‘ಹಿಂದಿ ಮಾತ್ರ ಕಲಿತ ಬಿಹಾರ, ಉತ್ತರ ಪ್ರದೇಶದವರು ಚೆನ್ನೈನಲ್ಲಿ ಟಾಯ್ಲೆಟ್ ತೊಳಿತಿದ್ದಾರೆ’: ಡಿಎಂಕೆಯ ದಯಾನಿಧಿ ಮಾರನ್ ವಿವಾದಾತ್ಮಕ ಹೇಳಿಕೆ

ಚೆನ್ನೈ: ತಮಿಳುನಾಡಿಗೆ ಬರುವ ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದಿ ಭಾಷಿಕರು ನಿರ್ಮಾಣ ಕೆಲಸ ಅಥವಾ ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಡಿಎಂಕೆ ನಾಯಕನ ಹೇಳಿಕೆಯ ಕ್ಲಿಪ್ ವೈರಲ್ ಆಗಿದ್ದು, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಡಿಎಂಕೆ ಸಂಸದರ ವಿರುದ್ಧ ಮಾತನಾಡದ ಎರಡು ರಾಜ್ಯಗಳ ಇಂಡಿಯಾ ಮೈತ್ರಿಕೂಟದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ಲಿಪ್‌ನಲ್ಲಿ, ಮಾರನ್ ಇಂಗ್ಲಿಷ್ ಕಲಿತವರನ್ನು ಮತ್ತು ಹಿಂದಿಯನ್ನು ಮಾತ್ರ ಕಲಿತವರನ್ನು ಹೋಲಿಸಿ ಮಾತನಾಡಿದ್ದಾರೆ ಮತ್ತು ಇಂಗ್ಲಿಷ್‌ ಕಲಿತವರು ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಹಿಂದಿಯನ್ನು ಮಾತ್ರ ಕಲಿತವರು ಕಟ್ಟಡ ಕಾರ್ಮಿಕರಾಗಿ, ಶೌಚಾಲಯಗಳ ಶುಚಿಗೊಳಿಸುವಂಥ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾರೆ ಎಂದು ಡಿಎಂಕೆ ಮುಖಂಡ ದಯಾನಿಧಿ ಮಾರನ್ (Dayanidhi Maran) ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ್ದ ದಯಾನಿಧಿ ಮಾರನ್ ಹಿಂದಿ ಹೇರಿಕೆ ಕುರಿತು ಮಾತನಾಡುತ್ತಾ, ಬಿಹಾರ, ಉತ್ತರ ಪ್ರದೇಶದಿಂದ ಬರುವ ಮಂದಿ ತಮಿಳುನಾಡಿನಲ್ಲಿ ತಮಿಳು ಕಲಿತುಕೊಂಡು ಕಟ್ಟಡ ಕಾಮಗಾರಿ, ಕಸಗೂಡಿಸುವಿಕೆ ಮತ್ತು ಶೌಚಾಲಯ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದುವೇ ಹಿಂದಿ ಕಲಿತವರ ಕೆಲಸ ಎಂದು ವ್ಯಂಗ್ಯ ಮಾಡುತ್ತಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ಶೆಹಜಾದ್ ಪೂನವಾಲಾ ಅವರು ದೇಶದ ಜನರನ್ನು ಜಾತಿ, ಭಾಷೆ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು ಮತ್ತು ಡಿಎಂಕೆ ಸಂಸದರ ವಿರುದ್ಧ ಮೈತ್ರಿಕೂಟದ “ನಿಷ್ಕ್ರಿಯತೆ” ಯನ್ನು ಟೀಕಿಸಿದರು.
ಬಿಜೆಪಿ ನಾಯಕ ದಯಾನಿಧಿ ಮಾರನ್ ಬಳಸಿದ ಭಾಷೆಯನ್ನು “ದುರದೃಷ್ಟಕರ” ಎಂದು ಕರೆದರು ಮತ್ತು ಇತರ ನಾಯಕರ ಕ್ರಮವನ್ನು ಪರಿಗಣಿಸಿದಾಗ ಈ ಹೇಳಿಕೆಯು ಕಾಕತಾಳೀಯವಲ್ಲ ಎಂದು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement