3,000 ಅಗ್ನಿವೀರ ಹುದ್ದೆಗಳಿಗೆ ದಾಖಲೆ ಅರ್ಜಿಗಳನ್ನು ಸ್ವೀಕರಿಸಿದ ಭಾರತೀಯ ವಾಯು ಸೇನೆ, ಗಡುವು ವಿಸ್ತರಣೆಗೆ ಮನವಿ..!
ನವದೆಹಲಿ: ದೇಶಾದ್ಯಂತ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿದ್ದ ಸೇನಾ ನೇಮಕಾತಿ ಅಗ್ನಿಪಥ ಯೋಜನೆಗೆ ಈ ವರ್ಷ ಹೆಚ್ಚಿನ ಅರ್ಜಿಗಳು ಬಂದಿವೆ ಎಂದು ಭಾರತೀಯ ವಾಯುಪಡೆ (ಐಎಎಫ್) ತಿಳಿಸಿದೆ. ಕಳೆದ ಸೇನಾ ಭರ್ತಿ ಅಭಿಯಾನಕ್ಕೆ ಸ್ವೀಕರಿಸಿದ 6,31,528 ಅರ್ಜಿಗೆ ಹೋಲಿಸಿದರೆ ಈ ವರ್ಷ ಇದು 7,49,899 ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಐಎಎಫ್ ಟ್ವೀಟ್ನಲ್ಲಿ ತಿಳಿಸಿದೆ. ಯೋಜನೆಗಾಗಿ ಆನ್ಲೈನ್ ಅಪ್ಲಿಕೇಶನ್ … Continued