ಜುಲೈನಿಂದ ಮಕ್ಕಳ ಮೇಲೆ ನೋವಾವಾಕ್ಸ್ ಪ್ರಯೋಗಕ್ಕೆ ಸಿದ್ಧತೆ

ನವದೆಹಲಿ: ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ಇಳಿ‌ಮುಖವಾಗುತ್ತಿರುವ ನಡುವೆ ಮೂರನೇ ಅಲೆಯ ಸಂಭವನೀಯ ಮುನ್ನೆಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.
ಈ ಮಧ್ಯೆ ಭಾರತೀಯ ಸೆರಂ ಸಂಸ್ಥೆ ಜುಲೈ ತಿಂಗಳಿನಿಂದ “ನೋವಾವಾಕ್ಸ್” ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಕ್ಕೆ ಸಿದ್ದತೆ ಮಾಡಿಕೊಂಡಿದೆ. ಭಾರತೀಯ ಸೆರಂ ಸಂಸ್ಥೆ ಮತ್ತು ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಜತೆಗೂಡಿ “ನೋವಾವಾಕ್ಸ್” ಲಸಿಕೆಯನ್ನು ಉತ್ಪಾದನೆ ಮಾಡುತ್ತಿವೆ.
ನೋವಾವಾಕ್ಸ್ ಲಸಿಕೆ ಶೇ. 90 ರಷ್ಟು ಪರಿಣಾಮಕಾರಿಯಾಗಿರುವ ಹಿನ್ನೆಲೆಯಲ್ಲಿ ನೋವಾವಾಕ್ಸ್ ಇಂಕ್ ಔಷಧ ತಯಾರಿಕಾ ಸಂಸ್ಥೆ ಪುಣೆಯ ವಿಶ್ವದ ಅತಿದೊಡ್ಡ ಔಷಧ ತಯಾರಿಕಾ ಸಂಸ್ಥೆ ಭಾರತೀಯ ಸೆರಂ ಸಂಸ್ಥೆ ಜೊತೆ ಲಸಿಕೆ ಉತ್ಪಾದನೆ ಸಂಬಂಧ ಒಪ್ಪಂದ ಮಾಡಿಕೊಂಡಿದೆ.
ಎನ್ ವಿ ಎಕ್ಸ್ – ಕೋವ್ 2373 ಲಸಿಕೆ ಶೇಕಡಾ ನೂರರಷ್ಟು ಪರಿಣಾಮಕಾರಿಯಾಗಿದೆ. ಸದ್ಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದ್ದು ಅದರ ಪ್ರಕಾರ ಶೇ.90.4 ರಷ್ಟು ಪರಿಣಾಮಕಾರಿಯಾಗಿದೆ. ಮೂರನೇ ಹಂತ ಮುಗಿಯುವದರ ಒಳಗಾಗಿ ಶೇ100 ಪರಿಣಾಮಕಾರಿಯಾಗಿರಲಿದೆ. ಜೊತೆಗೆ ಸೋಂಕು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ನೋವಾವಾಕ್ಸ್ ಔಷಧ ತಯಾರಿಕಾ ಸಂಸ್ಥೆ ಹೇಳಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

119 ಸ್ಥಳಗಳಲ್ಲಿ ಪ್ರಯೋಗ:
ನೋವಾವಾಕ್ಸ್ ಲಸಿಕೆ ಶೇ. 90 ಕ್ಕೂ ಅಧಿಕ ಪರಿಣಾಮಕಾರಿಯಾಗಿರುವ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಮೆಕ್ಸಿಕೋದ 119 ಕಡೆಗಳಲ್ಲಿ 3 ನೇ ಹಂತದ ಲಸಿಕೆಯ ಪ್ರಯೋಗ ಆರಂಭವಾಗಲಿದೆ ಎಂದು ಔಷಧ ತಯಾರಿಕಾ ಸಂಸ್ಥೆ ತಿಳಿಸಿದೆ.
ಪ್ರಯೋಗದಲ್ಲಿ ಪಾಲ್ಗೊಳ್ಳಲು ಇದುವರೆಗೂ 29,960 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಈ ಕುರಿತು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೋವಿಡ್ ಕಾರ್ಯಪಡೆಯ ಆರೋಗ್ಯ ಸಮಿತಿಯ ಸದಸ್ಯ ಹಾಗೂ ನೀತಿ ಆಯೋಗದ ಸದಸ್ಯ ಡಾ. ವಿಕೆ.ಪಾಲ್‌ ಕೊರೊನಾ ಸೋಂಕು ವಿರುದ್ದ ದ ಹೋರಾಟದಲ್ಲಿ ನೋವಾವಾಕ್ಸ್ ಅತ್ಯಂತ ಪರಿಣಾಮಕಾರಿಯಾಗಿ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಈ‌ ಹಿನ್ನೆಲೆಯಲ್ಲಿ ಪುಣೆಯ ಭಾರತೀಯ ಸೆರಂ ಸಂಸ್ಥೆ ಮಕ್ಕಳ ಮೇಲೆ ಕೆಲಸಕ್ಕೆ ಪ್ರಯೋಗಕ್ಕೆ ಮುಂದಾಗಿದೆ ಎಂದು ತಿಳಿಸಿದ್ದಾರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement