ಲೋಕಸಭೆಯಲ್ಲಿ ಟೆಲಿಕಾಂ ಮಸೂದೆ ಮಂಡನೆ ; ‘ರಾಷ್ಟ್ರೀಯ ಭದ್ರತೆ’ ಸಂದರ್ಭದಲ್ಲಿ ಸೇವೆ ಸ್ಥಗಿತ, ಸ್ವಾಧೀನಕ್ಕೆ ಅವಕಾಶ

ನವದೆಹಲಿ: ದೂರಸಂಪರ್ಕ ವಲಯವನ್ನು ನಿಯಂತ್ರಿಸುವ 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಕಾಯಿದೆಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸೋಮವಾರ ದೂರಸಂಪರ್ಕ ಮಸೂದೆ-2023 ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಲೋಕಸಭೆಯಲ್ಲಿ ಟೆಲಿಕಾಂ ಮಸೂದೆಯನ್ನು ಮಂಡಿಸಿದರು. ಪ್ರಸ್ತಾವಿತ ಮಸೂದೆಯು ರಾಷ್ಟ್ರೀಯ ಭದ್ರತೆ ಉಲ್ಲೇಖಿಸಿ, ಯಾವುದೇ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಬಹುದಾಗಿದೆ. ಅಲ್ಲದೆ, … Continued

50 ರಾಷ್ಟ್ರಗಳಲ್ಲಿ ಆಪಲ್ ಅಡ್ವೈಸರಿ : ಪ್ರತಿಪಕ್ಷಗಳ ನಾಯಕರ ಐ ಫೋನ್‌ ಹ್ಯಾಕಿಂಗ್ ಯತ್ನ ಆರೋಪ ತಳ್ಳಿಹಾಕಿದ ಕೇಂದ್ರ ; ತನಿಖೆಗೆ ಆದೇಶ

ನವದೆಹಲಿ : “ಸರ್ಕಾರಿ ಪ್ರಾಯೋಜಿತ” ಹ್ಯಾಕರ್‌ಗಳು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಎಚ್ಚರಿಕೆಯ ಸಂದೇಶಗಳನ್ನು ಆಪಲ್‌ ಹಂಚಿಕೊಂಡ ನಂತರ ವಿರೋಧ ಪಕ್ಷದ ಸಂಸದರು ಸರ್ಕಾರ ತಮ್ಮ ಮೇಲೆ “ಕಣ್ಗಾವಲು” ಮಾಡುತ್ತಿದೆ ಎಂಬ ಆರೋಪಗಳನ್ನು ಸರ್ಕಾರವು ತಳ್ಳಿಹಾಕಿದೆ. ಐಟಿ ಸಚಿವ ಅಶ್ವಿನಿ ವೈಷ್ಣವ ಅವರು, ಆಪಲ್ 150 ದೇಶಗಳಲ್ಲಿ ಇಂತಹ ಅಧಿಸೂಚನೆಗಳನ್ನು ಹೊರಡಿಸಿದೆ, ಇವುಗಳು … Continued

ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಯುಪಿಐ ಅಳವಡಿಸಲು ಬಯಸುವ 13 ದೇಶಗಳ ಜೊತೆ ಎಂಒಯುಗಳಿಗೆ ಸಹಿ : ಅಶ್ವಿನಿ ವೈಷ್ಣವ್

ನವದೆಹಲಿ: ಡಿಜಿಟಲ್ ಪಾವತಿಗಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಅಳವಡಿಸಿಕೊಳ್ಳಲು ಬಯಸುವ 13 ದೇಶಗಳೊಂದಿಗೆ ಭಾರತವು ತಿಳುವಳಿಕೆ ಪತ್ರ (ಎಂಒಯು) ಗೆ ಸಹಿ ಹಾಕಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ರಂದು ತಿಳಿಸಿದ್ದಾರೆ. ಲಕ್ನೋದಲ್ಲಿ ಜಿ20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಸಭೆಯ ನೇಪಥ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೈಷ್ಣವ್, ಸಿಂಗಾಪುರವು ಈಗಾಗಲೇ ತನ್ನ … Continued