ದೀರ್ಘಕಾಲದ ಕೋವಿಡ್‌-19 ರೋಗಿಗಳಲ್ಲಿ 200ಕ್ಕೂ ಹೆಚ್ಚು ರೋಗಲಕ್ಷಣಗಳು..!: ಅಂತಾರಾಷ್ಟ್ರೀಯ ಅಧ್ಯಯನದಲ್ಲಿ ಕಂಡುಬಂದ ಅಂಶ..!!

ಅತಿದೊಡ್ಡ ಅಂತಾರಾಷ್ಟ್ರೀಯ ಅಧ್ಯಯನ ಎಂದು ಕರೆಯಲ್ಪಡುವ ಕೋವಿಡ್‌-19 “ಲಾಂಗ್-ಹೌಲರ್ಸ್” ಗುರುವಾರ ಪ್ರಕಟ ಮಾಡಿದ ವರದಿಯಲ್ಲಿ  ಕೋವಿಡ್‌ ಸೋಂಕಿನ ತೊಂದರೆಯನ್ನು ದೀರ್ಘಕಾಲದ ವರೆಗೆ ಅನುಭವಿಸಿದ ರೋಗಿಗಳ 10 ಅಂಗಂಗಾಳ ವ್ಯವಸ್ಥೆಗಳಲ್ಲಿ 200 ಕ್ಕೂ ಹೆಚ್ಚು ರೋಗಲಕ್ಷಣಗಳು ಕಂಡುಬಂದಿದೆ ಎಂದು ಅಂತಾರಾಷ್ಟ್ರೀಯ ಅಧ್ಯಯನ ವರದಿ ಮಾಡಿದೆ.
ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ವಿಜ್ಞಾನಿಗಳ ನೇತೃತ್ವದಲ್ಲಿ, ರೋಗಿಯ ನೇತೃತ್ವದ ಸಂಶೋಧನೆ (a patient-led research collaborative) ಸಹಯೋಗದೊಂದಿಗೆ‌ ನಡೆದ, ಅಧ್ಯಯನವು ದೀರ್ಘಕಾಲೀನ ಕೋವಿಡ್‌ ಪ್ರಭಾವದ ಸಾಮಾನ್ಯ ಲಕ್ಷಣಗಳಾದ ಆಯಾಸ, ಪರಿಶ್ರಮದ ನಂತರದ ಅಸ್ವಸ್ಥತೆ (ದೈಹಿಕ ಅಥವಾ ಮಾನಸಿಕ ಪರಿಶ್ರಮದ ನಂತರ ಉಲ್ಬಣಗೊಳ್ಳುವ ಲಕ್ಷಣಗಳು) ಮತ್ತು ಅರಿವಿನ ಕ್ರಿಯೆ ಅಡೆತಡೆಗಳು ಎಲ್ಲವನ್ನೂ ಒಟ್ಟುಗೂಡಿಸಿ ಸಾಮಾನ್ಯವಾಗಿ ಮೆದುಳಿನ ಮಂಜು ಎಂದು ಕರೆಯಲಾಗುತ್ತದೆ. ಹಾಗೂ ಭ್ರಮೆಗಳು, ನಡುಕ, ತುರಿಕೆ ಚರ್ಮ, ಮುಟ್ಟಿನ ಚಕ್ರ ಬದಲಾವಣೆಗಳು, ಲೈಂಗಿಕ ಅಪಸಾಮಾನ್ಯ ಕ್ರಿಯೆ, ಹೃದಯ ಬಡಿತ, ಗಾಳಿಗುಳ್ಳೆಯ ನಿಯಂತ್ರಣ ಸಮಸ್ಯೆಗಳು, ಶಿಂಗಲ್ಸ್, ಮೆಮೋರಿ ನಷ್ಟ, ದೃಷ್ಟಿ ಮಂದವಾಗುವುದು, ಅತಿಸಾರ ಮತ್ತು ಟಿನ್ನಿಟಸ್‌ ನಂತಹ ವಿವಿಧ ರೋಗಲಕ್ಷಣಗಳು ಕೋವಿಡ್‌-19ನಿಂದ ಉಂಟಾಗುತ್ತದೆ ಎಂದು ಅಧ್ಯಯನ ವರದಿ ಮಾಡಿದೆ.
ದೀರ್ಘಕಾಲೀನ ಕೋವಿಡ್‌ ಸೋಂಕಿನ ಬಗ್ಗೆ ಸಾಕಷ್ಟು ಸಾರ್ವಜನಿಕ ಚರ್ಚೆಗಳು ನಡೆದಿದೆ ಹಾಗೂ ಈ ಸಾರ್ವಜನಿಕ ಚರ್ಚೆಗಳನ್ನು ಕುರಿತು ಕೆಲವು ವ್ಯವಸ್ಥಿತ ಅಧ್ಯಯನಗಳು ನಡೆಯುತ್ತಿವೆ. ಕೋವಿಡ್‌ ರೋಗಲಕ್ಷಣಗಳ ವ್ಯಾಪ್ತಿ ಮತ್ತು ಸಮಯ, ತೀವ್ರತೆ ಮತ್ತು ನಿರೀಕ್ಷಿತ ಕ್ಲಿನಿಕಲ್ ಪ್ರಕ್ರಿಯೆಗಳ ಪ್ರಗತಿ ದೈನಂದಿನ ಕಾರ್ಯವೈಖರಿ ಮತ್ತು ನಿರೀಕ್ಷಿತ ಬೇಸ್‌ಲೈನ್ ಆರೋಗ್ಯ ಚೇತರಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ನಡೆಸಲಾಗುತ್ತದೆ ಎಂದು “ಲಂಡನ್‌ನ ಯೂನಿವರ್ಸಿಟಿ ಕಾಲೇಜಿನ ಸೈನ್ಸ್‌ಬರಿ ವೆಲ್‌ಕಮ್ ಸೆಂಟರ್‌ನ ನರವಿಜ್ಞಾನಿ, ದಿ ಲ್ಯಾನ್ಸೆಟ್, ಇಕ್ಲಿನಿಕಲ್ ಮೆಡಿಸಿನ್‌ನಲ್ಲಿ ಪ್ರಕಟಿಸಿರುವ ಅಧ್ಯಯನದಲ್ಲಿ ಹೇಳಿದ್ದಾರೆ.
56 ದೇಶಗಳಿಂದ 3,762 ಅರ್ಹ ಭಾಗವಹಿಸುವವರ ಪ್ರತಿಕ್ರಿಯೆಗಳ ಆಧಾರದ ಮೇಲೆ , ಸಂಶೋಧಕರು ಶರೀರದ 10 ಅಂಗ ವ್ಯವಸ್ಥೆಗಳಲ್ಲಿ ಒಟ್ಟು 203 ರೋಗಲಕ್ಷಣಗಳನ್ನು ಗುರುತಿಸಿದ್ದಾರೆ; ಈ ಪೈಕಿ 66 ರೋಗಲಕ್ಷಣಗಳನ್ನು ಕಂಡುಹಿಡಿಯಲು 7 ತಿಂಗಳಷ್ಟು ಸಮಯ ಬೇಕಾಯಿತು ಎಂದು ಅಧ್ಯಯನ ಹೇಳಿದೆ.
ಈ ಅಧ್ಯಯನವು ಇದೇ ಮೊದಲ ಬಾರಿಗೆ ಕೋವಿಡ್‌ ರೋಗದ ವ್ಯಾಪಕವಾದ ರೋಗಲಕ್ಷಣಗಳು, ವಿಶೇಷವಾಗಿ ನರಮಂಡಲವು ಸಾಮಾನ್ಯ ಮತ್ತು ದೀರ್ಘಕಾಲೀನ ಕೋವಿಡ್‌ ರೋಗಿಗಳಲ್ಲಿ ನಿರಂತರವಾಗಿದೆ ಎಂದು ತಿಳಿಸುತ್ತದೆ ಎಂದು ಡಾ. ಅಕ್ರಾಮಿ ಹೇಳಿದ್ದಾರೆ.
ಅಲ್ಲದೆ, ಸ್ಮರಣ ಶಕ್ತಿ ಮತ್ತು ಅರಿವಿನ ಅಪಸಾಮಾನ್ಯ ಕ್ರಿಯೆ ಎಲ್ಲ ವಯಸ್ಸಿನಲ್ಲೂ ಸಮಾನವಾಗಿ ಕಂಡುಬರುವ ಮತ್ತು ಕೆಲಸದ ಮೇಲೆ ಸಾಕಷ್ಟು ಪ್ರಭಾವ ಬೀರುವ ಅತ್ಯಂತ ವ್ಯಾಪಕವಾದ ಮತ್ತು ನಿರಂತರವಾದ ನರವೈಜ್ಞಾನಿಕ ಲಕ್ಷಣಗಳನ್ನು 85% ಕ್ಕಿಂತಲೂ ಹೆಚ್ಚು ಜನರು ಅನುಭವಿಸುತ್ತಿದ್ದಾರೆ ಎಂದು ಅಧ್ಯಯದಲ್ಲಿ ಕಂಡುಬಂದಿದೆ.
ತಲೆನೋವು, ನಿದ್ರಾಹೀನತೆ, ವರ್ಟಿಗೋ, ನರಶೂಲೆ, ನರರೋಗ, ಮನೋವೈದ್ಯಕೀಯ ಬದಲಾವಣೆಗಳು, ನಡುಕ, ಶಬ್ದ ಮತ್ತು ಬೆಳಕಿಗೆ ಸಂವೇದನೆ, ಭ್ರಮೆಗಳು, ಟಿನ್ನಿಟಸ್ ಮತ್ತು ಇತರ ಸಂವೇದನಾಶೀಲ ಲಕ್ಷಣಗಳು ಸಹ ಕೋವಿಡ್‌ ರೋಗಿಗಳಲ್ಲಿ ಸಾಮಾನ್ಯವಾಗಿದ್ದವು ಮತ್ತು ಅವುಗಳು ಕೇಂದ್ರ ಹಾಗೂ ಬಾಹ್ಯ ನರಮಂಡಲ ಒಳಗೊಂಡ ದೊಡ್ಡ ನರವೈಜ್ಞಾನಿಕ ಸಮಸ್ಯೆಗಳನ್ನು ಸೂಚಿಸುತ್ತದೆ. ಎಂದು ಅಧ್ಯಯನವು ವರದಿ ಪ್ರಕಟ ಮಾಡಿದೆ.
ಕೋವಿಡ್‌-19 ಗೆ ಅನುಗುಣವಾದ ರೋಗಲಕ್ಷಣಗಳನ್ನು ಅನುಭವಿಸಿದ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಈ ಸಮೀಕ್ಷೆಯು ಆತಂಕಕಾರಿ ಎಂದು ವರದಿ ಹೇಳುತ್ತದೆ, ಈ ಸಮೀಕ್ಷೆಯು 257 ಪ್ರಶ್ನೆಗಳನ್ನು ಒಳಗೊಂಡ SARS-CoV-2 ಗಾಗಿ ಧನಾತ್ಮಕತೆಯನ್ನು ಪರೀಕ್ಷಿಸಿದ ಮತ್ತು ಪರೀಕ್ಷಿಸದವರನ್ನು ಪರಿಗಣಿಸಿ ನಡೆಸಲಾಯಿತು ಎಂದು ಅಧ್ಯಯನವು ವರದಿ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement