ವಿಮೆ ಹಣಕ್ಕಾಗಿ ಹಿಚ್‌ಹೈಕರನ ಹತ್ಯೆ ಮಾಡಿ ತಾನೇ ಸತ್ತಿದ್ದಾಗಿ ಬಿಂಬಿಸಿದ ವ್ಯಕ್ತಿ ; ಗೆಳತಿಗೆ ಕಳುಹಿಸಿದ ಮೆಸೇಜಿನಿಂದ ಹೊರಬಿತ್ತು ಸತ್ಯ…!

ಮುಂಬೈ: ತನ್ನದೇ ಸಾವು ಸಂಭವಿಸಿದೆ ಎಂದು ನಂಬಿಸಲು, ಹಿಚ್‌ಹೈಕರ್‌ನನ್ನು (ದಾರಿಯಲ್ಲಿ ಹೋಗುವ ವಾಹನಗಳಲ್ಲಿ ಉಚಿತ ಪ್ರಯಾಣಕೇಳಿ ಪ್ರಯಾಣ ಮಾಡುವ ವ್ಯಕ್ತಿ) ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆದರೆ, ಆತ ತನ್ನ ಗೆಳತಿಗೆ ಕಳುಹಿಸಿದ ಸರಣಿ ಸಂದೇಶಗಳಿಂದ ಈ ಇಡೀ ನಾಟಕ ಬಯಲಿಗೆ ಬಂದಿದೆ.
ಎನ್‌ಡಿಟಿವಿ  ವರದಿ ಪ್ರಕಾರ,  ಕಳೆದ ಭಾನುವಾರ ಮುಂಜಾನೆ, ಮಹಾರಾಷ್ಟ್ರದ ಲಾತೂರ್‌ನ ಔಸಾ ತಾಲೂಕಿನಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಕಾರಿನಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಕಾರಿನ ಮಾಲೀಕರನ್ನು ಪತ್ತೆ ಹಚ್ಚಿದಾಗ, ಅವರು ಅದನ್ನು ತಮ್ಮ ಸಂಬಂಧಿಕರಿಗೆ ನೀಡಿದ್ದರು ಎಂಬುದು ತಿಳಿದು ಬಂತು. ಬ್ಯಾಂಕ್ ರಿಕವರಿ ಏಜೆಂಟ್ ಆಗಿದ್ದ ಗಣೇಶ ಚವಾಣ ಎಂಬಾತನಿಗೆ ಕಾರು ನೀಡಲಾಗಿತ್ತು. ಪೊಲೀಸರು ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಆತ ಮನೆಗೆ ಹಿಂತಿರುಗಿಲ್ಲ ಮತ್ತು ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
“ಈ ಎಲ್ಲ ಅಂಶಗಳನ್ನು ಆಧರಿಸಿ, ಮೃತಪಟ್ಟ ವ್ಯಕ್ತಿ ಗಣೇಶ ಚವಾಣ ಇರಬಹುದು ಎಂದು ನಾವು ಆರಂಭದಲ್ಲಿ ಊಹಿಸಿದ್ದೆವು ಎಂದು ಲಾತೂರ್ ಪೊಲೀಸ್ ವರಿಷ್ಠಾಧಿಕಾರಿ (SP) ಅಮೋಲ್ ತಾಂಬೆ ತಿಳಿಸಿದ್ದಾರೆ.

ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಮೊಬೈಲ್‌ ಸಂದೇಶ:
ಆದರೆ, ತನಿಖೆ ಮುಂದುವರೆದಂತೆ, ಹಲವು ವಿಷಯಗಳು ಹೊಂದಿಕೆಯಾಗುತ್ತಿಲ್ಲ ಎಂದು ಪೊಲೀಸರಿಗೆ ಅರಿವಾಯಿತು. ಅವರು ಚವಾಣನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಕಲೆಹಾಕಿದಾಗ, ಆತ ಒಬ್ಬ ಮಹಿಳೆಯೊಂದಿಗೆ ಪ್ರೇಮ ಸಂಬಂಧದಲ್ಲಿ ಇರುವ ಸಂಗತಿ ತಿಳಿದು ಬಂತು.
ನಾವು ಆ ಮಹಿಳೆಯನ್ನು ಪ್ರಶ್ನಿಸಿದಾಗ, ಈ ಘಟನೆಯ ನಂತರವೂ ಗಣೇಶ ಚವಾಣ ಬೇರೆ ಫೋನ್ ಸಂಖ್ಯೆಯಿಂದ ಆಕೆಗೆ ಸಂದೇಶ ಕಳುಹಿಸುವುದು ಮತ್ತು ಚಾಟ್ ಮಾಡುವುದು ಮಾಡುತ್ತಿದ್ದಾನೆ ಎಂಬ ವಿಷಯ ಬೆಳಕಿಗೆ ಬಂತು ಎಂದು ಎಸ್ಪಿ ತಾಂಬೆ ಹೇಳಿದ್ದಾರೆ.
ಸತ್ತಿದ್ದಾನೆ ಎಂದು ಭಾವಿಸಿದ ವ್ಯಕ್ತಿ ಜೀವಂತವಾಗಿರುವುದು ದೃಢವಾದ ನಂತರ, ಕಾರಿನಲ್ಲಿ ಯಾರು ಸತ್ತಿದ್ದಾರೆ ಎಂದು ತಿಳಿಯಲು ಪೊಲೀಸರು ಚವ್ಹಾಣನ ಪರ್ಯಾಯ ಫೋನ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದರು. ಇದು ಅವರನ್ನು ಕೋಲ್ಹಾಪುರ ಮತ್ತು ನಂತರ ಸಿಂಧುದುರ್ಗ ಜಿಲ್ಲೆಯ ವಿಜಯದುರ್ಗಕ್ಕೆ ಕರೆದೊಯ್ದಿತು. ಅಲ್ಲಿ ಗಣೇಶ ಚವ್ಹಾಣ ಪೊಲೀಸರಿಗೆ ಸಿಕ್ಕಿಬಿದ್ದ.

ಪ್ರಮುಖ ಸುದ್ದಿ :-   14 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ವಿಮಾ ಹಣಕ್ಕಾಗಿ ಕ್ರೂರ ಸಂಚು:
ಗಣೇಶ ಚವ್ಹಾಣನನ್ನು ಪ್ರಶ್ನಿಸಿದಾಗ, ಆತ ₹1 ಕೋಟಿ ಮೌಲ್ಯದ ಜೀವ ವಿಮೆಯನ್ನು ಮಾಡಿಸಿದ್ದ ಮತ್ತು ಆ ಹಣವನ್ನು ಪಡೆಯಲು ತನ್ನದೇ ಸಾವು ಸಂಭವಿಸಿದೆ ಎಂದು ಬಿಂಬಿಸಲು ಈ ಕೊಲೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಶನಿವಾರ, ಔಸಾದ ತುಳಜಾಪುರ ಟಿ-ಜಂಕ್ಷನ್‌ನಲ್ಲಿ ಬಸ್ಸಿಗೆ ಕಾಯುತ್ತಿದ್ದ ಗೋವಿಂದ ಯಾದವ್ ಎಂಬ ಪ್ರಯಾಣಿಕನಿಗೆ ಗಣೇಶ ಚವಾಣ ಲಿಫ್ಟ್ ನೀಡಿದ್ದಾನೆ. ಯಾದವ್ ಕುಡಿದ ಅಮಲಿನಲ್ಲಿದ್ದ ಕಾರಣ, ಚವಾಣ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅವರು ಊಟಕ್ಕಾಗಿ ಒಂದು ಹೋಟೆಲ್‌ನಲ್ಲಿ ನಿಂತು ನಂತರ ವನವಡಾ ಪತಿ-ವನವಡಾ ರಸ್ತೆಯ ಕಡೆಗೆ ಹೋಗಿದ್ದಾರೆ. ಕಾರು ನಿಲ್ಲಿಸಿದ ನಂತರ, ಯಾದವ್ ಕಾರಿನೊಳಗೆ ಮಲಗಿದ್ದಾನೆ. ಚವ್ಹಾಣ ಆತನನ್ನು ಎಳೆದು ಚಾಲಕನ ಸೀಟಿನಲ್ಲಿ ಕೂರಿಸಿ, ಸೀಟ್ ಬೆಲ್ಟ್ ಹಾಕಿದ್ದಾನೆ. ನಂತರ ಸೀಟಿನ ಮೇಲೆ ಬೆಂಕಿ ಕಡ್ಡಿಗಳು ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಇಟ್ಟು, ಅವುಗಳಿಗೆ ಬೆಂಕಿ ಹಚ್ಚಿದ್ದಾನೆ ಎಂಬುದು ವಿಚಾರನೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರನ್ನು ಮತ್ತು ತನ್ನ ಕುಟುಂಬವನ್ನು ದಾರಿ ತಪ್ಪಿಸಲು, ಚವಾಣ ತನ್ನ ಕೈಬಳೆಯನ್ನು ಮೃತದೇಹದ ಬಳಿ ಬಿಟ್ಟು ಹೋಗಿದ್ದ.
“ಇದೀಗ ಕೊಲೆ ಪ್ರಕರಣ ದಾಖಲಿಸಲಾಗಿದೆ. ಚವಾಣಗೆ ಯಾರಾದರೂ ಸಹಚರರು ಇದ್ದಾರೆಯೇ ಎಂಬುದನ್ನು ನಿರ್ಧರಿಸಲು ಹೆಚ್ಚಿನ ತನಿಖೆ ನಡೆಸಲಾಗುವುದು,” ಎಂದು ಎಸ್‌ಪಿ ತಾಂಬೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪಿಎಫ್‌ಗೆ ಶೇ. 8.25 ಬಡ್ಡಿದರ : ಕೇಂದ್ರ ಸರ್ಕಾರದ ಅನುಮೋದನೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement