ವೀಡಿಯೊ…| ಚಂಡೀಗಢ ಮೇಯರ್ ಚುನಾವಣೆ : ಮತಪತ್ರಗಳ ಮೇಲೆ ರಿಟರ್ನಿಂಗ್ ಆಫೀಸರ್ ಟಿಕ್ ಮಾಡುವ ಮತ್ತೊಂದು ವೀಡಿಯೊ ವೈರಲ್‌

ಚಂಡೀಗಢ : ಚಂಡೀಗಢದ ಮೇಯರ್ ಚುನಾವಣೆಯ ವಿವಾದದ ಮತ್ತೊಂದು ಟ್ವಿಸ್ಟ್‌ನಲ್ಲಿ, ಹೊಸ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದೆ, ಇದರಲ್ಲಿ ಸಭಾಂಗಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಪ್ರಿಸೈಡಿಂಗ್ ಆಫೀಸರ್ ಅನಿಲ ಮಸಿಹ್ ಅವರು ಮತಪತ್ರಗಳಿಗೆ ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ.
ಜನವರಿ 30 ರಂದು ನಡೆದ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ವಿಜೇತರಾಗಿ ಹೊರಹೊಮ್ಮಿದ ಚುನಾವಣೆಯ ನ್ಯಾಯಸಮ್ಮತತೆಯ ಬಗ್ಗೆ ಪ್ರಶ್ನಿಸಿ ಆಮ್‌ ಆದಮಿ ಪಾರ್ಟಿ ಕೌನ್ಸಿಲರ್‌ ಕುಲದೀಪಕುಮಾರ ಅವರು ಈಗಾಗಲೇ ಸುಪ್ರೀ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದರ ಮಧ್ಯೆ ಈಗ ಹೊಸ ವೀಡಿಯೊ ಹೊರಹೊಮ್ಮಿದ್ದು, ಸಿಸಿಟಿವಿ ಕ್ಯಾಮೆರಾದತ್ತ ಕಣ್ಣು ಹಾಯಿಸುವಾಗ ಅನಿಲ ಮಸಿಹ್ ಮತಪತ್ರಗಳನ್ನು ಟಿಕ್ ಮಾಡುವುದನ್ನು ಈ ದೃಶ್ಯಾವಳಿಗಳು ಸೆರೆಹಿಡಿದಿವೆ.
ಸಿಸಿಟಿವಿ ಕ್ಯಾಮೆರಾದ ಟಾಪ್ ಕೋನದಿಂದ ಸೆರೆಹಿಡಿಯಲಾದ ಹೊಸ ವೀಡಿಯೊವನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದೆ ಸ್ವಾತಿ ಮಲಿವಾಳ ಅವರು ಹಂಚಿಕೊಂಡಿದ್ದಾರೆ, ಅವರು ಅನಿಲ ಮಸಿಹ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ಚುನಾವಣಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳ ನಂತರ ಈ ವೀಡಿಯೊವು ವೈರಲ್‌ ಆಯಿತು, ಸೋಮವಾರ ಚುನಾವಣಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಬ್ಯಾಲೆಟ್ ಪೇಪರ್‌ಗಳನ್ನು ವಿರೂಪಗೊಳಿಸಿರುವುದು ಸ್ಪಷ್ಟವಾಗಿದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಅವರ ಕ್ರಮವು ಪ್ರಜಾಪ್ರಭುತ್ವದ ‘ಕಗ್ಗೊಲೆ’ ಮತ್ತು ‘ಅಣಕ’ ಎಂದು ಹೇಳಿದೆ.
ಪ್ರಜಾಪ್ರಭುತ್ವವನ್ನು ಈ ರೀತಿ ಕೊಲೆ ಮಾಡಲು ಬಿಡುವುದಿಲ್ಲ ಮತ್ತು ಚುನಾವಣಾ ಪ್ರಕ್ರಿಯೆಯ ಶುದ್ಧತೆಯ ಬಗ್ಗೆ ತೃಪ್ತಿ ಇಲ್ಲದಿದ್ದರೆ ಸುಪ್ರೀಂ ಕೋರ್ಟ್ ಹೊಸ ಚುನಾವಣೆಗೆ ಆದೇಶಿಸುತ್ತದೆ” ಎಂದು ತ್ರಿಸದಸ್ಯ ವಿಭಾಗೀಯ ಪೀಠದ ನೇತೃತ್ವ ವಹಿಸಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹೇಳಿದರು. .
ಅಲ್ಲದೆ, ಫೆಬ್ರವರಿ 19 ರಂದು ನಿಗದಿಪಡಿಸಲಾದ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಚಂಡೀಗಢದ ಮೇಯರ್ ಚುನಾವಣೆ ಪ್ರಕರಣದಲ್ಲಿ ಖುದ್ದು ಹಾಜರಾಗುವಂತೆ ಸುಪ್ರೀಂ ಕೋರ್ಟ್ ಅನಿಲ ಮಸಿಹ್ ಅವರಿಗೆ ಸಮನ್ಸ್ ನೀಡಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

“ಅವನು (ಆರ್‌ಒ) ಮತಯಂತ್ರಗಳನ್ನು ವಿರೂಪಗೊಳಿಸಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನೋಡಿ, ಅವನು ಕ್ಯಾಮೆರಾವನ್ನು ಏಕೆ ನೋಡುತ್ತಿದ್ದಾನೆ? ಶ್ರೀ ಸಾಲಿಸಿಟರ್ (ಜನರಲ್), ಇದು ಪ್ರಜಾಪ್ರಭುತ್ವದ ಅಣಕ ಮತ್ತು ಪ್ರಜಾಪ್ರಭುತ್ವವನ್ನು ಕಗ್ಗೊಲೆಯಾಗಿದೆ, ಇದು ಚುನಾವಣಾಧಿಕಾರಿಯ ವರ್ತನೆಯೇ ಎಂದು ನ್ಯಾಯಮೂರ್ತಿ ಚಂದ್ರಚೂಡ ಅವರು ಪ್ರಶ್ನಿಸಿದರು.
ಚಂಡೀಗಢದಲ್ಲಿ ಹೊಸ ಮೇಯರ್ ಚುನಾವಣೆಯನ್ನು ಕೋರಿದ್ದ ಅರ್ಜಿಗೆ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ನಿರಾಕರಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎಎಪಿ ಸುಪ್ರೀಂ ಕೋರ್ಟ್‌ಗೆ ತೆರಳಿದ ನಂತರ ಸುಪ್ರೀಂ ಕೋರ್ಟ್‌ನ ನಿರ್ದೇಶನ ಬಂದಿದೆ.
ಜನವರಿ 30 ರಂದು ನಡೆದ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು, ಎಲ್ಲಾ ಮೂರು ಸ್ಥಾನಗಳನ್ನು ಉಳಿಸಿಕೊಂಡಿದೆ, ಕಾಂಗ್ರೆಸ್-ಎಎಪಿ ಮೈತ್ರಿಕೂಟವನ್ನು ಸೋಲಿಸಿತು. ಅದರಲ್ಲಿ ಎಂಟು ಮತಗಳನ್ನು ಅಸಿಂಧು ಎಂದು ಘೊಷಿಸಲಾಗಿತ್ತು. ಇದರ ನ್ಯಾಯಸಮ್ಮತತೆ ಪ್ರಶ್ನಿಸಿ ಎಎಪಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement