
ಅಮೆರಿಕದ 100 ವರ್ಷದ ಅಜ್ಜ ಮತ್ತು 102 ವರ್ಷದ ಅಜ್ಜಿ ಇತ್ತೀಚೆಗೆ ಅಮೆರಿಕದಲ್ಲಿ ಮದುವೆಯಾಗಿದ್ದಾರೆ. ಇದು ಈಗ ಗಿನ್ನೆಸ್ ವಿಶ್ವ ದಾಖಲೆಗೆ ಸೇರಿದೆ. ಶತಾಯುಷಿ ದಂಪತಿ – ಬರ್ನಿ ಲಿಟ್‌ಮ್ಯಾನ್ ಮತ್ತು ಮರ್ಜೋರಿ ಫಿಟರ್‌ಮ್ಯಾನ್ – ಈಗ ಅವರಿಬ್ಬರ ಒಟ್ಟು ವಯಸ್ಸು 202 ವರ್ಷ ಮತ್ತು 271 ದಿನಗಳಾಗಿವೆ. ವಿಶ್ವದ ಅತ್ಯಂತ ಹಿರಿಯ ನವವಿವಾಹಿತರು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆ (GWR) ರಂದು ಇದನ್ನು ದೃಢಪಡಿಸಿದೆ. ಇಬ್ಬರೂ ಫಿಲಡೆಲ್ಫಿಯಾದಲ್ಲಿನ ವೃದ್ಧಾಶ್ರಮದಲ್ಲಿ ಭೇಟಿಯಾದರು. ಮೇ 3 ರಂದು ಅವರ ಮದುವೆ ಸಹ ಅಲ್ಲಿಯೇ ನಡೆಯಿತು. ದಂಪತಿ ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚಿಗೆ ಮದುವೆಯಾಗಿದ್ದಾರೆ.

ತಮ್ಮ ಜೀವನ ಸಂಗಾತಿಗಳು ತೀರಿಕೊಂಡ ನಂತರ ಬರ್ನಿ ಮತ್ತು ಮಾರ್ಜೋರಿ ಇಬ್ಬರೂ ವೃದ್ಧಾಶ್ರಮದಲ್ಲಿದ್ದರು. ಅಲ್ಲಿಯೇ ಒಬ್ಬರಿಗೊಬ್ಬರು ಹತ್ತಿರವಾದರು, ನಂತರ ಮದುವೆಯಾದರು. ಅವರಿಬ್ಬರು ದಶಕಗಳ ಹಿಂದೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಒಂದೇ ಸಮಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಬರ್ನಿ ನಿವೃತ್ತ ಇಂಜಿನಿಯರ್ ಹಾಗೂ ಮಾರ್ಜೋರಿ ನಿವೃತ್ತ ಶಿಕ್ಷಕಿ. ಬಾರ್ನಿಯ ಮೊಮ್ಮಗಳು ಸಾರಾ ಸಿಚೆರ್ಮನ್ ಯಹೂದಿ ಕ್ರಾನಿಕಲ್ ಜೊತೆಗಿನ ಸಂವಾದದ ಸಮಯದಲ್ಲಿ ಹೊಸದಾಗಿ ಮದುವೆಯಾದ ವೈಯೋವೃದ್ಧ ದಂಪತಿ ಬಗ್ಗೆ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ