ಭಾರತದಲ್ಲಿ ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ ೧.೯೦ ಲಕ್ಷ ಮಕ್ಕಳು..!

ನವದೆಹಲಿ: ಕೊರೊನಾ ಸಾಂಕ್ರಾಮಿಕವು ಕೇವಲ ಉದ್ಯೋಗ, ನೆಮ್ಮದಿ, ಆರೋಗ್ಯವನ್ನು ಮಾತ್ರ ಕಸಿದುಕೊಂಡಿಲ್ಲ ಲಕ್ಷಾಂತರ ಮಕ್ಕಳ ಭವಿಷ್ಯವನ್ನೇ ಕಿತ್ತುಕೊಂಡಿದೆ. ಕೊರೊನಾ ಸೋಂಕಿನಿಂದ ಜೀವತೆತ್ತ ಪಾಲಕರು ತಮ್ಮ ಮಕ್ಕಳನ್ನು ಅನಾಥರನ್ನಾಗಿಸಿದ್ದಾರೆ. ತಂದೆ, ತಾಯಿಯ ಆಶ್ರಯ ಪಡೆಯಬೇಕಿದ್ದ ಮಕ್ಕಳು ಸೋಂಕಿನಿಂದಾಗಿ ಪಾಲಕರನ್ನು ಕಳೆದುಕೊಂಡು ಕೆಲವರು ಅನಾಥರಾದರೆ, ಬಹುತೇಕರು ತಂದೆ ಅಥವಾ ತಾಯಿ ಪ್ರೀತಿಯಿಂದ ವಂಚಿತರಾಗಿದ್ದಾರೆ.

ಕೊರೊನಾ ಸೋಂಕು ಆರಂಭವಾದ ೧೪ ತಿಂಗಳುಗಳಲ್ಲಿ ವಿಶ್ವದ ೨೧ ದೇಶಗಳಲ್ಲಿ ೧೫ ಲಕ್ಷ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದರಲ್ಲಿ ೧,೯೦,೦೦೦ ಮಕ್ಕಳು ಭಾರತದಲ್ಲಿದ್ದಾರೆ ಎಂದು ಲ್ಯಾನ್ಸೆಟ್ ವರದಿ ತಿಳಿಸಿದೆ.

ಸಮುದಾಯ ಮಟ್ಟದಲ್ಲೂ ಸೋಂಕು ಹರಡುವ ಮೂಲಕ ಅನೇಕರು ಸೋಂಕಿಗೆ ತುತ್ತಾಗುವಂತೆ ಮಾಡಿದೆ. ಕುಟುಂಬದಲ್ಲೂ ಸೋಂಕು ಕಾಣಿಸಿಕೊಂಡು ಅನೇಕರು ತಮ್ಮ ಸಂಬಂಧಿಕರನ್ನು ಕಣ್ಣೆದುರೇ ಕಳೆದುಕೊಂಡಿರುವ ಘಟನೆಗಳೂ ನಡೆದಿವೆ. ಲಕ್ಷಾಂತರ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿದ್ದಾರೆ. ದಕ್ಷಿಣ ಆಫ್ರಿಕಾ, ಪೆರು, ಅಮೆರಿಕ, ಭಾರತ, ಬ್ರೆಜಿಲ್ ಹಾಗೂ ಮೆಕ್ಸಿಕೋದಲ್ಲಿ ಹೆಚ್ಚು ಮಕ್ಕಳು ತಮ್ಮ ತಂದೆ, ತಾಯಿ, ಅಜ್ಜ ಅಜ್ಜಿಯಂದಿರನ್ನು ಕಳೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ೨೫,೫೦೦ ಮಂದಿ ತಾಯಿಯನ್ನು ಕಳೆದುಕೊಂಡಿದ್ದಾರೆ. ೯೦,೭೫೧ ಮಂದಿ ತಂದೆಯನ್ನು ಕಳೆದುಕೊಂಡಿದ್ದಾರೆ. ೧೨ ಮಂದಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ.

ಕೊರೊನಾ ಕಾರಣದಿಂದಾಗಿ ೧,೧೩೪.೦೦೦ ಮಕ್ಕಳು ಪೋಷಕರು ಅಥವಾ ಪಾಲನೆ ಮಾಡುವ ಅಜ್ಜ, ಅಜ್ಜಿಯಂದಿರನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ೧೦,೪೨,೦೦೦ ಮಕ್ಕಳು ತಾಯಿ, ತಂದೆ ಅಥವಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಹೆಚ್ಚಿನವರು ಒಬ್ಬರನ್ನು ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ೧೫,೬೨,೦೦೦ ಮಕ್ಕಳು ಕನಿಷ್ಠ ಒಬ್ಬ ಪೋಷಕರು ಅಥವಾ ಪಾಲನೆ ಮಾಡುವವರನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರಾಥಮಿಕ ಆರೈಕೆದಾರರನ್ನು ಕಳೆದುಕೊಂಡಿರುವ ದೇಶಗಳಲ್ಲಿ ದಕ್ಷಿಣ ಆಫ್ರಿಕಾ, ಪೆರು, ಅಮೆರಿಕ, ಭಾರತ, ಬ್ರೆಜಿಲ್ ಮತ್ತು ಮೆಕ್ಸಿಕೋ, ಅರ್ಜೆಂಟೀನಾ, ರಷ್ಯಾ ಕೂಡ ಸೇರಿವೆ. ಭಾರತದಲ್ಲಿ ೨,೮೯೮ ಮಕ್ಕಳು ಅಜ್ಜಿಯಂದಿರನ್ನು ಕಳೆದುಕೊಂಡಿದ್ದರೆ, ೯ ಮಕ್ಕಳು ಇಬ್ಬರನ್ನೂ ಕಳೆದುಕೊಂಡಿದ್ದಾರೆ.

ಭಾರತದಲ್ಲಿ ೧ ಸಾವಿರ ಮಕ್ಕಳಿಗೆ ಪ್ರಾಥಮಿಕ ಮತ್ತು ಪಾಲನೆ ನಷ್ಟದ ದರ ೦.೫ರಷ್ಟಿದೆ. ದಕ್ಷಿಣ ಆಫ್ರಿಕಾದಲ್ಲಿ ಶೇ.೬.೪, ಪೆರುವಿನಲ್ಲಿ ಶೇ.೧೪.೧, ಬ್ರೆಜಿಲ್ ನಲ್ಲಿ ಶೇ.೩.೫, ಕೊಲಂಬಿಯಾದಲ್ಲಿ ಶೇ.೩.೪, ಮೆಕ್ಸಿಕೋದಲ್ಲಿ ಶೇ.೫.೧, ರಷ್ಯಾದಲ್ಲಿ ಶೇ.೨.೦, ಅಮೆರಿಕದಲ್ಲಿ ಶೇ.೧.೮ರಷ್ಟಿದೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement