ಬಸ್‌-ಕಾರಿನ​ ನಡುವೆ ಭೀಕರ ಅಪಘಾತ: ಐವರು ವಿದ್ಯಾರ್ಥಿಗಳು ಸಾವು

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿ ಸಮೀಪ ಹಾಸನ – ಬೇಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಆಲ್ಟೊ ಕಾರು ನಡುವೆ ಡಿಕ್ಕಿ ಸಂಭವಿಸಿ ಐವರು ಯುವಕರು ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತಪರನ್ನು ವಿದ್ಯಾರ್ಥಿಗಳಾದ ಅಕ್ಮಲ್(18), ಜಿಲಾನಿ(19), ತೋಹಿದ್(18), ಕೈಫ್ (18) ಎಂಬವರು ಸ್ಥಳದಲ್ಲೇ ಮೃತಪಟ್ಟರೆ, ರಿಹಾನ್ (19) ಆಸ್ಪತ್ರೆಗೆ ಸಾಗಿಸುವಾಗ … Continued

ಕಾರು ಮರಕ್ಕೆ ಡಿಕ್ಕಿ: ಸ್ಥಳದಲ್ಲೇ ಶರಣಬಸವ ವಿವಿ ಕುಲಸಚಿವರು ಸಾವು

ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಹತ್ತಿರ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ (50) ಮೃತಪಟ್ಟಿದ್ದಾರೆ. ಬಸವಕಲ್ಯಾಣದಿಂದ ಕಲಬುರಗಿಗೆ ಕಾರಿನಲ್ಲಿ ಹೋಗುವಾಗ ಹಣಮಂತವಾಡಿ-ಮುಡಬಿ ಮಧ್ಯ ಕಡೋಳ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಶಾಸ್ತ್ರಿ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಮತ್ತು ಪುತ್ರನಿಗೆ … Continued

ಬೆಂಗಳೂರು ಕೋರಮಂಗಲದಲ್ಲಿ ಅಪಘಾತ ; ಶಾಸಕನ ಪುತ್ರ ಸೇರಿ 7 ಜನರ ಸಾವು

ಬೆಂಗಳೂರು: ಬೆಂಗಳೂರು ನಗರದಲ್ಲಿ ತಡರಾತ್ರಿ ಐಷಾರಾಮಿ ಕಾರು ಅಪಘಾತಕ್ಕೀಡಾಗಿ  7 ಜನರು ಮೃತಪಟ್ಟಿದ್ದಾರೆ. ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಸಮೀಪ ಮಂಗಳವಾರ ಮುಂಜಾನೆ 1.45ರ ಸುಮಾರಿಗೆ ಐಷಾರಾಮಿ ಕಾರು ಅಪಘಾತ ನಡೆದಿದ್ದು, ಮೂವರು ಮಹಿಳೆಯರು, ನಾಲ್ವರು ಪುರುಷರು ಸೇರಿ ಅಪಘಾತದಲ್ಲಿ  ಅಪಘಾತದಲ್ಲಿ   7  ಮಂದಿ ಮೃತಪಟ್ಟಿದ್ದಾರೆ.  ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರುಣಾಸಾಗರ್ (28) ತಮಿಳುನಾಡಿನ ಹೊಸೂರು … Continued

ಅಪಘಾತವಾದಾಗ ಕಾರು ಓಡಿಸುತ್ತಿದ್ದುದು ನಾನೇ ಎಂದು ಒಪ್ಪಿಕೊಂಡ ವಿಜಯ ಕುಲಕರ್ಣಿ

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರ ವಿಜಯ್ ಕುಲಕರ್ಣಿ ಅವರಿಗೆ ಸೇರಿದ ಕಾರು ಸೋಮವಾರ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಸಂದರ್ಭದಲ್ಲಿ ಕಾರು ಓಡಿಸುತ್ತಿದ್ದದ್ದು ನಾನೇ ಎಂದು ವಿಜಯ್ ಕುಲಕರ್ಣಿ ಹೇಳಿದ್ದಾರೆ. ಬೆಳಗಾವಿಯಿಂದ ನಗರಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಕಾರು (ಕೆಎ–25–ಪಿ–007) ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಈ … Continued