಡೆಸಲು ಸ್ಥಳಕ್ಕೆ ಧಾವಿಸಿದರು. ಪೊಲೀಸರು ದರೋಡೆ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಆರೋಪಿಗಳನ್ನು ಗುರುತಿಸಲು ಮತ್ತು ಹಿಡಿಯಲು ಜಾಲ ಬೀಸಿದ್ದಾರೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement