ಇಂದಿನಿಂದ ಗೋಕರ್ಣ ಪರ್ತಗಾಳಿ ಮಠದಲ್ಲಿ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮ ; ನ.28ರಂದು ಪ್ರಧಾನಿಯಿಂದ 77 ಅಡಿ ಎತ್ತರದ ಭಗವಾನ್‌ ಶ್ರೀರಾಮನ ಪ್ರತಿಮೆ ಅನಾವರಣ

ಕಾರವಾರ: ಗೋವಾದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷಾಚರಣೆ ಅಂಗವಾಗಿ ಶ್ರೀಮಠದಲ್ಲಿ ನವೆಂಬರ್ 27ರಿಂದ ಡಿಸೆಂಬರ್ 7ರವರೆಗೆ ನಡೆಯಲಿರುವ 11 ದಿನಗಳ ಸಾರ್ಧ ಪಂಚಶತಮಾನೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
11 ದಿನಗಳ ಆಚರಣೆಯು ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ನವೆಂಬರ್ 27ರಂದು ಮಹೋತ್ಸವದ ಆಚರಣೆಗಳು ಅಧಿಕೃತವಾಗಿ ಪ್ರಾರಂಭವಾಗುತ್ತವೆ. ಈ ಭವ್ಯ ಮಹೋತ್ಸವಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ನವೆಂಬರ್ 28ರಂದು ಶುಕ್ರವಾರ ಶ್ರೀಮಠದ ಆವರಣದಲ್ಲಿ ನಿರ್ಮಾಣಗೊಂಡಿರುವ ದಕ್ಷಿಣ ಭಾರತದ ಅತಿ ಎತ್ತರದ ಭಗವಾನ್‌  ಶ್ರೀರಾಮನ 77 ಅಡಿಗಳ ಎತ್ತರದ ಕಂಚಿನ ಪ್ರತಿಮೆ ಹಾಗೂ 3ಡಿ ಪ್ರೊಜೆಕ್ಷನ್ ಹೊಂದಿದ ಥೀಮ್ ಪಾರ್ಕ್ ಅನ್ನು ಅನಾವರಣಗೊಳಿಸಲಿದ್ದಾರೆ. ರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ನ.28ರಂದು ಬೆಳಗ್ಗೆ 11 ಗಂಟೆಗೆ ಶ್ರೀ ವಿದ್ಯಾಧಿ ಹ ಶ್ರೀಪಾದ ವಡೇಶ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿದ್ದು, ಸಂಜೆ 3.45ಕ್ಕೆ ಮಠದ ಆವರಣ ದಲ್ಲಿ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ
ಸುಮಾರು ₹16 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀರಾಮನ 77 ಅಡಿಗಳ ಎತ್ತರದ ಕಂಚಿನ ಭವ್ಯ ಪ್ರತಿಮೆಯು ಹೆಸರಾಂತ ಶಿಲ್ಪಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಕೆಂಪೇಗೌಡ ಪ್ರತಿಮೆಯ ಶಿಲ್ಪಿ ರಾಮ ಸುತಾ ಅವರಿಂದ ನಿರ್ಮಾಣವಾಗಿದೆ. ಪ್ರತಿಮೆಯ ಸುತ್ತ ರಾಮಾಯಣದ ಕಥಾ ಸಾರ ಹೊಂದಿದ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದೆ.
550ನೇ ವರ್ಷಾಚರಣೆ ಅಂಗವಾಗಿ 550 ಹೋಮಗಳು…
ಗೋಕರ್ಣ ಪರ್ತಗಾಳಿ ಮಠದ 550ನೇ ವರ್ಷಾಚರಣೆ ಅಂಗವಾಗಿ  ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಸಂಕಲ್ಪ, ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ 120 ಕೇಂದ್ರ ಹಾಗೂ 104 ಉಪಕೇಂದ್ರಗಳಲ್ಲಿ ಈಗಾಗಲೇ 550 ಕೋಟಿ ‘ರಾಮನಾಮ ಜಪ’ ಪಠಣ ಸಂಪೂರ್ಣಗೊಂಡಿದೆ.  ಈಗ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷಾಚರಣೆ ಅಂಗವಾಗಿ ದಿನಕ್ಕೆ 55 ಹೋಮಗಳಂತೆ ಒಟ್ಟು 550 ಹೋಮಗಳನ್ನು ಋತ್ವಿಕರು ನೆರವೇರಿಸುತ್ತಿರುವುದು 11 ದಿನಗಳ ಮಹೋತ್ಸವದ ವಿಶೇಷವಾಗಿದೆ.
11 ದಿನಗಳ ಮಹೋತ್ಸವದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ, ಯೋಗ ಶಿಬಿರಗಳು,ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೀಜಿಸಲಾಗಿದೆ.
ಆಯೋಜಿಸಲಾಗಿದೆ.
ಅಕ್ಟೋಬರ್ 19ರಂದು ಬದರಿನಾಥದಿಂದ ಚಾಲನೆ ಪಡೆದ ಶ್ರೀರಾಮ ರಥಯಾತ್ರೆಯು ದೇಶದ ಪ್ರಮುಖ ಯಾತ್ರಾ ಸ್ಥಳಗಳಾದ ಅಯೋಧ್ಯಾ, ವಾರಣಾಸಿ, ನಾಸಿಕ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಲ್ಲಿ ಸಂಚರಿಸಿ ಪರ್ಥಗಾಳಿ ಜೀವೋತ್ತಮ ಮಠಕ್ಕೆ ಆಗಮಿಸಿದೆ.
ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿಯವರ ಆಶೀರ್ವಾದದಲ್ಲಿ ನಡೆಯಲಿರುವ ಈ ಸಾರ್ಧ ಪಂಚಶತಮಾನೋತ್ಸವ ಮಹೋತ್ಸವ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಶ್ರದ್ಧೆಯ ಮಹಾಸಂಗಮವಾಗಲಿದ್ದು, ಶ್ರೀಮಠದಲ್ಲಿ 11 ದಿನಗಳ ಕಾಲ ಆಗಮಿಸುವ ಲಕ್ಷಾಂತರ ಭಕ್ತಾಧಿಗಳಿಗೆ ವಿವಿಧ ಸೇವೆ, ಸೌಲಭ್ಯಗಳು ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement