ಭಾರತದಲ್ಲಿ ಶುಕ್ರವಾರ 1.31 ಲಕ್ಷ ದಾಟಿದ ದೈನಂದಿನ ಕೊರೊನಾ ಸೋಂಕು..ಇದು ಈವರೆಗಿನ ಸಾರ್ವಕಾಲಿಕ ಗರಿಷ್ಠ

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಸತತವಾಗಿ ಮೂರನೇ ದಿನವೂ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 1,31,830 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು ದಯನಂದಿನ ಸೋಂಕಿನಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,31,830 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, 780 ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅದು ಮಾಹಿತಿ ನೀಡಿದೆ.
ಈ ಸೋಮವಾರ ಮೊದಲ ಬಾರಿಗೆ 100,000 ಮೀರಿದ ದೈನಂದಿನ ಸೋಂಕುಗಳು ಈಗ ಕಳೆದ ಐದು ದಿನಗಳಲ್ಲಿ ನಾಲ್ಕು ಬಾರಿ ಆ ಮಟ್ಟವನ್ನು ಮೀರಿವೆ. ಕಳೆದ ವರ್ಷದ ಮೊದಲ ಅಲೆಗಿಂತ ಈ ಬಾರಿಯ ಕೊರೊನಾ ವೈರಸ್ ಅಲೆ ವೇಗವಾಗಿದೆ. ಕಳೆದ ಗುರುವಾರ ಒಂದೇ ದಿನ ದೇಶದಲ್ಲಿ 126,260 ಮಂದಿಗೆ ಸೋಂಕು ದೃಢಪಟ್ಟಿದ್ದು ದಾಖಲೆಯಾಗಿತ್ತು.ಶುಕ್ರವಾರದ ಕೇಂದ್ರ ಆರೋಗ್ಯ ಇಲಾಖೆ ಅಂಶಗಳು ದೈನಂದಿನ ಕೊರೊನಾ ಸೋಂಕು 1,31,830 ಹೇಳಿದ್ದು ಇದು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.

ಪ್ರಮುಖ ಸುದ್ದಿ :-   ನೀವು ಭಾರತದಲ್ಲಿ ಆಪಲ್ ಸಾಧನ ಉತ್ಪಾದನೆ ಮಾಡ್ಬೇಡಿ..; ಆಪಲ್ ಸಿಇಒಗೆ ಡೊನಾಲ್ಡ್ ಟ್ರಂಪ್ ಒತ್ತಡ : ಅಮೆರಿಕ ವರಸೆ ಬದಲಿಸಿದ್ದು ಯಾಕೆ..?

ದೇಶದಲ್ಲಿ 9,79,608 ಸಕ್ರಿಯ ಪ್ರಕರಣಗಳಿದ್ದು ಒಟ್ಟಾರೆ 1,67,642 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement