ಸಂಜಯ ಸಾರೋಗಿ ಬಿಹಾರದ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ

ಪಾಟ್ನಾ: ದರ್ಭಾಂಗಾದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾದ ಸಂಜಯ ಸಾರೋಗಿ ಅವರನ್ನು ಸೋಮವಾರ ಬಿಹಾರದ ನೂತನ ಬಿಜೆಪಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಅವರು ಈಗಿನ ರಾಜ್ಯಾಧ್ಯಕ್ಷ ಮುಖ್ಯಸ್ಥ ದಿಲೀಪಕುಮಾರ ಜೈಸ್ವಾಲ್ ಅವರ ಸ್ಥಾನವನ್ನು ತುಂಬಲಿದ್ದಾರೆ.
ಸಂಜಯ ಸಾರೋಗಿ ಅವರು ಫೆಬ್ರವರಿ 2005, ಅಕ್ಟೋಬರ್ 2005, 2010, 2015, 2020 ಮತ್ತು 2025 ರಂದು ನಡೆದ ಸತತ ಆರು ವಿಧಾನಸಭಾ ಚುನಾವಣೆಗಳಲ್ಲಿ ದರ್ಭಾಂಗಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಸಾರೋಗಿ ಅವರು ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿ (VIP) ಅಭ್ಯರ್ಥಿ ಉಮೇಶ ಸಹಾನಿ ಅವರನ್ನು 24,593 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಾರೋಗಿ ಅವರು ಫೆಬ್ರವರಿ 2005 ರಲ್ಲಿ ಮೊದಲ ಬಾರಿಗೆ ಬಿಹಾರ ವಿಧಾನಸಭೆಗೆ ಪ್ರವೇಶಿಸಿದರು. ಆ ಸಮಯದಲ್ಲಿ ಅವರು ರಾಷ್ಟ್ರೀಯ ಜನತಾ ದಳ (RJD) ಅಭ್ಯರ್ಥಿ ಮೊಹಮ್ಮದ್ ಮುಮ್ತಾಜ್ ಅವರನ್ನು 14,188 ಮತಗಳ ಅಂತರದಿಂದ ಸೋಲಿಸಿ ದರ್ಭಾಂಗಾ ಸ್ಥಾನವನ್ನು ಗೆದ್ದರು.

ಅಕ್ಟೋಬರ್ 2005 ರಲ್ಲಿ, ಅವರು ಕಾಂಗ್ರೆಸ್ ಅಭ್ಯರ್ಥಿ ಡಾ. ಮದನಮೋಹನ ಝಾ ಅವರನ್ನು 24,983 ಮತಗಳ ಅಂತರದಿಂದ ಸೋಲಿಸಿ ಅದೇ ಕ್ಷೇತ್ರವನ್ನು ಉಳಿಸಿಕೊಂಡರು.
ಸಂಜಯಸಾರೋಗಿ ಅವರು 2010, 2015 ಮತ್ತು 2020 ರಲ್ಲೂ ಮತ್ತೆ ಸ್ಥಾನವನ್ನು ಗೆದ್ದರು. 2010 ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ, ಅವರು ಆರ್‌ಜೆಡಿ ಪಕ್ಷದ ಸುಲ್ತಾನ್ ಅಹ್ಮದ್ ಅವರನ್ನು 27,554 ಮತಗಳ ಅಂತರದಿಂದ ಸೋಲಿಸಿದರು. 2015 ಮತ್ತು 2020 ರಲ್ಲಿ ಕ್ರಮವಾಗಿ ಆರ್‌ಜೆಡಿ ಅಭ್ಯರ್ಥಿಗಳಾದ ಓಂ ಪ್ರಕಾಶ್ ಖೇರಿಯಾ ಮತ್ತು ಅಮರನಾಥ ಗಮಿ ಅವರನ್ನು ಸೋಲಿಸಿ ಅವರು ಮತ್ತೊಮ್ಮೆ ವಿಜಯ ಸಾಧಿಸಿದರು.
ಅವರು ನಿತೀಶಕುಮಾರ ಅವರ ಸಂಪುಟದಲ್ಲಿ ಕಂದಾಯ ಮತ್ತು ಭೂ ಸುಧಾರಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಚ್ಛ ವ್ಯಕ್ತಿತ್ವ ಮತ್ತು ಸಂಘಟನಾ ಸಾಮರ್ಥ್ಯಗಳಿಂದಾಗಿ, ಪಕ್ಷದ ನಾಯಕತ್ವವು ಬಿಹಾರದ ಬಿಜೆಪಿ ಮುಖ್ಯಸ್ಥರಂತಹ ಮಹತ್ವದ ಜವಾಬ್ದಾರಿಯನ್ನು ಅವರಿಗೆ ವಹಿಸಿದೆ

ಪ್ರಮುಖ ಸುದ್ದಿ :-   ಸಿಜೆಪಿ ನಾಯಕರ ಜೊತೆ ಸೌಹಾರ್ದಯುತ ಮಾತುಕತೆ ಬಳಿಕ ಧರಣಿ ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರದ ಮನವಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement