ಭಾರತದಲ್ಲಿ ಎರಡನೇ ದಿನವೂ ದೈನಂದಿನ ಕೊರೊನಾ ಪ್ರಕರಣ ತುಸು ಇಳಿಕೆ

ನವ ದೆಹಲಿ: ದೇಶದಲ್ಲಿ ಎರಡನೇ ಅಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ಕಳೆದ 24 (ಮಂಗಳವಾರ) 56,211 ಹೊಸ ಕೊರೊನಾ ಸೋಂಕುಗಳು ಪತ್ತೆಯಾಗಿವೆ.ಒಂದೇ ದಿನ ಕೊರೊನಾ ಸೋಂಕಿಗೆ 271 ಜನರು ಮೃತಪಟ್ಟಿದ್ದಾರೆ.
37,028 ಜನ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೊರೊನಾ ಸೋಂಕು ಪೀಡಿತರಾದವರ ಸಂಖ್ಯೆ 1,20,95,855ಕ್ಕೆ ಏರಿಕೆ ಆಗಿದೆ.‌ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,62,114ಕ್ಕೆ ಏರಿಕೆ ಆಗಿದೆ.ಈವರೆಗೆ ದೇಶಾದ್ಯಂತ ಒಟ್ಟು 6,11,13,354 ಜನರಿಗೆ ಲಸಿಕೆ ಹಾಕಲಾಗಿದೆ. ಈಗ 45 ವರ್ಷದ ಮೇಲಿನ ಎಲ್ಲರಿಗೂ ಕೊರೋನಾ ಲಸಿಕೆ ಹಾಕಲು ನಿರ್ಧರಿಸಲಾಗಿದೆ‌.
ದೇಶದ ಒಟ್ಟು ಕೊರೊನಾ ಸೋಂಕು ಪೀಡಿತರ ಪೈಕಿ ಶೇಕಡಾ 81.46ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಛತ್ತೀಸ್​ಗಢ ಮತ್ತು ಪಂಜಾಬ್‌ ಈ ಏಳು ರಾಜ್ಯಗಳಲ್ಲಿ ಕಂಡುಬರುತ್ತಿದೆ. ಈ ಪೈಕಿ ಮಹಾರಾಷ್ಟ್ರಶೇ.60ಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ.
ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚು ಕಂಡುಬರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿಯೇ ಶೇ.ಶೇ.60ಕ್ಕೂಹೆಚ್ಚು ಕೊರೊನಾ ಪ್ರಕರಣಗಳು ಕಂಡುಬರುತ್ತಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement