ದೆಹಲಿ ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಮಾರ್ಚ್‌ 28ರವರೆಗೆ ಇ.ಡಿ. ಕಸ್ಟಡಿಗೆ ನೀಡಿದ ಕೋರ್ಟ್‌

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ದೆಹಲಿಯ ವಿಶೇಷ ನ್ಯಾಯಾಲಯವು ಮಾರ್ಚ್‌ 28ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಶುಕ್ರವಾರ ನೀಡಿದೆ.
ಜಾರಿ ನಿರ್ದೇಶನಾಲಯ ಮತ್ತು ಕೇಜ್ರಿವಾಲ್‌ ಪರ ವಕೀಲರ ವಿಸ್ತೃತ ವಾದ ಆಲಿಸಿದ ರೋಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಕಸ್ಟಡಿ ಆದೇಶ ಮಾಡಿದರು.
ಅಬಕಾರಿ ನೀತಿ ರೂಪಿಸುವ ವಿಚಾರದಲ್ಲಿ ಕೇಜ್ರಿವಾಲ್‌ ಅವರು ನೇರವಾಗಿ ಭಾಗಿಯಾಗಿದ್ದು, ಪ್ರಮುಖ ಸಂಚುಕೋರರಾಗಿದ್ದಾರೆ. ಹೀಗಾಗಿ, ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದ್ದು, ಹತ್ತು ದಿನ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ ಕೋರಿತ್ತು.

ಜಾರಿ ನಿರ್ದೇಶನಾಲಯದ ಪರವಾಗಿ ವಾದಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಮುಖ್ಯಮಂತ್ರಿಯಾಗಿ ಅರವಿಂದ್‌ ಕೇಜ್ರಿವಾಲ್‌ ಪಿತೂರಿಯ ಪ್ರಮುಖ ಸಂಚುಕೋರರಾಗಿದ್ದು, ಅಬಕಾರಿ ನೀತಿ ರೂಪಿಸುವುದರಲ್ಲಿ ಕೇಜ್ರಿವಾಲ್‌ ಭಾಗಿಯಾಗಿದ್ದಾರೆ. ಕೇಜ್ರಿವಾಲ್‌ ಉದ್ದೇಶಪೂರ್ವಕವಾಗಿ ಸಮನ್ಸ್‌ಗಳಿಗೆ ಉತ್ತರಿಸಿಲ್ಲ. ಪರಿಶೀಲನೆಯ ಸಂದರ್ಭದಲ್ಲಿ ಅವರು ವಾಸ್ತವ ಸಂಗತಿಗಳನ್ನು ಹೇಳಿಲ್ಲ ಹಾಗೂ ತನಿಖೆಗೆ ಸಹಕರಿಸುತ್ತಿರಲಿಲ್ಲ. ನಾವು ಅವರನ್ನು ತನಿಖೆಗೆ ಒಳಪಡಿಸಿ, ಮಾಹಿತಿ ಪಡೆಯಬೇಕಿದೆ. ವಂಚನೆ ನಡೆದಿದೆ ಎಂದು ತೋರಿಸಲು ನಿಶ್ಚಿತ ಸಾಕ್ಷ್ಯವಿದೆ. ಆಪ್‌ನ ಗೋವಾ ವಿಧಾನಸಭಾ ಚುನಾವಣೆಗೆ ನಿಧಿ ಸಂಗ್ರಹಕ್ಕಾಗಿ ಅಬಕಾರಿ ನೀತಿ ಬದಲಾಯಿಸಲಾಗಿದೆ” ಎಂದು ವಾದಿಸಿದರು.

ಪ್ರಮುಖ ಸುದ್ದಿ :-   ಆಘಾತಕಾರಿ...| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ...!

ಇದಕ್ಕೆ ಆಕ್ಷೇಪಿಸಿದ್ದ ಕೇಜ್ರಿವಾಲ್‌ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ಈಗ ಹೊಸ ಮಾದರಿಯನ್ನು (ಇ ಡಿ ತನಿಖೆ) ಅನುಸರಿಸಲಾಗುತ್ತಿದೆ. ನಿಮ್ಮ ಬಳಿ (ಇ ಡಿ ) ಒಬ್ಬ ಸಾಕ್ಷಿ ಇದ್ದಾನೆ, ಆತ ಮೊದಲನೇ ಅಥವಾ ಎರಡನೇ ಹೇಳಿಕೆಯಲ್ಲಿ ಕೇಜ್ರಿವಾಲ್‌ ಹೆಸರು ಉಲ್ಲೇಖಿಸಿಲ್ಲ. ಆನಂತರ ಆತನನ್ನು ಬಂಧಿಸಿ ಜಾಮೀನು ಸಿಗದಂತೆ ಸತಾಯಿಸಲಾಗುತ್ತದೆ. ಆನಂತರ ಅದೇ ಸಾಕ್ಷಿಯು ಮಾಫಿ ಸಾಕ್ಷಿ ಮಾಡಲಾಗುತ್ತದೆ. ನಂತರ ಆತ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಿದ್ದೇನೆ ಇತ್ಯಾದಿ ಹೇಳುತ್ತಾನೆ.. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ನೇರ ಸಾಕ್ಷಿ ಇಲ್ಲ. ಆಮ್‌ ಆದ್ಮಿ ಪಕ್ಷದ ನಾಲ್ವರು ಹಿರಿಯ ನಾಯಕರನ್ನು ಬಂಧಿಸಲಾಗಿದೆ. ಪ್ರಜಾಪ್ರಭುತ್ವವು ಸಂವಿಧಾನದ ಮೂಲ ರಚನೆಯಾಗಿದ್ದು, ಇದಕ್ಕೆ ಆತಂಕ ಎದುರಾಗಿದೆ. ಅಸಮಾನವಾದ ವೇದಿಕೆ ಸೃಷ್ಟಿಸಲಾಗಿದೆ” ಎಂದು ಆಪಾದಿಸಿದರು.
ಕೇಜ್ರಿವಾಲ್‌ ಅವರನ್ನು ಪ್ರತಿನಿಧಿಸಿದ್ದ ಮತ್ತೊಬ್ಬ ಹಿರಿಯ ವಕೀಲ ವಿಕ್ರಮ ಚೌಧರಿ ಅವರು “ಜಾರಿ ನಿರ್ದೇಶನಾಲಯ ಸೂಕ್ತ ಸಾಕ್ಷ್ಯಾಧಾರ ಇದೆ ಎಂದು ಹೇಳುತ್ತಿದೆ. ಹೀಗಿದ್ದಾಗ ನೀತಿ ಸಂಹಿತೆ ಜಾರಿಗೆ ಬರುವವರೆಗೆ ಏತಕ್ಕಾಗಿ ಕಾಯಲಾಯಿತು? ಇದಕ್ಕಾಗಿ ಜಾರಿ ನಿರ್ದೇಶನಾಲಯ ಕಾಯುತಿತ್ತೆ? ಚುನಾವಣೆಯಲ್ಲಿ ಭಾಗವಹಿಸುವ ಹಕ್ಕು ರಾಜಕಾರಣಿಯ ಹಕ್ಕಾಗಿದೆ. ಜಾರಿ ನಿರ್ದೇಶನಾಲಯವು ತನ್ನ ಮುಖವಾಡ ಕಳಚಿ, ತಾನು ಯಾರನ್ನು ಪ್ರತಿನಿಧಿಸುತ್ತೇನೆ ಎಂಬುದನ್ನು ತೋರಿಸಬೇಕು” ಎಂದು ವಾದಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement