ಕೇಂದ್ರ ಬ್ಯಾಂಕ್‌ಗಳು ಹಣದುಬ್ಬರ ನಿಭಾಯಿಸಲು ಬಡ್ಡಿದರ ಹೆಚ್ಚಿಸುವುದರಿಂದ ಮುಂದಿನ ವರ್ಷ ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ಎಚ್ಚರಿಸಿದ ವಿಶ್ವ ಬ್ಯಾಂಕ್

ಹಣದುಬ್ಬರಕ್ಕೆ ಪ್ರತಿಕ್ರಿಯೆಯಾಗಿ ವಿಶ್ವದಾದ್ಯಂತ ಹಲವಾರು ಕೇಂದ್ರೀಯ ಬ್ಯಾಂಕ್‌ಗಳು ಏಕಕಾಲದಲ್ಲಿ ಬಡ್ಡಿದರಗಳನ್ನು ಹೆಚ್ಚಿಸುತ್ತಿರುವುದರಿಂದ ಮುಂದಿನ ವರ್ಷ ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ವಿಶ್ವಬ್ಯಾಂಕ್ ಶುಕ್ರವಾರ ಎಚ್ಚರಿಸಿದೆ.
ಬೆಳವಣಿಗೆ ಹೊಂದುತ್ತಿರುವ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿನ ಹಣಕಾಸಿನ ಬಿಕ್ಕಟ್ಟುಗಳ ಸರಣಿಯು ಶಾಶ್ವತ ಹಾನಿಯನ್ನುಂಟುಮಾಡುತ್ತದೆ ಎಂದು ವಿಶ್ವ ಬ್ಯಾಂಕ್‌ ಹೇಳಿದೆ. ವಿಶ್ವಬ್ಯಾಂಕ್ ವರದಿಯೊಂದರಲ್ಲಿ ವಿಶ್ವದಾದ್ಯಂತದ ಕೇಂದ್ರೀಯ ಬ್ಯಾಂಕ್‌ಗಳು ಕಳೆದ ಐದು ದಶಕಗಳಲ್ಲಿ ಕಂಡುಬರದ ಸಿಂಕ್ರೊನಿಸಿಟಿಯೊಂದಿಗೆ ಈ ವರ್ಷ ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ, ಈ ಪ್ರವೃತ್ತಿಯು ಮುಂದಿನ ವರ್ಷವೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಅದರ ವರದಿ ತಿಳಿಸಿದೆ.
“ಆದರೂ ಪ್ರಸ್ತುತ ನಿರೀಕ್ಷಿತ ಬಡ್ಡಿದರ ಹೆಚ್ಚಳದ ಪಥ ಮತ್ತು ಇತರ ನೀತಿ ಕ್ರಮಗಳು ಜಾಗತಿಕ ಹಣದುಬ್ಬರವನ್ನು ಸಾಂಕ್ರಾಮಿಕ ರೋಗದ ಮೊದಲು ಕಂಡುಬರುವ ಮಟ್ಟಕ್ಕೆ ತರಲು ಸಾಕಾಗುವುದಿಲ್ಲ. ಹೂಡಿಕೆದಾರರು ಕೇಂದ್ರೀಯ ಬ್ಯಾಂಕುಗಳು ಜಾಗತಿಕ ಹಣಕಾಸು ನೀತಿ ದರಗಳನ್ನು 2023 ರ ವೇಳೆಗೆ ಸುಮಾರು 4%ಕ್ಕೆ ಹೆಚ್ಚಿಸುತ್ತವೆ ಎಂದು ನಿರೀಕ್ಷಿಸುತ್ತಾರೆ. ಇದು 2021 ರ ಸರಾಸರಿಗಿಂತ 2% ಪಾಯಿಂಟ್‌ಗಳ ಹೆಚ್ಚಳವಾಗಿದೆ ಎಂದು ವಿಶ್ವಬ್ಯಾಂಕ್‌ ವರದಿಯು ಹೇಳಿದೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಪೂರೈಕೆ ಸರಪಳಿಯ ಅಡೆತಡೆಗಳು ಮತ್ತು ಕಾರ್ಮಿಕ-ಮಾರುಕಟ್ಟೆಯ ಒತ್ತಡಗಳು ಕಡಿಮೆಯಾಗದಿದ್ದಲ್ಲಿ, ಆ ಬಡ್ಡಿದರದ ಹೆಚ್ಚಳವು ಜಾಗತಿಕ ಕೋರ್ ಹಣದುಬ್ಬರ ದರ (ಇಂಧನ ಹಾಗೂ ಶಕ್ತಿ ಹೊರತುಪಡಿಸಿ) 2023ರಲ್ಲಿ ಸುಮಾರು 5%ಕ್ಕೆ ನಿಲ್ಲಬಹುದು. ಇದು ಸಾಂಕ್ರಾಮಿಕ ರೋಗದ ಮೊದಲು ಐದು ವರ್ಷಗಳ ಸರಾಸರಿಗಿಂತ ಸುಮಾರು ದ್ವಿಗುಣಗೊಳ್ಳಲಿದೆ. ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರೀಯ ಬ್ಯಾಂಕುಗಳು ಹೆಚ್ಚುವರಿ 2 ಶೇಕಡಾವಾರು ಪಾಯಿಂಟ್‌ಗಳಿಂದ ಬಡ್ಡಿದರಗಳನ್ನು ಹೆಚ್ಚಿಸಬೇಕಾಗಬಹುದು ಎಂದು ವಿಶ್ವ ಬ್ಯಾಂಕ್ ವರದಿಯು ಹೈಲೈಟ್ ಮಾಡಿದೆ.

ವಿಶ್ವಬ್ಯಾಂಕ್ ಗ್ರೂಪ್‌ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರು, ಜಾಗತಿಕ ಬೆಳವಣಿಗೆ ತೀವ್ರವಾಗಿ ನಿಧಾನವಾಗುತ್ತಿದೆ, ಹೆಚ್ಚಿನ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವುದರಿಂದ ಮತ್ತಷ್ಟು ನಿಧಾನವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಹೊಸ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ ಜನರಿಗೆ ವಿನಾಶಕಾರಿಯಾದ ದೀರ್ಘಕಾಲೀನ ಪರಿಣಾಮಗಳೊಂದಿಗೆ ಈ ಪ್ರವೃತ್ತಿಗಳು ಮುಂದುವರಿಯುತ್ತವೆ ಎಂಬುದು ನನ್ನ ತೀವ್ರ ಕಳವಳವಾಗಿದೆ” ಎಂದು ಅವರು ಹೇಳಿದರು.
ಕಡಿಮೆ ಹಣದುಬ್ಬರ ದರಗಳು, ಕರೆನ್ಸಿ ಸ್ಥಿರತೆ ಮತ್ತು ವೇಗದ ಬೆಳವಣಿಗೆಯನ್ನು ಸಾಧಿಸಲು, ನೀತಿ ನಿರೂಪಕರು ಬಳಕೆಯನ್ನು ಕಡಿಮೆ ಮಾಡುವುದರತ್ತ ತಮ್ಮ ಗಮನ ಹರಿಸುವುದಕ್ಕಿಂತ ಹೆಚ್ಚಾಗು ಉತ್ಪಾದನೆಯನ್ನು ಹೆಚ್ಚಿಸುವಲ್ಲ ಗಮನ ಕೊಡಬೇಕು. ನೀತಿಗಳು ಹೆಚ್ಚುವರಿ ಹೂಡಿಕೆಯನ್ನು ಸೃಷ್ಟಿಸಲು ಮತ್ತು ಉತ್ಪಾದಕತೆ ಮತ್ತು ಬಂಡವಾಳ ಹಂಚಿಕೆಯನ್ನು ಸುಧಾರಿಸಲು ಪ್ರಯತ್ನಿಸಬೇಕು, ಇದು ಬೆಳವಣಿಗೆ ಮತ್ತು ಬಡತನ ಕಡಿತಕ್ಕೆ ನಿರ್ಣಾಯಕವಾಗಿದೆ ಎಂದು  ಮಾಲ್ಪಾಸ್ ಹೇಳಿದ್ದಾರೆ.ಆದಾಗ್ಯೂ, ಜಾಗತಿಕ ಆರ್ಥಿಕ ಹಿಂಜರಿತದ ಹಲವಾರು ಐತಿಹಾಸಿಕ ಸೂಚಕಗಳು ಈಗಾಗಲೇ ಎಚ್ಚರಿಕೆಗಳನ್ನು ನೀಡುತ್ತಿವೆ ಮತ್ತು 1970ರಿಂದ ಆರ್ಥಿಕ ಹಿಂಜರಿತದ ನಂತರದ ಚೇತರಿಕೆಯ ನಂತರ ಜಾಗತಿಕ ಆರ್ಥಿಕತೆಯು ತನ್ನ ನಿಧಾನಗತಿಯಲ್ಲಿದೆ ಎಂದು ವಿಶ್ವ ಬ್ಯಾಂಕ್ ಸ್ಪಷ್ಟಪಡಿಸಿದೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

 

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement