ಚಾಮರಾಜನಗರ | 10 ಎಕರೆ ಅರಣ್ಯಕ್ಕೆ ಬೆಂಕಿ ; ಶಿಬಿರಗಳು ಸ್ಫೋಟ ; ಶಂಕಿತ ಬೇಟೆಗಾರರ ಸಾವಿಗೆ ಪ್ರತೀಕಾರದ ಶಂಕೆ

ಚಾಮರಾಜನಗರ : ಜಿಲ್ಲೆಯ ಶಿಲುಬೆಪುರ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಸುಮಾರು 10 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಆಗಸ್ಟ್ 15ರಂದು ಮೂವರು ಶಂಕಿತ ಬೇಟೆಗಾರರು (ಪೋಚರ್‌ಗಳು) ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಘಟನೆಗೆ ಪ್ರತೀಕಾರವಾಗಿ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಅರಣ್ಯ … Continued