ಕಾಂಗ್ರೆಸ್ ಸಂಸದರ ಆವರಣದಲ್ಲಿ 100 ಆದಾಯ ತೆರಿಗೆ ಅಧಿಕಾರಿಗಳು; ದಾಳಿಯಲ್ಲಿ 300 ಕೋಟಿ ರೂ. ವಶ ; ವರದಿ

ನವದೆಹಲಿ: ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವ ಲೆಕ್ಕಕ್ಕೆ ಸಿಗದ ನಗದಿನ ಮೌಲ್ಯ 300 ಕೋಟಿ ರೂಪಾಯಿ ಆಗಬಹುದು ಎಂದು ಶನಿವಾರ ಅಧಿಕೃತ ಮೂಲಗಳು ತಿಳಿಸಿವೆ.
ಚಬುಧವಾರ ಆರಂಭವಾದ ದಾಳಿಯಲ್ಲಿ ಚವಶಪಡಿಸಿಕೊಂಡಿರುವ ನಗದು ಹಣ ಒಂದೇ ಕಾರ್ಯಾಚರಣೆಯಲ್ಲಿ ಯಾವುದೇ ಏಜೆನ್ಸಿಯಿಂದ ವಶಪಡಿಸಿಕೊಂಡ “ಅತಿ ಹೆಚ್ಚು” ಕಪ್ಪುಹಣವಾಗಲಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ಗೆ ಸಂಪರ್ಕ ಹೊಂದಿದ ನಿವೇಶನಗಳಿಂದ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ನಗದು ಪ್ಯಾಕ್ ಮಾಡಲು ಸುಮಾರು 200 ದೊಡ್ಡ ಮತ್ತು ಚಿಕ್ಕ ಚೀಲಗಳನ್ನು ಬಳಸಲಾಗಿದೆ. ಎಣಿಕೆ ಮಾಡಲು ಇನ್ನೂ ಕೆಲವು ಬ್ಯಾಗ್‌ಗಳನ್ನು ತೆರೆಯಬೇಕಿದೆ.

ನೋಟುಗಳ ಎಣಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆದಾಯ ತೆರಿಗೆ ಇಲಾಖೆಯು ಸುಮಾರು 40 ದೊಡ್ಡ ಮತ್ತು ಸಣ್ಣ ಯಂತ್ರಗಳನ್ನು ನಿಯೋಜಿಸಿ ಹೆಚ್ಚಿನ ಇಲಾಖೆ ಮತ್ತು ಬ್ಯಾಂಕ್ ಸಿಬ್ಬಂದಿಯನ್ನು ಕರೆತಂದಿದೆ. ವಶಪಡಿಸಿಕೊಂಡ ಹಣವನ್ನು ರಾಜ್ಯದ ಸರ್ಕಾರಿ ಬ್ಯಾಂಕ್‌ಗಳಿಗೆ ಸಾಗಿಸಲು ಇಲಾಖೆಯು ಹೆಚ್ಚಿನ ವಾಹನಗಳನ್ನು ಬಳಸಿದೆ.
ಇದಲ್ಲದೆ, ಬೋಲಂಗಿರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ 100 ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ಶನಿವಾರ , ಒಡಿಶಾದ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಆದಾಯ ತೆರಿಗೆ ತಂಡಗಳು ರಾಂಚಿಯ ಧೀರಜ್ ಸಾಹು ಅವರ ಆವರಣದಿಂದ ಇನ್ನೂ ಮೂರು ಬ್ಯಾಗ್‌ಗಳನ್ನು ವಶಪಡಿಸಿಕೊಂಡರೆ, ಮದ್ಯದ ಕಾರ್ಖಾನೆಗಳ ನಿರ್ವಹಣೆಯ ಉಸ್ತುವಾರಿ ವಹಿಸಿದ್ದ ಬಂಟಿ ಸಾಹು ಎಂಬುವವರ ಮನೆಯಿಂದ ಸುಮಾರು 19 ಚೀಲಗಳ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಟಿ ಸಾಹು ಮನೆಯಿಂದ ವಸೂಲಿಯಾದ ಮೊತ್ತ 20 ಕೋಟಿ ದಾಟುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ 225 ಕೋಟಿ ರೂ.ಗೂ ಹೆಚ್ಚು ಹಣವನ್ನು ಎಣಿಕೆ ಮಾಡಲಾಗಿದ್ದು, ಒಡಿಶಾದ ಸರ್ಕಾರಿ ಬ್ಯಾಂಕ್ ಶಾಖೆಗಳಲ್ಲಿ ಹಣವನ್ನು ನಿರಂತರವಾಗಿ ಠೇವಣಿ ಮಾಡಲಾಗುತ್ತಿದೆ. ಹೆಚ್ಚಿನ ಕರೆನ್ಸಿ ನೋಟುಗಳು 500 ರೂ.ಮುಖ ಬೆಲೆಯದ್ದಾಗಿದೆ.
ಆದಾಯ ತೆರಿಗೆ ಇಲಾಖೆ ತನಿಖಾಧಿಕಾರಿಗಳು ವಿವಿಧ ಕಂಪನಿ ಅಧಿಕಾರಿಗಳು ಮತ್ತು ಇತರರ ಹೇಳಿಕೆಗಳನ್ನು ದಾಖಲಿಸಲು ಪ್ರಾರಂಭಿಸಿದ್ದಾರೆ. ಧೀರಜ್ ಸಾಹು ಇಲ್ಲಿಯವರೆಗೆ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement