ಆಂಧ್ರದಲ್ಲಿ ಎರಡು ರೈಲುಗಳು ಡಿಕ್ಕಿ : 8 ಮಂದಿ ಸಾವು, 20 ಮಂದಿಗೆ ಗಾಯ

ವಿಜಯನಗರಂ : ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಭಾನುವಾರ ಎರಡು ರೈಲುಗಳು ಡಿಕ್ಕಿಯಾಗಿ ಎಂಟು ಪ್ರಯಾಣಿಕರು ಮೃತಪಟ್ಟಿದ್ದು, 32 ಮಂದಿ ಗಾಯಗೊಂಡಿದ್ದಾರೆ. ಪ್ರಯಾಣಿಕರ ರೈಲು ವಿಶಾಖಪಟ್ಟಣದಿಂದ ರಾಯಗಡಕ್ಕೆ ಹೋಗುತ್ತಿತ್ತು. ಪೂರ್ವ ಕರಾವಳಿ ರೈಲ್ವೆ ವಲಯದ ವಾಲ್ಟೇರ್ ವಿಭಾಗದ ವಿಜಯನಗರ-ಕೊತ್ತವಲಸ ರೈಲ್ವೆ ವಿಭಾಗದಲ್ಲಿ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಪ್ರಯಾಣಿಕ ರೈಲುಗಳು ಸಂಜೆ 7 ಗಂಟೆ ಸುಮಾರಿಗೆ ಹಳಿತಪ್ಪಿದವು. … Continued

ಆಂಧ್ರಪ್ರದೇಶ: ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಗೆ ಪಿಎಚ್‌ಡಿ, ಎಂಟೆಕ್, ಎಲ್‌ಎಲ್‌ಬಿ, ಎಂಎಸ್‌ಸಿ ಆದವರಿಂದಲೂ ಅರ್ಜಿ…!

ವಿಜಯವಾಡ: ಆಂಧ್ರಪ್ರದೇಶದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ 10 ಪಿಎಚ್‌ಡಿ ಮತ್ತು 930 ಎಂಟೆಕ್ ಪದವೀಧರರು, 94 ವಕೀಲರು ಮತ್ತು 13,961 ಸ್ನಾತಕೋತ್ತರ ಪದವೀಧರರು ಇದ್ದಾರೆ…! ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯ ಅಧಿಕೃತ ಟಿಪ್ಪಣಿಯ ಪ್ರಕಾರ, ಕಾನ್ಸ್‌ಟೇಬಲ್ ಹುದ್ದೆಗೆ ಅರ್ಹತೆಗೆ ಇಂಟರ್‌ಮೀಡಿಯಟ್‌ ಪಾಸ್‌ ಆದರೆ ಸಾಕು. ಭಾನುವಾರ ಲಿಖಿತ ಪರೀಕ್ಷೆ ನಡೆಯಲಿದೆ. ಅಲ್ಲದೆ, … Continued

ಪಿಎಫ್‌ಐ ಪ್ರಕರಣದಲ್ಲಿ ತೆಲಂಗಾಣ, ಆಂಧ್ರಪ್ರದೇಶದಾದ್ಯಂತ 40 ಸ್ಥಳಗಳಲ್ಲಿ ಎನ್‌ಐಎ ದಾಳಿ

ನಿಜಾಮಾಬಾದ್‌:  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಒಳಗೊಂಡ ಭಯೋತ್ಪಾದನೆ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಸುಮಾರು 40 ಸ್ಥಳಗಳಲ್ಲಿ ದಾಳಿ ನಡೆಸಿತು. ಆಂಧ್ರಪ್ರದೇಶದ ಕರ್ನೂಲ್, ನೆಲ್ಲೂರು, ಕಡಪ ಮತ್ತು ಗುಂಟೂರು ಮತ್ತು ತೆಲಂಗಾಣದ ನಿಜಾಮಾಬಾದ್‌ನಲ್ಲಿ ದಾಳಿ ನಡೆಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪಿಎಫ್‌ಐ ಜಿಲ್ಲಾ … Continued

ಆಂಧ್ರದ ಉಡುಪು ತಯಾರಿಕಾ ಕಂಪನಿಯಲ್ಲಿ ಅನಿಲ ಸೋರಿಕೆ: 100ಕ್ಕೂ ಹೆಚ್ಚು ಮಹಿಳಾ ನೌಕರರು ಆಸ್ಪತ್ರೆಗೆ ದಾಖಲು

ವಿಶಾಖಪಟ್ಟಣಂ: ಅನಕಪಲ್ಲಿ ಜಿಲ್ಲೆಯ ಅಚ್ಚುತಪುರಂ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್) ನಲ್ಲಿ ಮಂಗಳವಾರ ಸೋರಿಕೆಯಾದ ವಿಷಕಾರಿ ಅನಿಲವನ್ನು ಉಸಿರಾಡಿದ ಬಟ್ಟೆ ಉತ್ಪಾದನಾ ಘಟಕದ 100 ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಅಸ್ವಸ್ಥರಾಗಿದ್ದಾರೆ. ಎಸ್ ಇಝಡ್ ನಲ್ಲಿ ಹಲವು ತಿಂಗಳುಗಳಲ್ಲಿ ಎರಡನೇ ಬಾರಿ ಅನಿಲ ಸೋರಿಕೆ ವರದಿಯಾಗಿದೆ. ಆಂಧ್ರ ಪ್ರದೇಶದ ಅಚುತಪುರಂ ಜಿಲ್ಲೆಯ ವಿಶೇಷ ಆರ್ಥಿಕ ವಲಯದಲ್ಲಿರುವ … Continued

ಆಂಧ್ರಪ್ರದೇಶದಲ್ಲಿ ಪ್ರಧಾನಿ ಮೋದಿ ಹೆಲಿಕಾಪ್ಟರ್ ಬಳಿ ಹಾರಿದ ಕಪ್ಪು ಬಲೂನ್‌ಗಳು : 4 ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಹೈದರಾಬಾದ್‌ : ಆಂಧ್ರಪ್ರದೇಶದ ಗನ್ನವರಂ ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಟೇಕಾಫ್ ಆದ ನಂತರ ಕಪ್ಪು ಬಲೂನ್‌ಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ಮೋದಿ ಅವರ ಆಂಧ್ರಪ್ರದೇಶ ಭೇಟಿಯ ವೇಳೆ ಗನ್ನವರಂ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪವಾಗಿದೆ ಎಂಬ ಹೇಳಿಕೆಯನ್ನು ನಿರಾಕರಿಸಿದ ಪೊಲೀಸರು, ಪ್ರಧಾನಿ ಮೋದಿ … Continued