ಮದುವೆ ಸಂಭ್ರಮ ಕೆಲವೇ ಗಂಟೆಗಳಲ್ಲಿ ಮಾಯ : ಮೊದಲ ರಾತ್ರಿಯೇ ಮದುಮಗ ಆಸ್ಪತ್ರೆ ಸೇರಿದ…ಮದುಮಗಳು ಚಿನ್ನಾಭರಣ-ಹಣದೊಂದಿಗೆ ಪರಾರಿ…!

ಮದುವೆಯ ಸಂಭ್ರಮದ ಮೊದಲರಾತ್ರಿಯೇ ಮದುಮಗಳೇ ನವವಿವಾಹಿತನಿಗೆ ವಿಲನ್‌ ಆಗಿದ್ದು,ಪ್ರಜ್ಞಾಹೀನನಾದ ಮದುಮಗ ಆಸ್ಪತ್ರೆಗೆ ದಾಖಲಾಗಿದ್ದಾನೆ…! ಮದುಮಗನಿಗೆ ನೀಡುವ ಹಾಲಿನಲ್ಲಿ ನಿದ್ದೆ ಬರುವ ವಸ್ತು ಹಾಕಿ ಆತನ ಪ್ರಜ್ಞೆ ತಪ್ಪಿಸಿದ ವಧುವು ಲಕ್ಷಾಂತರ ರೂ.ಗಳ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಬೆಳಗಾಗುವಷ್ಟರಲ್ಲಿ ಪರಾರಿಯಾಗಿದ್ದಾಳೆ…!!
ಮಧ್ಯಪ್ರದೇಶದ  ಛತ್ತರ್‌ಪುರ ಜಿಲ್ಲೆಯ ನೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಕುಲವಾರ ಗ್ರಾಮದ ರಾಜದೀಪ್ ರಾವತ್ ಅವರ ವಿವಾಹವು ಚರಖಾರಿ ನಿವಾಸಿ ಖುಷಿ ತಿವಾರಿ ಎಂದು ಹೇಳಿಕೊಂಡ ಯುವತಿಯೊಂದಿಗೆ ಡಿಸೆಂಬರ್ 12 ರಂದು ಧನುಷ್ಧಾರಿ ದೇವಸ್ಥಾನದಲ್ಲಿ ಪೂರ್ಣ ಸಂಪ್ರದಾಯಗಳೊಂದಿಗೆ ಸಂಭ್ರಮದಿಂದ ನೆರವೇರಿತು. ಆದರೆ ಇದು ಕೆಲವೇ ಗಂಟೆಗಳಲ್ಲಿ ಮಾಯವಾಯಿತು. ಮದುವೆಯ ರಾತ್ರಿ ಹಾಲಿನಲ್ಲಿ ಮದುಮಗಳು ಮಂಪರು ಬರುವ ವಸ್ತು ಬೆರೆಸಿ ವರನಿಗೆ ಕುಡಿಸಿದ್ದಾಳೆ. ಮದುವೆ ರಾತ್ರಿ ಹಾಲು ಕುಡಿದು ವರ ರಾಜದೀಪ ಪ್ರಜ್ಞೆ ತಪ್ಪಿದ್ದಾರೆ. ಇದೇ ವೇಳೆ ವಧು ಮನೆಯಲ್ಲಿಟ್ಟಿದ್ದ ಸುಮಾರು 10 ಲಕ್ಷ ರೂ.ಗಳಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಹಾಗೂ ಹಣದೊಂದಿಗೆ ರಾತ್ರೋರಾತ್ರಿ ಓಡಿ ಹೋಗಿದ್ದಾಳೆ. ಬೆಳಗ್ಗೆ ವರನ ತಾಯಿ ಕೋಣೆಗೆ ತಲುಪಿದಾಗ ತನ್ನ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡಿದ್ದಾಳೆ. ಆದರೆ ವಧುವಿನ ಸುಳಿವೇ ಇರಲಿಲ್ಲ.

ಪ್ರಮುಖ ಸುದ್ದಿ :-   ವಿಜಯಪುರ : 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ 58 ಮಂದಿ ಸಾವಿಗೀಡಾಗಿದ್ದ ಕೊಯಮತ್ತೂರು ಸ್ಫೋಟದ ಆರೋಪಿ ಬಂಧನ

ಮದುವೆಗಾಗಿ ಮಧ್ಯವರ್ತಿಗೆ 1.50 ಲಕ್ಷ ರೂ.
ರಾಜದೀಪ ಅವರ ತಂದೆ ಅಶೋಕ ರಾವತ್ ಅವರು ಮಧ್ಯವರ್ತಿ ಪಪ್ಪು ರಜಪೂತ ಅವರಿಗೆ ಮದುವೆಗಾಗಿ 1.5 ಲಕ್ಷ ರೂ. ಹಣ ನೀಡಿದ್ದರು ಎಂದು ಹೇಳಲಾಗಿದೆ. ಖುಷಿ ಜೊತೆಗೆ ಆಕೆಯ ಸಹೋದರ ಛೋಟು ತಿವಾರಿ, ಸ್ನೇಹಿತ ವಿನಯ ತಿವಾರಿ ಎಂದು ಹೇಳಿಕೊಂಡವರು ಮತ್ತು ಮಧ್ಯವರ್ತಿ ಪಪ್ಪು ರಜಪೂತ ಸಹ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುವೆಯ ನಂತರ ಎಲ್ಲರೂ ಮದುಮಗಳಾದ ಖುಷಿಯನ್ನು ಬಿಟ್ಟು ತಮ್ಮ ತಮ್ಮ ಊರಿಗೆ ಹೋದರು.
ಆದರೆ ಬೆಳಿಗ್ಗೆ ನೋಡಿದರೆ, ವರ ಪ್ರಜ್ಞೆ ತಪ್ಪಿ ಬಿದ್ದಿದ್ದ. ವಧುವಿನ ಸುಳಿವೇ ಇರಲಿಲ್ಲ. ನವವಿವಾಹಿತನನ್ನು ನೌಗಾಂವ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಛತ್ತರ್‌ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ನೆರವಿನಿಂದ ರಾಪದೀಪ ಅವರು ಪ್ರಜ್ಞೆಗೆ ಮರಳಿದರು.
ವರನ ತಂದೆ ಅಶೋಕ ರಾವತ್ ಅವರು ಖುಷಿ ತಿವಾರಿ, ಆಕೆಯ ಸಹೋದರ ಛೋಟು ತಿವಾರಿ, ಸ್ನೇಹಿತ ವಿನಯ ತಿವಾರಿ ಮತ್ತು ಮಧ್ಯವರ್ತಿ ಪಪ್ಪು ರಜಪೂತ್ ಎಂಬವರ ವಿರುದ್ಧ ನೌಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ.. |ಹಾಸ್ಯನಟ ಕಪಿಲ್ ಶರ್ಮಾ ಕೆಫೆ ಮೇಲೆ ಒಂಬತ್ತು ಗುಂಡು ಹಾರಿಸಿದ ಖಲಿಸ್ತಾನಿ ಭಯೋತ್ಪಾದಕ

ಖುಷಿ ತನ್ನ ಕುಟುಂಬದೊಂದಿಗೆ ಚರಖಾರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವುದಾಗಿ ತಿಳಿಸಲಾಗಿತ್ತು ಎಂದು ಅಶೋಕ ರಾವತ್ ಹೇಳಿದ್ದಾರೆ. ಅಲ್ಲಿ ಆರಂಭಿಕ ಮಾತುಕತೆ ಮತ್ತು ಮದುವೆಯ ವ್ಯವಸ್ಥೆಗಳನ್ನು ಮಾಡಲಾಯಿತು. ಮಹಿಳೆ ಇಂತಹ ಮೋಸದ ಸಂಚಿನಲ್ಲಿ ಭಾಗಿಯಾಗಿರುವ ಗ್ಯಾಂಗ್‌ನ ಭಾಗವಾಗಿದ್ದಾಳೆ ಮತ್ತು ಈ ಹಿಂದೆ ಇತರ ಯುವಕರನ್ನು ವಂಚಿಸಿದ ಸಾಧ್ಯತೆಯಿದೆ ಎಂದು ಈಗ ಶಂಕಿಸಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಇದೀಗ ದರೋಡೆಕೋರರಾದ ವಧು ಮತ್ತು ಆಕೆಯ ಸಹಚರರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ರಾಜದೀಪ ಮತ್ತು ಅವರ ತಂದೆ ಅಶೋಕ ರಾವತ್ ಅವರು ತಮಗಾದ ಕಷ್ಟವನ್ನು ವಿವರಿಸಲು ಮತ್ತು ನ್ಯಾಯವನ್ನು ಪಡೆಯಲು ಪೊಲೀಸ್‌ ಠಾಣೆ ಸುತ್ತುತ್ತಿದ್ದಾರೆ ಈ ಘಟನೆಯು ಕುಟುಂಬವನ್ನು ಆರ್ಥಿಕವಾಗಿ ನಷ್ಟಕ್ಕೆ ದೂಡಿದ್ದು ಮಾತ್ರವಲ್ಲದೆ ಅವರ ಕನಸುಗಳನ್ನೂ ಹಾಳು ಮಾಡಿದೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement