ಛತ್ತೀಸ್‌ಗಢ ವಿಧಾನಸಭಾ ಚುನಾವಣೆ : ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ, ಗೆಲ್ಲುವ ಸಾಧ್ಯತೆ ಕಾಂಗ್ರೆಸ್ಸಿಗೋ..? ಬಿಜೆಪಿಗೋ..?

ಮುಂದಿನ ತಿಂಗಳು ನಡೆಯಲಿರುವ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ ಕಂಡುಬಂದಿದೆ.
ಛತ್ತೀಸ್‌ಗಢ ವಿಧಾನಸಭೆಯ 90 ವಿಧಾನಸಭಾ ಕ್ಷೇತ್ರಗಳಲ್ಲಿ ಐದು ವರ್ಷಗಳ ಹಿಂದೆ ಗೆದ್ದಿದ್ದ 68 ಸ್ಥಾನಗಳಿಗೆ ಹೋಲಿಸಿದರೆ ಕಾಂಗ್ರೆಸ್ 50 ಸ್ಥಾನಗಳಿಗೆ ಕುಸಿಯಲಿದೆ ಎಂದು ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹದ ಪ್ರಕ್ಷೇಪಗಳು ತೋರಿಸಿವೆ.
ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಕಳೆದ ವಿಧನಸಭೆ ಚುನಾವಣೆಯಲ್ಲಿ ಕೇವಲ 15 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಚುನಾವಣೆಯಲ್ಲಿ 38 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. 2018 ರಲ್ಲಿ ಗೆದ್ದಿದ್ದ ಏಳು ಸ್ಥಾನಗಳಿಗೆ ಹೋಲಿಸಿದರೆ ಸ್ವತಂತ್ರರು ಮತ್ತು ಸ್ಥಳೀಯ ಪಕ್ಷಗಳು ಸೇರಿದಂತೆ ‘ಇತರರು’ ಎರಡು ಸ್ಥಾನಗಳನ್ನು ಗೆಲ್ಲಬಹುದು ಎಂದು ಅದು ಹೇಳಿದೆ. ಮತ ಹಂಚಿಕೆ ಪ್ರಕ್ಷೇಪಗಳು ಕಾಂಗ್ರೆಸ್ 45 ಶೇಕಡಾ ಮತಗಳನ್ನು ಪಡೆಯಬಹುದು, ಬಿಜೆಪಿ 42 ಶೇಕಡಾ ಮತಗಳನ್ನು ಪಡೆಯಬಹುದು ಮತ್ತು ‘ಇತರರು’ ಶೇಕಡಾ 13ರಷ್ಟು ಮತಗಳನ್ನು ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

ಪ್ರದೇಶವಾರು ಸ್ಥಾನ ಗೆಲ್ಲಬಹುದಾದ ಪ್ರೊಜೆಕ್ಷನ್‌ಗಳು
14 ಸ್ಥಾನಗಳನ್ನು ಹೊಂದಿರುವ ಉತ್ತರ ಸರ್ಗುಜಾ ಪ್ರದೇಶದಲ್ಲಿ ಕಾಂಗ್ರೆಸ್ 8 ಮತ್ತು ಬಿಜೆಪಿ ಆರು ಸ್ಥಾನಗಳನ್ನು ಗೆಲ್ಲಬಹುದು.
12 ಸ್ಥಾನಗಳನ್ನು ಹೊಂದಿರುವ ದಕ್ಷಿಣ ಬಸ್ತಾರ್‌ನಲ್ಲಿ ಪ್ರದೇಶದಲ್ಲಿ ಕಾಂಗ್ರೆಸ್ ಎಂಟು ಮತ್ತು ಬಿಜೆಪಿ ನಾಲ್ಕು ಸ್ಥಾನಗಳನ್ನು ಪಡೆಯಬಹುದು.
64 ಸ್ಥಾನಗಳನ್ನು ಹೊಂದಿರುವ ಕೇಂದ್ರ ಛತ್ತೀಸ್‌ಗಢ ಪ್ರದೇಶದಲ್ಲಿ ಕಾಂಗ್ರೆಸ್ 34 ಸ್ಥಾನಗಳನ್ನು ಗೆಲ್ಲಬಹುದು, ಬಿಜೆಪಿ 28 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಉಳಿದ ಎರಡು ಸ್ಥಾನಗಳು ‘ಇತರರು’ ಗೆಲ್ಲಬಹುದು ಎಂದು ಪೊಜೆಕ್ಷನ್‌ಗಳು ಹೇಳಿವೆ.

ಪ್ರಮುಖ ಸುದ್ದಿ :-   ವ್ಯಕ್ತಿಯೊಬ್ಬರ ಖಾತೆಗೆ ಜಮೆಯಾಯ್ತು ಬರೋಬ್ಬರಿ 9900 ಕೋಟಿ ರೂ....! ಮುಂದಾಗಿದ್ದೇನು..?

ಚುನಾವಣೆಯಲ್ಲಿ ಮುಖ್ಯ ಅಂಶಗಳು….
20%ರಷ್ಟು ಮತದಾರರು ಈ ಚುನಾವಣೆಯಲ್ಲಿ ನಿರುದ್ಯೋಗ ಪ್ರಮುಖ ಸಮಸ್ಯೆ ಎಂದು ಹೇಳಿದರೆ, ಇನ್ನೂ 20%ರಷ್ಟು ಮತದಾರರು ‘ಅಭಿವೃದ್ಧಿ’ ಮುಖ್ಯ ವಿಷಯ ಎಂದು ಹೇಳಿದ್ದಾರೆ.
ಶೇ.16ರಷ್ಟು ಮಂದಿ ಭ್ರಷ್ಟಾಚಾರವೇ ಮುಖ್ಯ ಸಮಸ್ಯೆ ಎಂದು ಹೇಳಿದರೆ, ಶೇ.15ರಷ್ಟು ಮಂದಿ ಬೆಲೆ ಏರಿಕೆಯೇ ಪ್ರಮುಖ ಸಮಸ್ಯೆ ಎಂದು ಹೇಳಿದ್ದಾರೆ.
ಶೇಕಡಾ 14 ರಷ್ಟು ಮತದಾರರು ಹಿಂದುತ್ವವೇ ಮುಖ್ಯ ವಿಷಯ ಎಂದು ಹೇಳಿದರೆ, ಶೇಕಡಾ 8 ರಷ್ಟು ಜನರು ‘ಕಾನೂನು ಮತ್ತು ಸುವ್ಯವಸ್ಥೆ’ ಮುಖ್ಯ ವಿಷಯ ಎಂದು ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement