ಮಾಲ್ಡೀವ್ಸ್‌ ಅಪಹಾಸ್ಯದ ಮಧ್ಯೆ ಪ್ರಧಾನಿ ಮೋದಿ ಭೇಟಿ ನಂತ್ರ ಲಕ್ಷದ್ವೀಪದ ಬಗ್ಗೆ ಆನ್-ಪ್ಲಾಟ್‌ಫಾರ್ಮ್ ಹುಡುಕಾಟದಲ್ಲಿ 3400% ಪಟ್ಟು ಏರಿಕೆ ಕಂಡ ಮೇಕ್‌ ಮೈ ಟ್ರಿಪ್…!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಲಕ್ಷದ್ವೀಪ ಭೇಟಿಯು ರಮಣೀಯ ದ್ವೀಪಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ ಎಂದು ಮೇಕ್‌ಮೈಟ್ರಿಪ್ ಹೇಳಿದೆ. ಆನ್‌ಲೈನ್ ಟ್ರಾವೆಲ್ ಕಂಪನಿಯು ಲಕ್ಷದ್ವೀಪದ ಬಗ್ಗೆ ಆನ್-ಪ್ಲಾಟ್‌ಫಾರ್ಮ್ ಹುಡುಕಾಟದಲ್ಲಿ ಶೇಕಡಾ 3,400 ರಷ್ಟು ಹೆಚ್ಚಳವಾಗಿದೆ ಎಂದು ಉಲ್ಲೇಖಿಸಿದೆ.
ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಮಾಲ್ಡೀವ್ಸ್‌ ರಾಜಕಾರಣಿಗಳು ಅಪಹಾಸ್ಯ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಆದಾಗ್ಯೂ, ಮಾಲ್ಡೀವ್ಸ್ ಸರ್ಕಾರವು ಪ್ರಧಾನಿ ಮೋದಿ ವಿರುದ್ಧದ ಅವಹೇಳನಕಾರಿ ಹೇಳಿಕೆಗಳನ್ನು ತಿರಸ್ಕರಿಸಿದೆ, ಅದು ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಸರ್ಕಾರದ ಅಭಿಪ್ರಾಯಗಳಲ್ಲ ಎಂದು ಹೇಳಿದೆ.
ಗೌರವಾನ್ವಿತ ಪ್ರಧಾನಿಯವರ ಭೇಟಿಯ ನಂತರ ಲಕ್ಷದ್ವೀಪಕ್ಕೆ ಆನ್-ಪ್ಲಾಟ್‌ಫಾರ್ಮ್ ಹುಡುಕಾಟಗಳಲ್ಲಿ 3400% ಹೆಚ್ಚಳವನ್ನು ನಾವು ಗಮನಿಸಿದ್ದೇವೆ” ಎಂದು ಮೇಕ್‌ ಮೈ ಟ್ರಿಪ್‌ (MakeMyTrip) ಕಂಪನಿಯು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.
ಇಂತಹ ಅಗಾಧವಾದ ಹುಡುಕಾಟ ಪ್ರತಿಕ್ರಿಯೆ ಮತ್ತು ಭಾರತೀಯ ಕಡಲತೀರಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ದಾಖಲಿಸಿದ ಮೇಕ್‌ಮೈಟ್ರಿಪ್ ಹಲವಾರು ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡಲು ‘ಬೀಚ್ ಆಫ್ ಇಂಡಿಯಾ’ ಅಭಿಯಾನವನ್ನು ಪ್ರಕಟಿಸಿತು, ಇದು ದೇಶಾದ್ಯಂತದ ಬೀಚ್‌ಗಳನ್ನು ಹುಡುಕಲು ಪ್ರಯಾಣಿಕರನ್ನು ಉತ್ತೇಜಿಸುತ್ತದೆ.

ಮೇಕ್‌ಮೈಟ್ರಿಪ್‌ನ ಮುಖ್ಯ ಮಾರ್ಕೆಟಿಂಗ್ ಮತ್ತು ವ್ಯವಹಾರ ಅಧಿಕಾರಿ ರಾಜ ರಿಷಿ ಸಿಂಗ್ ಅವರು, “ಪ್ರಧಾನಿ ಭೇಟಿಯ ನಂತರ ಲಕ್ಷದ್ವೀಪವು ಆನ್-ಪ್ಲಾಟ್‌ಫಾರ್ಮ್ ಹುಡುಕಾಟಗಳಲ್ಲಿ ಗಮನಾರ್ಹವಾದ 3400% ಹೆಚ್ಚಳವನ್ನು ಕಂಡಿದೆ. ಇದು ‘ಭಾರತದ ಬೀಚ್‌ಗಳು’ ಅಭಿಯಾನವನ್ನು ಆರಂಭಿಸಲು ನಮಗೆ ಸ್ಫೂರ್ತಿ ನೀಡಿತು. ಇದರ ಅಡಿಯಲ್ಲಿ ಗ್ರಾಹಕರು ಭಾರತದ ಕಡಲತೀರಗಳ ಬಗ್ಗೆ ಜ್ಞಾನವನ್ನು ಪಡೆಯಬಹುದು. ನಾವು ಇದರ ಅಡಿಯಲ್ಲಿ ಗಮನಾರ್ಹವಾದ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಸಹ ಒದಗಿಸುತ್ತಿದ್ದೇವೆ…”ಎಂದು ಹೇಳಿದ್ದಾರೆ.
ಹಿಂದಿನ ದಿನ, ಮತ್ತೊಂದು ಆನ್‌ಲೈನ್ ಟ್ರಾವೆಲ್ ಕಂಪನಿ ಈಸಿ ಮೈ ಟ್ರಿಪ್‌ (EaseMyTrip) ಮಾಲ್ಡೀವ್ಸ್ ಬಹಿಷ್ಕಾರ ಅಭಿಯಾನದ ಮಧ್ಯೆ ಎಲ್ಲ ಮಾಲ್ಡೀವ್ಸ್ ವಿಮಾನ ಬುಕಿಂಗ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಟ್ರಾವೆಲ್ ಕಂಪನಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನಿಶಾಂತ್ ಪಿಟ್ಟಿ, “ನಮ್ಮ ರಾಷ್ಟ್ರದೊಂದಿಗೆ ನಾವು ನಿಂತಿದ್ದು, ಈಸಿ ಮೈ ಟ್ರಿಪ್‌ (EaseMyTrip) ಎಲ್ಲಾ ಮಾಲ್ಡೀವ್ಸ್ ವಿಮಾನ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಉದ್ಯಮಿ, ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆ ಪ್ರಕರಣ ; ಅವರ ಅಂತ್ಯಕ್ರಿಯೆಗೆ ಹಾರ ಹಿಡಿದುಕೊಂಡು ಬಂದ ಆರೋಪಿ...!

ನಿರ್ಧಾರವನ್ನು ವಿವರಿಸಿದ ಪಿಟ್ಟಿ, ‘ದೇಶವು ವ್ಯಾಪಾರಕ್ಕಿಂತ ಮೊದಲು’ ಮತ್ತು ಇತರ ಸ್ವದೇಶಿ ಪ್ರವಾಸೋದ್ಯಮ ಕಂಪನಿಗಳು ಸಹ ಇದನ್ನು ಅನುಸರಿಸಬೇಕು ಎಂದು ಹೇಳಿದರು.
ಮಾಲ್ಡೀವ್ಸ್‌ನ ಕೆಲವು ನಾಯಕರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ನಂತರ ಮತ್ತು ಅವರ ಇತ್ತೀಚಿನ ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿದ ನಂತರ ಎರಡು ದೇಶಗಳ ಮಧ್ಯೆ ವಿವಾದ ಭುಗಿಲೆದ್ದಿದೆ. ಭಾರತವು ಮಾಲ್ಡೀವ್ಸ್‌ ಜೊತೆ ಪ್ರಧಾನಿಗೆ ಅಪಹಾಸ್ಯ ಮಾಡಿದ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದೆ.
ಇದೀಗ ಅಳಿಸಲಾದ ಪೋಸ್ಟ್‌ನಲ್ಲಿ, ಮಾಲ್ಡೀವಿಯನ್ ಯುವ ಸಬಲೀಕರಣದ ಉಪ ಮಂತ್ರಿ ಮರಿಯಮ್ ಶಿಯುನಾ ಅವರು ಪ್ರಧಾನಿ ಮೋದಿ ಬಗ್ಗೆ ಅಪಹಾಸ್ಯ ಮಾಡಿದ್ದು, ಅಗೌರವದ ಉಲ್ಲೇಖ  ಮಾಡಿದ್ದಾರೆ.

ಪ್ರಮುಖ ಸುದ್ದಿ :-   ರಾಜಕೀಯದಿಂದ ಮತ್ತೆ ನಟನೆಗೆ ; 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2ʼ ಮೂಲಕ ಮತ್ತೆ ಕಿರುತೆರೆಗೆ ಬಂದ ಸ್ಮೃತಿ ಇರಾನಿ

ಈ ಹೇಳಿಕೆಗಳು ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ನಂತರ ಮಾಲ್ಡೀವ್ಸ್ ಸರ್ಕಾರವು ಅವರ ಅವಹೇಳನಕಾರಿ ಹೇಳಿಕೆಗಳನ್ನು ತಿರಸ್ಕರಿಸಿತು, ಮಾಲ್ಡೀವ್ಸ್ ಸರ್ಕಾರವು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗಾಗಿ ಮೂವರು ಉಪ ಮಂತ್ರಿಗಳನ್ನು ಅಮಾನತುಗೊಳಿಸಿದೆ. ದ್ವೀಪಸಮೂಹಕ್ಕೆ ಪ್ರವಾಸವನ್ನು ಯೋಜಿಸಿದ ಕೆಲವರು ತಮ್ಮ ಬುಕಿಂಗ್ ಅನ್ನು ಸಹ ರದ್ದುಗೊಳಿಸಿದ್ದಾರೆ.
ಜನವರಿ 2 ರಂದು, ಪ್ರಧಾನಿ ಮೋದಿ ಅವರು ಲಕ್ಷ ದ್ವೀಪಕ್ಕೆ ಭೇಟಿ ನೀಡಿದರು ಮತ್ತು ಸ್ನಾರ್ಕೆಲಿಂಗ್‌ನಲ್ಲಿ ‘ಉಲ್ಲಾಸದಾಯಕ ಅನುಭವ’ ಸೇರಿದಂತೆ ಹಲವಾರು ಚಿತ್ರಗಳನ್ನು ಹಂಚಿಕೊಂಡರು. X ನಲ್ಲಿನ ಪೋಸ್ಟ್‌ಗಳ ಸರಣಿಯಲ್ಲಿ, ಪ್ರಧಾನಿ ಮೋದಿ ಲಕ್ಷದ್ವೀಪದ ಕಡಲತೀರಗಳು, ನೀಲಿ ಆಕಾಶ ಮತ್ತು ಸಾಗರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement