ಕಾರವಾರ : ಅಂಜದೀವ್ ಸಮೀಪ ಬೋಟ್ ಮುಳುಗಡೆ ; 24 ಮೀನುಗಾರರು ಬಚಾವ್‌

ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗುತ್ತಿದ್ದ ಬೋಟ್‌ನಿಂದ 24  ಮೀನುಗಾರರನ್ನು ರಕ್ಷಿಸಿದ ವಿದ್ಯಮಾನ ಕಾರವಾರ ಸಮೀಪದ ಅಂಜದೀವ್ ದ್ವೀಪದಲ್ಲಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ.
 ಬೋಟ್‌ ಮುಳುಗುತ್ತಿರುವ ಮಾಹಿತಿ ಸಿಕ್ಕ ತಕ್ಷಣ ಸಮೀಪದಲ್ಲಿದ್ದ ಇತರೆ ಬೋಟ್‌ಗಳು ಧಾವಿಸಿ ಬಂದು ಅದರಲ್ಲಿದ್ದ ಮೀನುಗಾರರನ್ನು ರಕ್ಷಿಸಿವೆ.
ಬೆಳ್ಳಂಬಾರ ಮೂಲದ ನೀಲಕಂಠ ಖಾರ್ವಿ ಎಂಬವರಿಗೆ ಸೇರಿದ ‘ಶ್ರೀ ಮಾತಾ’ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ವಿಷಯ ತಿಳಿದ ತಕ್ಷಣ ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್‌ಗಳು ಸ್ಥಳಕ್ಕೆ ಧಾವಿಸಿದವು.  ಬೋಟ್‌ನಲ್ಲಿದ್ದ ಎಲ್ಲಾ 24 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.
ಮುಳುಗಡೆಯಾಗುತ್ತಿದ್ದ ಬೋಟ್‌ನ್ನು ಉಳಿಸಿಕೊಳ್ಳಲು ಇತರೆ ಬೋಟ್‌ಗಳಿಗೆ ಹಗ್ಗ ಕಟ್ಟಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಅವಘಡದಿಂದ ಅಪಾರ ನಷ್ಟ ಸಂಭಸಿದೆ ಎನ್ನಲಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 3ರ ವರೆಗೆ ಮಳೆ : ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement