ಮಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣ: ಇಬ್ಬರು ಸಾವು, ಒಬ್ಬರಿಗೆ ಗಾಯ

ಮಂಗಳೂರು: ಮಂಗಳೂರು ಸಮೀಪದ ಪಡುಪಣಂಬೂರಿನಲ್ಲಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಾಯಗಳಾಗಿವೆ. ಬುಧವಾರ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನಿಂದ ಸುಮಾರು 30 ಕಿಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಬಬ್ಲು ಮತ್ತು ಅಚಲ್ ಸಿಂಗ್ ಎಂದು ಗುರುತಿಸಲಾಗಿದೆ. ಅನೀಶ್ … Continued

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆ

ಮೈಸೂರು: ಮೈಸೂರಿನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಯಾರೋ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಗರದ ಜಯಲಕ್ಷ್ಮಿಪುರಂ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ರಂಗಾಯಣದಿಂದ ಟಿಪ್ಪು ನಿಜಕನಸುಗಳು ಎಂಬ ನಾಟಕ ರಚಿಸಿ, ನಿರ್ದೇಶನ ಮಾಡಿ ಇದೀಗ ಪ್ರದರ್ಶನಗೊಳ್ಳುತ್ತಿದೆ. ಈ ಪ್ರದರ್ಶನ ಆರಂಭವಾದಂದಿನಿಂದ ನನ್ನ ವಿರುದ್ಧ ಕೆಲವರು ಪ್ರತಿಭಟನೆ, ಜಿಲ್ಲಾಧಿಕಾರಿಗಳಿಗೆ ದೂರು, ಇತ್ಯಾದಿ ಮಾಡುತ್ತಾ ಬಂದಿದ್ದಾರೆ. … Continued

ಪ್ರಮೋದ ಮುತಾಲಿಕಗೆ ಜೀವ ಬೆದರಿಕೆ ಕರೆ; ದೂರು ದಾಖಲು

ಬೆಳಗಾವಿ: ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆಗಳು (Threatening Call) ಬರುತ್ತಿರುವ ಕುರಿತು ಪ್ರಮೋದ ಮುತಾಲಿಕ್ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಮೋದ ಮುತಾಲಿಕ್‌, ನನಗೆ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಕೊಚ್ಚಿ ಕೊಚ್ಚಿ ತುಂಡು … Continued

ತುರ್ತು ವಾಟ್ಸಪ್ ಸಹಾಯವಾಣಿಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಜೀವ ಬೆದರಿಕೆ: ವರದಿ

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವ ಬೆದರಿಕೆಯ ವಾಟ್ಸಪ್ ಸಂದೇಶವೊಂದು ಉತ್ತರ ಪ್ರದೇಶ ಪೊಲೀಸರ ಟೆಕ್ಷ್ಟ್‌ ಸಹಾಯವಾಣಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲಕ್ನೋ ಅಧಿಕಾರಿಗಳು ಇಂದು, ಮಂಗಳವಾರ ತಿಳಿಸಿದ್ದಾರೆ. ಡಯಲ್-112 ಸಹಾಯವಾಣಿಯ ವಾಟ್ಸಪ್ ಸಂಖ್ಯೆಗೆ ಶಾಹಿದ್ ಎಂಬ ವ್ಯಕ್ತಿಯಿಂದ ಸಂದೇಶ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು … Continued

ಸಾಗರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಮಗಳಿಗೆ ಕೊಲೆ ಬೆದರಿಕೆ; ಪ್ರಕರಣ ದಾಖಲು

ಸಾಗರ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮಗಳು ಡಾ. ರಾಜನಂದಿನಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈ ಘಟನೆಯ ಕುರಿತು ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಮಾರಿಗುಡಿಯ ಸಮೀಪದಲ್ಲಿ ಕಾಗೋಡು ತಿಮ್ಮಪ್ಪನವರ ಮಗಳು ಡಾ. ರಾಜನಂದಿನಿ ಅವರ ಕಾರನ್ನು ಅಡ್ಡಗಟ್ಟಿಕೊಲೆ … Continued

ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಹೋದ ಬಾಲಕಿ ಮೇಲೆ ಪೊಲೀಸ್‌ ಅಧಿಕಾರಿಯಿಂದಲೇ ಅತ್ಯಾಚಾರ: ದೂರು ದಾಖಲು

ಲಲಿತ್‌ಪುರ (ಉತ್ತರ ಪ್ರದೇಶ) : ನಾಲ್ಕು ಜನರಿಂದ ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿಯ ಮೇಲೆ ಪ್ರಕರಣ ದಾಖಲಿಸಲು ಹೋಗಿದ್ದ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮತ್ತೆ ಅತ್ಯಾಚಾರವೆಸಗಿದ್ದಾನೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ಪೊಲೀಸ್ ಠಾಣೆಯ ಉಸ್ತುವಾರಿ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ಮೂವರನ್ನು … Continued

ಯಾದಗಿರಿ: ಆಟೋ ಹತ್ತಿದ ಯುವತಿಯನ್ನು ಬೇರೆಡೆ ಕರೆದೊಯ್ದು ರೇಪ್​-ವೀಡಿಯೋ ಚಿತ್ರೀಕರಿಸಿ ಯುವತಿಗೆ ಬೆದರಿಕೆ:ದೂರು ದಾಖಲು

ಯಾದಗಿರಿ: ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಹಾಡಹಗಲೇ ಆಟೋ ಚಾಲಕ ಮತ್ತು ಆತನ ಸ್ನೇಹಿತ ಅತ್ಯಾಚಾರವೆಸಗಿ ಅದನ್ನು ವೀಡಿಯೋ ಚಿತ್ರೀಕರಿಸಿ ಹೆದರಿಸಿದ ಪೈಶಾಚಿಕ ಕೃತ್ಯ ಯಾದಗಿರಿ ತಾಲೂಕಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಈ ಕುರಿತು ಸಂತ್ರಸ್ತೆ ಚಿಕ್ಕಪ್ಪ ದೂರು ದಾಖಲಿಸಿದ್ದಾರೆ. ಮನೆ ಕೆಲಸ ಮಾಡಿಕೊಂಡಿದ್ದ ಯಾದಗಿರಿ ತಾಲೂಕಿನ ಹಳ್ಳಿಯೊಂದರ ಯುವತಿಯೊಬ್ಬಳು ಏ.26ರಂದು ಯಾದಗಿರಿ ನಗರಕ್ಕೆ ತೆರಳಲೆಂದು … Continued

ಮದುವೆ ಮನೆಯಲ್ಲಿ ಗುಂಡಿನ ಮಳೆಗೈದ ಮಾಜಿ ಸೈನಿಕ; ಸಂಬಂಧಿಕರು ದಂಗು, ಪ್ರಕರಣ ದಾಖಲು

ಚಿಕ್ಕೋಡಿ: ಮದುವೆ ಸಮಾರಂಭದಲ್ಲಿ ಮಾಜಿ ಸೈನಿಕನೊಬ ಗಾಳಿಯಲ್ಲಿ ಗುಂಡಿನ ಸುರಿಮಳೆಗೈದಿದ್ದಾರೆ. ಗುಂಡು ಹಾರಿಸಿರುವ ಮಾಜಿ ಯೋಧನ ವಿಡಿಯೋ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದ್ದು, ಮದುವೆಗೆ ಬಂದವರು ಒಂದು ಕ್ಷಣ ಕಂಗಾಲಾಗಿದ್ದಾರೆ. ರಫಿಕ್ ಅಹಮ್ಮದ ತಹಶೀಲ್ದಾರ ಎಂಬ ಮಾಜಿ ಯೋಧ ಗಾಲಿಯಲ್ಲಿ ಅನೇಕ ಬಾರಿ … Continued

ಜನರಲ್‌ ಬಿಪಿನ್ ರಾವತ್ ಬಗ್ಗೆ ಅವಹೇಳನಕಾರಿ ಬರಹ: ಪ್ರಕರಣ ದಾಖಲು

ಮಂಗಳೂರು: ಫೇಸ್ ಬುಕ್ ನಲ್ಲಿ ಹೆಲಿಕಾಪ್ಟಾರ್ ದುರಂತದಲ್ಲಿ ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಬಗ್ಗೆ ಅವಹೇಳನ, ಪ್ರಚೊದನಾಕಾರಿ ಬರಹ ಪ್ರಕಟಿಸಿದ ಇಬ್ಬರ ವಿರುದ್ಧ ಮಂಗಳೂರಿನಲ್ಲಿ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕೂನ್ನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್ ಬಿಪಿನ್ ರಾವತ್ ಅವರ ಸಾವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಾಮೆಂಟ್ ಹಾಕುವ ಮೂಲಕ … Continued

ಮೈಸೂರು ವಿವಿಯಲ್ಲಿ ಚಿನ್ನದ ಪದಕ ಪಡೆದ ಗೃಹಿಣಿಯ ಅನುಮಾನಾಸ್ಪದ ಸಾವು

ಮೈಸೂರು: ಮೈಸೂರು ವಿಶ್ವ ವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದಿದ್ದ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಮೈಸೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಡೇನಹಳ್ಳಿಯ ಆಶಾ ಎಂಬುವವರು ಮೃತ ಗೃಹಿಣಿ. ಇವರು ಮಳವಳ್ಳಿಯ ನಾಗಾಪ್ರಸಾದ್ ಎಂಬುವವರನ್ನು ಪ್ರೀತಿಸಿ ಎಂಟು ವರ್ಷದ ಹಿಂದೆ ಮದುವೆಯಾಗಿದ್ದರು. ತವರು ಮನೆಯಿಂದ ಹಣ ತರುವಂತೆ ಗಂಡನಿಂದ ನಿರಂತರ ಕಿರುಕುಳವಾಗುತ್ತಿತ್ತು. … Continued