ವಿಧಾನಸಭೆ ಉಪಚುನಾವಣೆ ಫಲಿತಾಂಶ: ಬಹುತೇಕ ಆಡಳಿತ ಪಕ್ಷಕ್ಕೆ ಮಣೆ ; ಇಂಡಿಯಾ ಮೈತ್ರಿಕೂಟ 10, ಬಿಜೆಪಿ 2 ಸ್ಥಾನಗಳಲ್ಲಿ ಜಯ

ನವದೆಹಲಿ: ಜುಲೈ 10 ರಂದು ಏಳು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಹುತೇಕ ರಾಜ್ಯಗಳಲ್ಲಿ ಮತದಾರರು ಆಡಳಿತಾರೂಢ ಪಕ್ಷಗಳಿಗೆ ಮಣೆ ಹಾಕಿದ್ದಾರೆ. ಏಳು ರಾಜ್ಯಗಳ 13 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 10 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಕೇವಲ ಪಕ್ಷ ಎರಡು ಸ್ಥಾನಗಳನ್ನು ಗೆದ್ದುಕೊಂಡಿತು. ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. … Continued

“ನಾವು ಕಾಂಗ್ರೆಸ್ಸಿನಂತೆಯೇ ತಪ್ಪುಗಳನ್ನು ಮಾಡಿದರೆ…”: ಬಿಜೆಪಿಗೆ ಎಚ್ಚರಿಸಿದ ನಿತಿನ್ ಗಡ್ಕರಿ

ಪಣಜಿ: ಬಿಜೆಪಿ ಭಿನ್ನರೀತಿಯ ಪಕ್ಷವಾಗಿದೆ. ಅದಕ್ಕಾಗಿಯೇ ಅದು ಮತದಾರರ ವಿಶ್ವಾಸವನ್ನು ಪದೇ ಪದೇ ಗೆದ್ದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪಣಜಿಯಲ್ಲಿ ಹೇಳಿದ್ದಾರೆ. ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ಮಾಡಿದ ತಪ್ಪುಗಳನ್ನು ನಾವೂ ಪುನರಾವರ್ತಿಸಿದರೆ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪಕ್ಷದ ನಾಯಕರಿಗೆ ಮುನ್ನೆಚ್ಚರಿಕೆ ನೀಡಿದರು. ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸದಾನಂದ … Continued

ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ 7 ಕಾಂಗ್ರೆಸ್ ಶಾಸಕರಿಂದ ಅಡ್ಡ ಮತದಾನ : ವರದಿ

ಮುಂಬೈ: ರಾಜ್ಯದ 48 ಲೋಕಸಭಾ ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆದ್ದು ಬೀಗುತ್ತಿದ್ದ ಮಹಾರಾಷ್ಟ್ರದಲ್ಲಿ ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿಗೆ ಆಘಾತ ಎದುರಾಗಿದೆ. ಆತಂಕಕಾರಿ ಸಂಕೇತವಾಗಿ, ಶುಕ್ರವಾರ ನಡೆದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕನಿಷ್ಠ ಏಳು ಕಾಂಗ್ರೆಸ್ ಶಾಸಕರು ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಅಡ್ಡ ಮತದಾನ ಮಾಡಿದ್ದಾರೆ ಎಂದು ಮೂಲಗಳು … Continued

ಶಿರಸಿ: ಕಚೇರಿಗೆ ತೆರಳಿ ಬಿಜೆಪಿ ಸಂಸದ ಕಾಗೇರಿ ಅಭಿನಂದಿಸಿದ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ…!

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬಿಜೆಪಿಯ ನೂತನ ಸಂಸದ ವರ್ಷದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಾಂಗ್ರೆಸ್ ಶಾಸಕ ಭೀಮಣ್ಣ ಟಿ ನಾಯ್ಕ ಶುಕ್ರವಾರ ರಾತ್ರಿ ಶಿರಿಸಯಲ್ಲಿ ಅಭಿನಂದಿಸಿದ್ದಾರೆ..! ಸಂಸದರ  ಕಚೇರಿಗೆ ತೆರಳಿದ ಶಾಸಕ ಭೀಮಣ್ಣ ನಾಯ್ಕ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಾರ ಹಾಕಿ, ಫಲ‌ ನೀಡಿ ಅಭಿನಂದಿಸಿದರು‌. ಈ ವೇಳೆ … Continued

ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ 11ರಲ್ಲಿ 9 ಸ್ಥಾನ ಗೆದ್ದು ಬೀಗಿದ ಬಿಜೆಪಿ-ಮಿತ್ರಪಕ್ಷಗಳು

ಮುಂಬೈ : ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ, ಶುಕ್ರವಾರ ನಡೆದ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 11 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿಯ ಪಂಕಜಾ ಮುಂಡೆ, ಪರಿಣಯ ಫುಕೆ, ಅಮಿತ್ ಗೋರ್ಖೆ, ಯೋಗೇಶ ತಿಲೇಕರ ಮತ್ತು ಸದಾಭವ ಖೋತ್‌ ಐದು ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದರು.ಅಜಿತ ಪವಾರ್ ಅವರ … Continued

ನನ್ನ ಭೇಟಿಗೆ ಬರುವ ಜನರು ಆಧಾರ ಕಾರ್ಡ್‌ ತರಬೇಕು ಎಂದ ಸಂಸದೆ ಕಂಗನಾ ರಣಾವತ್‌ ; ಕಾಂಗ್ರೆಸ್‌ ಟೀಕೆ

ಶಿಮ್ಲಾ : ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮನ್ನು ಭೇಟಿಯಾಗಲು ಬರುವವರು ಕಡ್ಡಾಯವಾಗಿ ಆಧಾರ್​ ಕಾರ್ಡ್​ ತೆಗೆದುಕೊಂಡು ಬರಬೇಕು ಎಂದು ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ ರಣಾವತ್‌, ಯಾವುದೇ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲು ಭೇಟಿಗೆ ಬರುವವರು ಆಧಾರ್​ ಕಾರ್ಡ್​ ತೆಗೆದುಕೊಂಡು ಬರಬೇಕು. … Continued

ತೆಲಂಗಾಣದಲ್ಲಿ ಬಿ ಆರ್​ ಎಸ್​ ಗೆ ಆಘಾತ; ಪಕ್ಷದ 6 ಎಂಎಲ್​ಸಿಗಳು ಕಾಂಗ್ರೆಸ್ಸಿ​ಗೆ ಸೇರ್ಪಡೆ

ಹೈದರಾಬಾದ್‌ : ಕೆ ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್‌ ಪಕ್ಷಕ್ಕೆ ಮತ್ತೊಂದು ಆGಆತ ಎದುರಾಗಿದ್ದು, ಬಿಆರ್‌ಎಸ್‌ ಪಕ್ಷದ ಆರು ವಿಧಾನ ಪರಿಷತ್‌ ಸದಸ್ಯರು ಶುಕ್ರವಾರ ರಾತ್ರಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪರಿಷತ್‌ ಸದಸ್ಯರಲ್ಲಿ ದಂಡೆ ವಿಠ್ಠಲ, ಭಾನು ಪ್ರಸಾದ, ಬಿ ದಯಾನಂದ, ಪ್ರಭಾಕರ ರಾವ್, … Continued

ರಾಜ್ಯಸಭೆ ಕಲಾಪದಲ್ಲಿ ಪ್ರತಿಭಟನೆ ವೇಳೆ ಕುಸಿದು ಬಿದ್ದ ಕಾಂಗ್ರೆಸ್‌ ಸಂಸದೆ ; ಆಸ್ಪತ್ರೆಗೆ ದಾಖಲು

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಚರ್ಚೆಗೆ ಅವಕಾಶ ನೀಡದ ರಾಜ್ಯಸಭಾ ಚೇರ್ಮನ್‌ ನಿರ್ಧಾರದ ವಿರುದ್ಧ ಪ್ರತಿಭಟಿಸುತ್ತಿರುವಾಗ ಕಾಂಗ್ರೆಸ್ ಸದಸ್ಯರೊಬ್ಬರು ಸದನದ ಬಾವಿಯಲ್ಲಿ ಮೂರ್ಛೆ ಹೋದ ಘಟನೆ ಶುಕ್ರವಾರ (ಜೂನ್ 28)ರಂದು ರಾಜ್ಯಸಭೆಯಲ್ಲಿ ನಡೆಯಿತು. ನೆಲದ ಮೇಲೆ ಬಿದ್ದಿದ್ದ ನೇತಾಮ್‌ ಅವರನ್ನು ತಕ್ಷಣವೇ ಆಂಬುಲೆನ್ಸ್‌ ನಲ್ಲಿ ರಾಮ್‌ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಅವರ … Continued

ಡಿಕೆ ಶಿವಕುಮಾರಗೆ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಬಿಟ್ಟುಕೊಡಲಿ : ಸಿಎಂ ಸಮ್ಮುಖದಲ್ಲೇ ಸ್ವಾಮೀಜಿ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಬೇಡಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ ಮುಖ್ಯಮಂತ್ರಿ ಸಿದರಾಮಯ್ಯ ಅವರ ಮುಂದೆಯೇ ಡಿಕೆ ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಸ್ವಾಮೀಜಿಯೊಬ್ಬರು ನೇರವಾಗಿ ಒತ್ತಾಯಿಸಿದ ವಿದ್ಯಮಾನ ನಡೆದಿದೆ. ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ಒಕ್ಕಲಿಗ ಸಚಿವರು, ಶಾಸಕರು, … Continued

ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೊಡಾ ಮರುನೇಮಕ

ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನಿಡಿದ್ದ ಸ್ಯಾಮ್ ಪಿತ್ರೊಡಾ ಅವರನ್ನು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆದೇಶಿಸಿದ್ದಾರೆ. ಗಾಂಧಿ ಕುಟುಂಬದ ನಿಷ್ಠ ಸ್ಯಾಮ್ ಪಿತ್ರೋಡಾ ಅವರು ನೀಡಿದ್ದ ‘ಜನಾಂಗೀಯ’ ಹೇಳಿಕೆಗಳು ಮತ್ತು ಉತ್ತರಾಧಿಕಾರ ತೆರಿಗೆಯ … Continued