ಕೇರಳದಲ್ಲಿ ಕೋವಿಡ್ ಉಪ ತಳಿ JN.1 ಪತ್ತೆ ; ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ

ನವದೆಹಲಿ: ಕೇರಳವು ಕೋವಿಡ್‌-19 ಉಪ-ತಳಿ JN.1 ಸೋಂಕಿನ ಪ್ರಕರಣವನ್ನು ಪತ್ತೆ ಮಾಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ದೃಢಪಡಿಸಿವೆ.
ನವೆಂಬರ್ 18 ರಂದು ಆರ್‌ಟಿ-ಪಿಸಿಆರ್‌ (RT-PCR) ಪರೀಕ್ಷೆಯಲ್ಲಿ 79 ವರ್ಷದ ಮಹಿಳೆಯ ಮಾದರಿಯಲ್ಲಿ ಇದು ಪತ್ತೆಯಾಗಿದೆ ಎಂದು ಅದು ತಿಳಿಸಿದೆ. ಶೀತ-ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹೊಂದಿದ್ದ ರೋಗಿಯು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಅಮೆರಿಕದಲ್ಲಿ ಮೊದಲು ಪತ್ತೆಯಾದ ಕೋವಿಡ್‌-19 ಉಪ-ತಳಿ JN.1 ಕುರಿತು ತಿಳಿದುಕೊಳ್ಳಬೇಕಾದದ್ದು…
JN.1 ಓಮಿಕ್ರಾನ್ ಉಪರೂಪಾಂತರಿ ಹಾಗೂ BA.2.86 ನ ವಂಶವಾಳಿಗೆ ಸೇರಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ಒಮಿಕ್ರಾನ್‌ನ “ಗಮನಿಸಬೇಕಾದ ವಂಶಾವಳಿಯ ವಂಶ (“notable descendant lineage)” ಎಂದು ಗುರುತಿಸುತ್ತದೆ, ಅದರ ಹರಡುವಿಕೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯಗಳನ್ನು ಗಮನಿಸುತ್ತದೆ.
ಈ ರೂಪಾಂತರವು ಇತ್ತೀಚೆಗೆ ಅಮೆರಿಕ (ಯುಎಸ್), ಯುನೈಟೆಡ್ ಕಿಂಗ್‌ಡಮ್ (ಯುಕೆ), ಸ್ಪೇನ್, ಐಸ್‌ಲ್ಯಾಂಡ್, ಪೋರ್ಚುಗಲ್, ಇತ್ಯಾದಿ ರಾಷ್ಟ್ರಗಳಲ್ಲಿ ಹರಡಿತ್ತು.
ಈವರೆಗೆ, ಇದು ಭಾರತ ಸೇರಿದಂತೆ 38 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಮತ್ತು ಕೆಲವು ದೇಶಗಳಲ್ಲಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗುವುದು ಹೆಚ್ಚಾಗುವುದಕ್ಕೆ ಕಾರಣವಾಗಿದೆ ಎಂದು ನಂಬಲಾಗಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ಐಎಂಎಫ್‌ನ ಬೇಲ್‌ಔಟ್ ಪ್ಯಾಕೇಜ್ ಮೇಲಿನ ಮತದಾನದಿಂದ ದೂರ ಉಳಿದ ಭಾರತ ; ಪಾಕಿಸ್ತಾನದ 'ಕಳಪೆ ದಾಖಲೆ'ಯ ಉಲ್ಲೇಖ

ಇತ್ತೀಚಿನ ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ದತ್ತಾಂಶವು ಕೇರಳದಲ್ಲಿ ಹೊಸ JN.1 ರೂಪಾಂತರದ ಉಪಸ್ಥಿತಿಯನ್ನು ದೃಢಪಡಿಸಿದೆ.
ಕೇರಳದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚುತ್ತಿರುವ ಮಧ್ಯೆ ಇದು ಪತ್ತೆಯಾಗಿದೆ. ಭಾರತದಲ್ಲಿ ಶುಕ್ರವಾರ 312 ಹೊಸ ಕೋವಿಡ್‌-19 ಪ್ರಕರಣಗಳು ದಾಖಲಾಗಿದ್ದರೆ, ಕೇರಳವೊಂದರಲ್ಲೇ 24 ಗಂಟೆಗಳಲ್ಲಿ 280 ಪ್ರಕರಣಗಳು ವರದಿಯಾಗಿವೆ.
ನ್ಯಾಶನಲ್ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕೋವಿಡ್ ಟಾಸ್ಕ್ ಫೋರ್ಸ್ ಸಹ-ಅಧ್ಯಕ್ಷ ಡಾ. ರಾಜೀವ ಜಯದೇವನ್ ಅವರ ಪ್ರಕಾರ, ಜೆಎನ್.1 ಭಾರತದ ಕೊರೊನಾ ವೈರಸ್ ಪ್ರಕರಣಗಳಲ್ಲಿ ಇತ್ತೀಚಿನ ಉಲ್ಬಣಕ್ಕೆ ಕಾರಣವಾಗುವ ಅಂಶವಾಗಿದೆ.

ಹರಡುವಿಕೆ ತಡೆಗಟ್ಟಲು ಕೇರಳ ಸರ್ಕಾರದ ಯೋಜನೆಗಳು
ಕೇರಳದಲ್ಲಿ ಹೊಸ ಕೋವಿಡ್‌-19 ತಳಿಯ ಆವಿಷ್ಕಾರದೊಂದಿಗೆ, ಕೊರೊನಾ ವೈರಸ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವನ್ನು ಅಧಿಕಾರಿಗಳು ಒತ್ತಿಹೇಳಿದ್ದಾರೆ.
ಇದಲ್ಲದೆ, ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಕೇರಳ ಸರ್ಕಾರವು ಸೂಕ್ಷ್ಮ ಪ್ರದೇಶಗಳಲ್ಲಿ ಅವುಗಳನ್ನು ತಡೆಗಟ್ಟುವ ಕ್ರಮಗಳು ಮತ್ತು ನಿರ್ಬಂಧಗಳನ್ನು ವಿಧಿಸಬಹುದು ಎಂದು ಕೆಲವು ವರದಿಗಳು ಸೂಚಿಸಿವೆ.
ಏತನ್ಮಧ್ಯೆ, ಹೆಚ್ಚಿನ ರೋಗಿಗಳಿಗೆ ಈ ಪ್ರಕರಣಗಳು ತೀವ್ರವಾಗಿ ಬಾಧಿಸಿಲ್ಲ ಎಂದು ತಜ್ಞರು ಹೇಳಿದ್ದಾರೆ ಮತ್ತು ನವೀಕರಿಸಿದ ಲಸಿಕೆಗಳು ಮತ್ತು ಚಿಕಿತ್ಸೆಗಳು JN.1 ಉಪ-ತಳಿಯ ವಿರುದ್ಧ ಪರಿಣಾಮಕಾರಿಯಾಗಿವೆ.
ಕೋವಿಡ್-19ರ ಉಪ ತಳಿ ಜೆಎನ್.1 ಮೊದಲ ಪ್ರಕರಣ ಲಕ್ಸೆಂಬರ್ಗ್‌ನಲ್ಲಿ ಪತ್ತೆಯಾಗಿತ್ತು. ಅದಾದ ಬಳಿಕ ಹಲವು ದೇಶಗಳಿಗೆ ಹಬ್ಬಿತ್ತು.
ಕೇರಳದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ತಮಿಳುನಾಡು ಅಲರ್ಟ್ ಆಗಿದೆ
ಕೇರಳದಲ್ಲಿ ಹೊಸ ಕೊರೊನಾ ವೈರಸ್ ರೂಪಾಂತರವನ್ನು ಪತ್ತೆಹಚ್ಚಿದ ನಂತರ, ತಮಿಳುನಾಡು ಸರ್ಕಾರವು ಕೋವಿಡ್‌-19- ಧನಾತ್ಮಕ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದೆ.
“ಹೆಚ್ಚು ಜ್ವರ ಪ್ರಕರಣಗಳು ಕಂಡುಬಂದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸಲು ತಮಿಳುನಾಡು ರಾಜ್ಯ ಸರ್ಕಾರ ಆದೇಶಿಸಿದೆ” ಎಂದು ರಾಜ್ಯ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಶುಕ್ರವಾರ ಹೇಳಿದ್ದಾರೆ.
“ನಾವು 264 ಜನರನ್ನು ಜ್ವರದ ಕಾರಣಕ್ಕೆ ಪರೀಕ್ಷಿಸಿದ್ದೇವೆ. ಅವರಲ್ಲಿ ಎಂಟು ಜನರು ಕೋವಿಡ್‌-19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ 20 ನಗರಗಳ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ ;ಎಲ್ಲವನ್ನೂ ಹೊಡೆದುರುಳಿಸಿದ ಸೇನೆ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement