ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಪಾರ್ಥಿವ ಶರೀರವನ್ನು ಕೊಚ್ಚಿಗೆ ಹೊತ್ತು ತಂದ ವಿಶೇಷ ಐಎಎಫ್ ವಿಮಾನ

ಕೊಚ್ಚಿ : ಕುವೈತ್‌ನಲ್ಲಿ ಬುಧವಾರ (ಜೂನ್ 12) ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವಿಗೀಡಾದ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ಐಎಎಫ್ ವಿಮಾನ ಇಂದುಮಶುಕ್ರವಾರ (ಜೂನ್‌ 14) ಕೊಚ್ಚಿಗೆ ಬಂದಿಳಿಯಿತು. ಕುವೈತ್‌ನ ಮಂಗಾಫ್ ಪ್ರದೇಶದ ಕಾರ್ಮಿಕ ವಸತಿ ಸೌಲಭ್ಯದಿಂದ ಮೃತರ ಅವಶೇಷಗಳನ್ನು ತಕ್ಷಣವೇ ಸ್ವದೇಶಕ್ಕೆ ತರಲು ಭಾರತ ಸರ್ಕಾರ ಆಯೋಜಿಸಿದ್ದ ಭಾರತದ ವಾಯು ಪಡೆ(IAF)ಯ ವಿಶೇಷ ವಿಮಾನವು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
“ಶೀಘ್ರ ಪಾರ್ಥಿವ ಶರೀರವನ್ನು ತರುವುದನ್ನು ಖಚಿತಪಡಿಸಿಕೊಳ್ಳಲು ಕುವೈತ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ವಿಮಾನದಲ್ಲಿದ್ದಾರೆ” ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ.
ಕುವೈತ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದ ನಂತರ ವಸತಿ ಸೌಲಭ್ಯದಲ್ಲಿದ್ದ ಒಟ್ಟು 176 ಭಾರತೀಯ ಕಾರ್ಮಿಕರಲ್ಲಿ 45 ಮಂದಿ ಮೃತಪಟ್ಟಿದ್ದಾರೆ, ಇತರ 33 ಮಂದಿ ಗಾಯಗೊಂಡಿದ್ದಾರೆ ಮತ್ತು ಪ್ರಸ್ತುತ ಕುವೈತ್‌ನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಕೇರಳದಿಂದ 23, ತಮಿಳುನಾಡಿನಿಂದ 7, ಆಂಧ್ರಪ್ರದೇಶದಿಂದ 3, ಉತ್ತರ ಪ್ರದೇಶದ 3 ಮತ್ತು ಕರ್ನಾಟಕದ 2 ಮಂದಿ ಸಾವಿಗೀಡಾಗಿದ್ದಾರೆ. ಬಿಹಾರ, ಪಂಜಾಬ್,ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದ ತಲಾ ಒಬ್ಬರು ಬೆಂಕು ದುರಂತದಲ್ಲಿ ಮೃತಪಟ್ಟಿದ್ದಾರೆ.
ಏತನ್ಮಧ್ಯೆ, ಪ್ರಧಾನಿ ಮೋದಿಯವರ ನಿರ್ದೇಶನದ ಮೇರೆಗೆ ಕುವೈತ್‌ಗೆ ಭೇಟಿ ನೀಡಿದ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದರು ಮತ್ತು ಅವರ ಯೋಗಕ್ಷೇಮವನ್ನು ವಿಚಾರಿಸಿದರು ಮತ್ತು ಅವರಿಗೆ ಭಾರತ ಸರ್ಕಾರದ ಎಲ್ಲಾ ಬೆಂಬಲದ ಭರವಸೆ ನೀಡಿದರು. ಸಚಿವರು ತಮ್ಮ ಭೇಟಿಯ ಸಮಯದಲ್ಲಿ ಕುವೈತ್‌ನ ಮೊದಲ ಉಪ ಪ್ರಧಾನ ಮಂತ್ರಿ, ರಕ್ಷಣಾ ಮತ್ತು ಆಂತರಿಕ ಸಚಿವ ಶೇಖ್ ಫಹಾದ್ ಯೂಸೆಫ್ ಸೌದ್ ಅಲ್-ಸಬಾಹ್ ಮತ್ತು ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದರು.
ಅವರ ಮಾತುಕತೆಯ ಸಮಯದಲ್ಲಿ, ಕುವೈತ್ ವಿದೇಶಾಂಗ ಸಚಿವರು ದುರಂತ ಘಟನೆಯ ಬಗ್ಗೆ ತಮ್ಮ ಸಂತಾಪವನ್ನು ತಿಳಿಸಿದರು ಮತ್ತು ವೈದ್ಯಕೀಯ ಆರೈಕೆ ಮತ್ತು ಘಟನೆಯ ತನಿಖೆ ಸೇರಿದಂತೆ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದರು.

ಪ್ರಮುಖ ಸುದ್ದಿ :-   ತನ್ನ ಡ್ರೋನ್‌ಗಳ ಮೇಲೆ ಭಾರತದ ದಾಳಿಯಿಂದ ಪಾರಾಗಲು ಪ್ರಯಾಣಿಕ ವಿಮಾನಗಳನ್ನು ಬಳಸಿಕೊಂಡು ಪಾಕಿಸ್ತಾನ ಸೇನೆ...!

ವಿಶೇಷ ಆಂಬ್ಯುಲೆನ್ಸ್ ವ್ಯವಸ್ಥೆ
ಏತನ್ಮಧ್ಯೆ, ಕೊಚ್ಚಿಗೆ ಪಾರ್ಥಿವ ಶರೀರದ ಆಗಮನದ ಹಿನ್ನೆಲೆಯಲ್ಲಿ ಎರ್ನಾಕುಲಂ ಜಿಲ್ಲಾಧಿಕಾರಿ ಎನ್‌ಎಸ್‌ಕೆ ಉಮೇಶ್ ಅವರು, “ಕೇರಳ ಸಿಎಂ ಪಿಣರಾಯಿ ವಿಜಯನ್, ರಾಜ್ಯದ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಲಿದ್ದಾರೆ… ಪ್ರತಿಯೊಬ್ಬರಿಗೂ ವಿಶೇಷ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಅವರ ಮನೆಗಳಿಗೆ ಶವಗಳನ್ನು ಸುಗಮವಾಗಿ ಸಾಗಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ… ವಿಶೇಷ಼ವಿಮಾನವು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು ಎಂದು ಹೇಳಿದ್ದಾರೆ.

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement