ರತನ್‌ ಟಾಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕಿರಿಯ ಸಹೋದರ ಜಿಮ್ಮಿ ಟಾಟಾ, ಮಲತಾಯಿ ಸಿಮೋನ್ ಟಾಟಾ

ಮುಂಬೈ : ಹಿರಿಯ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರ ಕುಟುಂಬ ಸದಸ್ಯರು ಗುರುವಾರ ಅವರ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಹಾಜರಾಗಿದ್ದರು,.
ಅನಾರೋಗ್ಯದಿಂದ ಬಳಲುತ್ತಿರುವ ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ನೇವಲ್ ಟಾಟಾ ಹಾಗೂ ಮಲತಾಯಿ ಸಿಮೋನ್ ಟಾಟಾ ಅವರು ಅಂತಿಮ ವಿಧಿವಿಧಾನಗಳಿಗೆ ಗಾಲಿಕುರ್ಚಿಯಲ್ಲಿ ಬಂದರು.
ನೇವಲ್‌ ಟಾಟಾ ಹಾಗೂ ಸೂನೂ ಟಾಟಾ ದಂಪತಿ ವಿಚ್ಛೇದನ ಪಡೆದಾಗ ರತನ್ ಟಾಟಾ ಹಾಗೂ ಜಿಮ್ಮಿ ಟಾಟಾ ಅವರನ್ನು ಅವರ ಅಜ್ಜಿ ನವಾಜಬಾಯಿ ಟಾಟಾ ದತ್ತು ಪಡೆದರು.
ನೇವಲ್ ಟಾಟಾ ನಂತರ ಸಿಮೋನ್ ಟಾಟಾ ಅವರನ್ನು ವಿವಾಹವಾದರು, ಈ ದಂಪತಿ ಮಗ ನೋಯೆಲ್ ಟಾಟಾ. ನೋಯೆಲ್ ಟಾಟಾ ಮಕ್ಕಳಾದ ನೆವಿಲ್ಲೆ, ಮಾಯಾ ಮತ್ತು ಲಿಯಾ ಟಾಟಾ ಪರಂಪರೆಯ ಸಂಭಾವ್ಯ ಉತ್ತರಾಧಿಕಾರಿಗಳಾಗಿದ್ದಾರೆ.

ಜಿಮ್ಮಿ ಹೆಚ್ಚಾಗಿ ಸಾರ್ವಜನಿಕ‌ ಕಾಣಿಸಿಕೊಳ್ಳುವುದಿಲ್ಲ. ಮತ್ತು ಮುಂಬೈನಲ್ಲಿ 2 BHK ನಲ್ಲಿ ವಾಸಿಸುತ್ತಿದ್ದಾರೆ. ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಮತ್ತು ಟಿಸಿಎಸ್ ಸೇರಿದಂತೆ ವಿವಿಧ ಟಾಟಾ ಗ್ರೂಪ್ ಕಂಪನಿಗಳಲ್ಲಿ ಅವರು ಗಮನಾರ್ಹ ಸಂಖ್ಯೆಯ ಷೇರುಗಳನ್ನು ಹೊಂದಿದ್ದಾರೆ.

ರತನ್‌  ಟಾಟಾ ಅವರ ಮಲತಾಯಿ ಮಗ ನೋಯೆಲ್ ಟಾಟಾ, ಕುಟುಂಬದ ಪರಂಪರೆಯನ್ನು ಆನುವಂಶಿಕವಾಗಿ ಪಡೆಯುವ ಪ್ರಬಲ ಸ್ಪರ್ಧಿ, ಅಂತ್ಯಕ್ರಿಯೆ ವೇಳೆ ಸಹ ಅವರು ಗುರುತಿಸಲ್ಪಟ್ಟರು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಟಾಟಾ ಉದ್ಯೋಗಿಗಳು ಸೇರಿದಂತೆ ಉನ್ನತ ಮಟ್ಟದ ಉದ್ಯಮಿಗಳು ಅವರ ಬಳಿ ಸಂತಾಪ ವ್ಯಕ್ತಪಡಿಸಿದರು.

Ratan Tata's Step Mother Arrives at his Funeral

Simone Tata, Ratan Tata's stepmother, Arrives to Bid Farewell #RatanTata #SimoneTata #RIPRatanTata #RatanTataFuneral #Tata #RIP #Funeral #Mumbai

Posted by News18 on Thursday, October 10, 2024
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement