ನಮ್ಮ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ಬಿಎಂಆರ್‌ಸಿಎಲ್
ಬೆಂಗಳೂರು: ಸಾರ್ವಜನಿಕರ ತೀವ್ರ ಆಕ್ರೋಶ ಮತ್ತು ರಾಜಕೀಯ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ, ಫೆಬ್ರವರಿ 5 ರಂದು ಘೋಷಿಸಲಾಗಿದ್ದ ವಾರ್ಷಿಕ ಪ್ರಯಾಣ ದರ ಹೆಚ್ಚಳವನ್ನು ಜಾರಿಗೆ ತರದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಡೆಹಿಡಿದಿದೆ. ಫೆಬ್ರವರಿ 9ರಿಂದ (ಸೋಮವಾರ) ಜಾರಿಗೆ ಬರಬೇಕಿದ್ದ ಈ ನಿರ್ಧಾರವನ್ನು ಮಂಡಳಿಯ ಮರುಪರಿಶೀಲನೆಗಾಗಿ ಅಮಾನತ್ತಿನಲ್ಲಿಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. … Continued