ತೈವಾನ್​ನಲ್ಲಿ ಬೆಂಕಿ ದುರಂತ; 46 ಜನರ ಸಜೀವ ದಹನ, 41ಕ್ಕೂ ಹೆಚ್ಚು ಮಂದಿಗೆ ಗಾಯ

ತೈವಾನ್: ದಕ್ಷಿಣ ತೈವಾನ್‌ನ ನಗರವಾದ ಕಾಹೊಹ್‌ಸ್ಯುಂಗ್​ನಲ್ಲಿ ಬುಧವಾರ ರಾತ್ರಿ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ್ದು, 46 ಜನರು ಸಾವನ್ನಪ್ಪಿದ್ದಾರೆ. 13 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅಗ್ನಿ ದುರಂತದಲ್ಲಿ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದವರು ಅದನ್ನು ನಿಯಂತ್ರಣಕ್ಕೆ ತರುವ ಮುನ್ನ ಅನೇಕ ಮಹಡಿಗಳಿಗೆ ಬೆಂಕಿ ವ್ಯಾಪಿಸಿದೆ. 13 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹಲವು … Continued