ಭಾರತದ 18 ರಾಜ್ಯಗಳಲ್ಲಿ ಕೋವಿಡ್ -19ರ ಹೊಸ ರೂಪಾಂತರಿ ವೈರಸ್‌ ಪತ್ತೆ: ಆರೋಗ್ಯ ಸಚಿವಾಲಯ

ಕೊರೊನಾ ವೈರಸ್ಸಿನ ಡಬಲ್ ರೂಪಾಂತರ”ವನ್ನು ದೇಶದ 18 ರಾಜ್ಯಗಳಲ್ಲಿ ಪತ್ತೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಐಎನ್‌ಎಸ್‌ಎಸಿಒಜಿ (INSACOG ) ತನ್ನ ಕೆಲಸ ಪ್ರಾರಂಭಿಸಿದಾಗಿನಿಂದ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹಂಚಿಕೊಂಡ ಒಟ್ಟು 10 787 ಕೊರೊನಾ ಪಾಸಿಟಿವ್‌ ಮಾದರಿಗಳಲ್ಲಿ 771 ರೂಪಾಂತರಿ ವೈರಸ್‌ ಪತ್ತೆಯಾಗಿವೆ. ಇವುಗಳಲ್ಲಿ ಬ್ರಿಟನ್‌ (ಬಿ .1.1.7) ವಂಶಾವಳಿಯ ವೈರಸ್‌ಗಳ 736 ಮಾದರಿಗಳು ಸೇರಿವೆ. ದಕ್ಷಿಣ ಆಫ್ರಿಕಾದ (ಬಿ .1.351) ವಂಶಾವಳಿಯ 34 ರುಪಾಂತರಿ ವೈರಸ್‌ಗಳು ಕಂಡುಬಂದಿವೆ. ಬ್ರೆಜಿಲಿಯನ್ (ಪಿ .1) ವಂಶಾವಳಿಯ ವೈರಸ್‌ಗಳ ಒಂದು ಮಾದರಿ ಕಂಡುಬಂದಿದೆ .ಈ ವಿಒಸಿಗಳೊಂದಿಗಿನ ಮಾದರಿಗಳನ್ನು ದೇಶದ 18 ರಾಜ್ಯಗಳಲ್ಲಿ ಗುರುತಿಸಲಾಗಿದೆ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಂಡಿಯನ್ ಸಾರ್ಸ್‌-ಸಿಒವಿ-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 25 ಡಿಸೆಂಬರ್ 2020 ರಂದು ಸ್ಥಾಪಿಸಿದ 10 ರಾಷ್ಟ್ರೀಯ ಪ್ರಯೋಗಾಲಯಗಳ ಒಂದು ಗುಂಪಾಗಿದೆ. ಅಂದಿನಿಂದ ಇಂಡಿಯನ್ ಸಾರ್ಸ್‌-ಸಿಒವಿ-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ಕೋವಿಡ್- 19 ವೈರಸ್‌ಗಳ ಅನುವಂಶೀಯ ಅನುಕ್ರಮಗಳ ಸಾಂಕ್ರಾಮಿಕ ರೋಗಶಾಸ್ತ್ರೀಯ ಪ್ರವೃತ್ತಿಗಳ ಬಗ್ಗೆ ಸಂಶೋಧನೆ ಮಾಡಿ ವಿಶ್ಲೇಷಣೆ ಮಾಡುತ್ತಿದೆ.

ಪ್ರಮುಖ ಸುದ್ದಿ :-   ಆಘಾತಕಾರಿ...| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement