ಭಾರತದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ, ಸೋಂಕು ಕಡಿಮೆ ಇರುವಲ್ಲಿ ಶಾಲೆ ತೆರೆಯಬಹುದು: ಏಮ್ಸ್​ ಮುಖ್ಯಸ್ಥ

ನವದೆಹಲಿ: ಕೋವಿಡ್​ ನಿಂದಾಗಿ ವರ್ಷದಿಂದ ಶಾಲೆಗಳು ಬಂದ್​ ಆಗಿದ್ದು, ಆನ್​ಲೈನ್​ ಕಲಿಕೆ ಮೂಲಕವೇ ತರಗತಿಗಳು ನಡೆಯುತ್ತಿವೆ. ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡವರಿಗೆ ಈಗಾಗಲೇ ಲಸಿಕೆ ಸಿಕ್ಕಿದ್ದು, ಮಕ್ಕಳ ಲಸಿಕೆಗಳು ಪ್ರಯೋಗ ಹಂತದಲ್ಲಿದೆ. ಮಕ್ಕಳ ಲಸಿಕೆ ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಸಿಗಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮೂರನೇ ಅಲೆ ಸೋಂಕು ಮಕ್ಕಳನ್ನು ಹೆಚ್ಚು ಬಾಧಿಸುವ ಸಾಧ್ಯತೆ ಇದೆ ಎಂದು ಹೇಳುತ್ತಿರುವ ಮಧ್ಯೆಯೇ ಏಮ್ಸ್​ ಮುಖ್ಯಸ್ಥರು, ಶಾಲೆಗಳನ್ನು ತೆರೆಯಬಹುದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಏಮ್ಸ್​ ಮುಖ್ಯಸ್ಥ ಡಾ ರಣದೀಪ್​ ಗುಲೇರಿಯಾ, ಭಾರತದ ಮಕ್ಕಳಲ್ಲಿ ಸೋಂಕಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸೋಂಕು ಕಡಿಮೆ ಇರುವ ಪ್ರದೇಶಗಳಲ್ಲಿ ಶಾಲೆ ತೆರೆಯಬಹುದು ಎಂದು ಇಂಡಿಯಾ ಟುಡೇ ಜೊತೆ ಮಾತನಾಡಿದ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
, ಕಡಿಮೆ ಸೋಂಕಿನ ಪ್ರಕರಣ ಇರುವ ಸ್ಥಳಗಳಲ್ಲಿ ಶಾಲೆಗಳನ್ನು ತೆರೆಯುವಂತೆ ನಾನು ಶಿಫಾರಸ್ಸು ಮಾಡುತ್ತೇನೆ. ಶೇ 5ಕ್ಕಿಂತ ಸೋಂಕಿನ ಪ್ರಮಾಣ ಕಡಿಮೆ ಇದ್ದ ಕಡೆ ಶಾಲೆಗಳನ್ನು ತೆರೆಯಲು ಸಿದ್ದತೆ ನಡೆಸಬಹುದು ಎಂದು ಹೇಳಿದ್ದಾರೆ.
ಶಾಲೆ ಎಂಬುದು ಮಕ್ಕಳ ಒಟ್ಟಾರೆ ಬೆಳವಣಿಗೆ ವಿಚಾರದಲ್ಲಿ ಬಹು ಮಹತ್ವದ ಅಂಶವಾಗಿದೆ. ಹೀಗಾಗಿ ಈ ಕಾರಣದಿಂದಲೂ ನಾವು ಗಮನಿಸಬೇಕು ಎಂದು ಹೇಳಿರುವ ಅವರು, ಭಾರತದಲ್ಲಿ ಮಕ್ಕಳು ವೈರಸ್​ಗೆ ಹೆಚ್ಚಾಗಿ ತೆರೆದು ಕೊಳ್ಳುತ್ತಾರೆ. ಇದರಿಂದ ಅನೇಕ ಮಕ್ಕಳಲ್ಲಿ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಏಮ್ಸ್ ಮತ್ತು ಡಬ್ಲ್ಯುಎಚ್‌ಒ ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳಲ್ಲಿ SARS-CoV-2 ಸಿರೊ-ಸಕಾರಾತ್ಮಕ ದರವು ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚಿದೆ. ಇದೇ ಕಾರಣ ಮೂರನೇ ಅಲೆ ಸೋಂಕು ದೊಡ್ಡವರಿಗಿಂತ ಹೆಚ್ಚಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.ಮಾಸ್ಕ್​ ಧರಿಸಿ, ಸಾಮಾಜಿಕ ಅಂತರದ ಜೊತೆ ಕೋವಿಡ್ ನಿಯಮಾವಳಿ ಪಾಲಿಸುವ ಮೂಲಕ ಮತ್ತೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕು. ದೀರ್ಘಕಾಲದವರೆಗೆ ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ..

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement