ಕಾಣೆಯಾಗಿದ್ದ ಮೂವರು ಅಕ್ಕತಂಗಿಯರ ಮೃತದೇಹಗಳು ಕಬ್ಬಿಣದ ಪೆಟ್ಟಿಗೆಯೊಳಗೆ ಪತ್ತೆ

ಚಂಡೀಗಢ: ಪಂಜಾಬಿನ ಜಲಂಧರ್ ಜಿಲ್ಲೆಯ ಕಾನ್ಪುರ ಗ್ರಾಮದಲ್ಲಿ ಮೂವರು ಸಹೋದರಿಯರು ತಮ್ಮ ಮನೆಯಲ್ಲಿ ಟ್ರಂಕ್‌ನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮೂವರು ಹುಡುಗಿಯರು ತಮ್ಮ  ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬಾರದೆ ಇದ್ದಾಗ ಅವರ ತಂದೆ-ತಾಯಿ ಮಕ್ಸೂದನ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಲಸೆ ಕಾರ್ಮಿಕರ ಕುಟುಂಬದಲ್ಲಿ ಐದು ಮಕ್ಕಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಸಹೋದರಿಯರನ್ನು 4 ವರ್ಷದ ಕಾಂಚನ, 7 ವರ್ಷದ ಶಕ್ತಿ ಮತ್ತು 9 ವರ್ಷದ ಅಮೃತ ಎಂದು ಗುರುತಿಸಲಾಗಿದೆ. ಸಾವಿನ ಕಾರಣವನ್ನು ತಿಳಿಯಲು ಮೂರು ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯರ ತಂದೆ ಸೋಮವಾರ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಮಾಮೂಲಿಗಿಂತ ಭಾರವಾಗಿರುವುದನ್ನು ಕಂಡು ಅಚ್ಚರಿಯಾಗಿದೆ. ನಂತರ ಟ್ರಂಕ್‌ ತೆರೆದಾಗ ತನ್ನ ಮೂವರು ಸಹೋದರಿಯರು ಟ್ರಂಕ್‌ ಒಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ತಂದೆಗೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೃತ ಬಾಲಕಿಯರ ತಂದೆ ಇತ್ತೀಚೆಗೆ ತನ್ನ ಕುಡಿತದ ಚಟದಿಂದ ಮನೆಯನ್ನು ಖಾಲಿ ಮಾಡುವಂತೆ ಆತನ ಮಾಲೀಕನಿಂದ ಎಚ್ಚರಿಕೆ ಪಡೆದಿದ್ದ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಯುದ್ಧ ನಿಲ್ಲಿಸುವಂತೆ ಅಮೆರಿಕಕ್ಕೆ ಪಾಕಿಸ್ತಾನ ಗೋಗರೆದಿದ್ದೇಕೆ..? ಭಾರತದ ಬ್ರಹ್ಮೋಸ್‌ ಶಕ್ತಿಗೆ ಪಾಕ್‌ ಪರಮಾಣು ಶಸ್ತ್ರಾಗಾರದ ಬಳಿಯ ಮಿಲಿಟರಿ ನೆಲೆಗಳು ಧ್ವಂಸ ; ಪಾಕ್‌ ಕಂಗಾಲು...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement