ಕ್ರಿಪ್ಟೋಕರೆನ್ಸಿ ವ್ಯಾಪಾರ ಜೂಜಾಟವಲ್ಲದೆ ಬೇರೇನೂ ಅಲ್ಲ, ಅದನ್ನು ನಿಷೇಧಿಸಬೇಕು: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಕ್ರಿಪ್ಟೋಕರೆನ್ಸಿ ವ್ಯಾಪಾರ(ಟ್ರೇಡ್‌)ವನ್ನು ಸಂಪೂರ್ಣವಾಗಿ ಊಹಾಪೋಹವನ್ನು ಆಧರಿಸಿರುವುದರಿಂದ ಮತ್ತು ಜೂಜಾಟದಂತೆಯೇ ಇರುವುದರಿಂದ ಅದನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಬಿಸಿನೆಸ್ ಟುಡೆ ಬ್ಯಾಂಕಿಂಗ್ ಮತ್ತು ಆರ್ಥಿಕ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ಅವರು, ಕ್ರಿಪ್ಟೋಕರೆನ್ಸಿಯ ಮೇಲಿನ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ ದೃಷ್ಟಿಕೋನವನ್ನು ಪುನರುಚ್ಚರಿಸಿದರು … Continued