ಪ್ರವೀಣ ಹತ್ಯೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ ನೆಟ್ಟಾರ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಾವೂರು ನಿವಾಸಿ ಅಬಿದ್ (22) ಹಾಗೂ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ (28) ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಇವರಿಬ್ಬರ ಬಂಧನದಿಂದ ಪ್ರವೀಣ ನೆಟ್ಟಾರ … Continued

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಜೆ 6 ಗಂಟೆಯೊಳಗೆ ಅಂಗಡಿ-ಮುಂಗಟ್ಟು ಮುಚ್ಚಲು ಆದೇಶ

ಮಂಗಳೂರು: ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಗೇ ಬಂದ್‌ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ. ಈ ಆದೇಶದ ಇಂದು, ಶುಕ್ರವಾರ ಸಂಜೆ (ಜು.29) ರಿಂದ ಆಗಸ್ಟ್‌ 1ರ ವರೆಗೆ ಜಾರಿಯಲ್ಲಿರುತ್ತದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ … Continued

ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದ ಹೊಣೆ ಎನ್​ಐಎಗೆ ವರ್ಗವಾವಣೆ: ಸಿಎಂ ಬೊಮ್ಮಾಯಿ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಲಾಗಿದೆ. ಈ ಪ್ರಕರಣವು ಅಂತಾರಾಜ್ಯ ನಂಟು ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ತನಿಖೆಯ ಹೊಣೆಯನ್ನು ಎನ್​ಐಎಗೆ ವಹಿಸಲು ರಾಜ್ಯ ಸರ್ಕಾರವು ತೀರ್ಮಾನ ಮಾಡಿದೆ. … Continued

ನಿರ್ಬಂಧ ಉಲ್ಲಂಘನೆ: ಪ್ರಮೋದ್ ಮುತಾಲಿಕ್ ಪೊಲೀಸ್ ವಶಕ್ಕೆ

ಮಂಗಳೂರು: ಪ್ರವೀಣ ಹತ್ಯೆ ಪ್ರಕರಣದ ನಂತರ ಮುಂಜಾಗ್ರತಾ ಕ್ರಮವಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ದಕ್ಷಿಣಕನ್ನಡ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಇಂದು, ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ ಅವರನ್ನು ಹೆಜಮಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಬೆನ್ನಲ್ಲೇ ಪ್ರಮೋದ್ ಮುತಾಲಿಕ್ ಪ್ರವೀಣ್ ಅವರ ಮನೆಗೆ ಭೇಟಿ ನೀಡುವ … Continued

ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರು ಸಸ್ಪೆಂಡ್

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಅಮಾನತುಗೊಳಿಸಿದ್ದಾರೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜನಲ್ಲಿ ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಪ್ರಾಂಶುಪಾಲರು ಆರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ್ದಾರೆ. ಯಾವುದೇ ಕಾರಣಕ್ಕೂ ತರಗತಿಗೆ ಧರಿಸಿಕೊಂಡು ಬರಬಾರದೆಂಬ ಸರ್ಕಾರದ ಆದೇಶ ಹಾಗೂ ಹೈಕೋರ್ಟ್‌ ತೀರ್ಪನ್ನು … Continued

ಪೊಲೀಸ್‌ ಇನ್ಸ್‌ಪೆಕ್ಟರ್‌ ಮೇಲೆ ವಾಹನ ನುಗ್ಗಿಸಿದ ಗೋ ಕಳ್ಳರು: ಎಸ್‌ಐಗೆ ಗಾಯ, ಕಳ್ಳರು ಪರಾರಿ

ಮಂಗಳೂರು : ಅಕ್ರಮ ಗೋ ಸಾಗಾಟದ ವಾಹನ ತಡೆದು ನಲ್ಲಿಸಲು ಯತ್ನಿಸಿದ ಎಸ್‌ಐ ಅವರಿಗೆ ಗೋ ಸಾಗಾಟದ ವಾಹನ ತಾಗಿ ಗಾಯಗೊಂಡ ಘಟನೆ ರವಿವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುದ್ಕೋಳಿ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಪುಂಜಾಲಕಟ್ಟೆ ಠಾಣಾ ಎಸ್‌ಐ ಸುತೇಶ್‌ ಅವರು ಗಾಯಗೊಂಡಿದ್ದು, ಈ ವೇಳೆ ಗೋ ಕಳ್ಳರು … Continued

ಬೃಹತ್‌ ನೀರಿನ ಟ್ಯಾಂಕಿನಲ್ಲಿ ಬಿದ್ದ ಕಾಡುಕೋಣ…!

ಮಂಗಳೂರು: ಕಾಡಿನಿಂದ ನೀರು ಅರಸಿ ಬಂದ ಕಾಡುಕೋಣಯೊಂದು ನೀರಿನ ಟ್ಯಾಂಕ್ ಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟಲ್ಪ ಸಮೀಪದ ಕನ್ಯಾನದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕಳೆಂಜೆಮಲೆ ರಕ್ಷಿತಾರಣ್ಯ ಕಾಡಿನಿಂದ ಕಾಡುಕೋಣವು ನೀರು ಹುಡುಕಿಕೊಂಡು ರಾತ್ರಿ ಊರಿಗೆ ಬಂದಿದೆ ಎಂದು ಹೇಳಲಾಗಿದೆ. ಕನ್ಯಾನ ಭಾರತ ಸೇವಾಶ್ರಮದ ದೊಡ್ಡ ನೀರಿನ ಟ್ಯಾಂಕ್ ನಲ್ಲಿ ಬಗ್ಗಿ ನೀರು … Continued

ರೈಲು ಡಿಕ್ಕಿ ಹೊಡೆದು ಕಾಡುಕೋಣ-ಮರಿ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಗಡಿಪಿಲ ಬಳಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾಡುಕೋಣ ಮತ್ತು ಅದರ ಮರಿ ಮೃತಪಟ್ಟ ಘಟನೆ ಗುರುವಾರ ಮಾ.17ರಂದು ನಡೆದ ಬಗ್ಗೆ ವರದಿಯಾಗಿದೆ. ಕಾಡುಕೋಣ ಮತ್ತು ಅವರ ಮರಿ ಮೇವು ಅರಸಿ ಕಾಡಿನಿಂದ ಹೊರ ಬಂದಿದ್ದು, ಈ ವೇಳೆ ಗುರುವಾರ ಬೆಳಿಗ್ಗೆ ರೈಲುಹಳಿ ದಾಟುವಾಗ ರೈಲು … Continued

ಸುಳ್ಯ: ಮಾಲೀಕರನ್ನೇ ತಿವಿದು ಕೊಂದ ಮೇಯಲು ಕಟ್ಟಿದ್ದ ಹೋರಿ

ಮಂಗಳೂರು ಹೋರಿಯೊಂದು ತಿವಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯದ ಕೋಡಿಯಡ್ಕದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತರನ್ನು ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ (55ವರ್ಷ) ಎಂದು ಗುರುತಿಸಲಾಗಿದೆ. ಆ ದಾರಿಯಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವರಿಗೆ ಕಿಟ್ಟಣ್ಣ ಗೌಡರು ಬಿದ್ದುಕೊಂಡಿರುವುದು ಕಂಡುಬಂದಿದ್ದು, ಅಲ್ಲೇ ಪಕ್ಕದಲ್ಲಿ ಹೋರಿ ಕಟ್ಟಿ ಹಾಕಿರುವುದನ್ನು ನೋಡಿದ್ದಾರೆ. … Continued

ಶಂಕಿತ ರೇಬಿಸ್​ಗೆ ಪಿಯುಸಿ ವಿದ್ಯಾರ್ಥಿನಿ ಸಾವು

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಶಂಕಿತ ರೇಬಿಸ್​ಗೆ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕಡಬದ ಸರ್ಕಾರಿ ಪಿಯುಸಿ ಕಾಲೇಜು ವಿದ್ಯಾರ್ಥಿನಿ ವಿನ್ಸಿ ಸಾರಮ್ಮ(17) ಮೃತ ವಿದ್ಯಾರ್ಥಿನಿ. ಆಲಂಕಾರು ಗ್ರಾಮದ ಕೆದಿಲ ನಿವಾಸಿ ವಿನ್ಸಿ ಸಾರಮ್ಮ, ವಿಪರೀತ ತಲೆ ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ … Continued