ಜೆಎಸ್ಎಸ್‌ನ ನೂತನ ಐಟಿಐ ಉದ್ಘಾಟನೆ : ಶೈಕ್ಷಣಿಕ ಹರಿಕಾರ ಡಾ. ನ. ವಜ್ರಕುಮಾರ ಹೆಸರು ನಾಮಕರಣ

ಧಾರವಾಡ : ಕೌಶಲ್ಯ ತರಬೇತಿಗಳಿಗೆ ಈಗ ಅಪಾರ ಬೇಡಿಕೆಯಿದೆ ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿಯುವ ಕಾರ್ಮಿಕ ವರ್ಗದವರನ್ನು ಇಂದು ಗುರುತಿಸುವ ಅಗತ್ಯವಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿಯ ಮೃತ್ಯುಂಜಯ ನಗರದಲ್ಲಿ ಆರಂಭಗೊಂಡ ನೂತನ ಐ.ಟಿ.ಐ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ನೂತನ ಐಟಿಐಗೆ ಡಾ. ವಜ್ರಕುಮಾರ … Continued

ಧಾರವಾಡದ ಕೆಸಿಸಿ ಬ್ಯಾಂಕ್​ನಲ್ಲಿ 87 ಕ್ಲರ್ಕ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ಡಿಗ್ರಿಯಾದವರಿಗೆ ಅವಕಾಶ

ಧಾರವಾಡದ ಕರ್ನಾಟಕ ಸೆಂಟ್ರಲ್​ ಕೋ-ಆಪರೇಟಿವ್​​ ಬ್ಯಾಂಕ್​ ಲಿಮಿಟೆಡ್​ನಲ್ಲಿ ( KCCBank) ನೇರ ನೇಮಕಾತಿ ಮೂಲಕ ಒಟ್ಟು 87 ಕ್ಲರ್ಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಆನ್​ಲೈನ್​ ಮೂಲಕ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​​ 30 ಆಗಿದೆ. ಬ್ಯಾಂಕ್ -ಕರ್ನಾಟಕ ಸೆಂಟ್ರಲ್​ ಕೋ-ಆಪರೇಟಿವ್​​ ಬ್ಯಾಂಕ್​ ಲಿಮಿಟೆಡ್ … Continued

ಕೋರ್ಟ್‌ಗೆ ಪೊಲೀಸರು ಕರೆತಂದಿದ್ದ ಕೊಲೆ ಪ್ರಕರಣದ ಆರೋಪಿ ಯುವತಿ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ…!

ಧಾರವಾಡ : ಕೊಲೆ ಪ್ರಕರಣದ ವಿಚಾರಣೆಗಾಗಿ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಆರೋಪಿಯೊಬ್ಬರು ಸಮೀಪದ ಸತ್ತೂರಿನ ಲಾಡ್ಜ್‌ ಒಂದರಲ್ಲಿ ಯುವತಿ ಜೊತೆಗಿದ್ದ ಘಟನೆ ನಡೆದಿದೆ. ನಂತರ ಲಾಡ್ಡ್ ಮೇಲೆ ದಾಳಿ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದ ಆರೋಪಿ ಬಚ್ಚಾ ಖಾನ್‌ ಎಂಬಾತನನ್ನು ಬಳ್ಳಾರಿ ಕಾರಾಗೃಹದಲ್ಲಿ ಇಡಲಾಗಿತ್ತು. … Continued

ಅದ್ವೈತ-2022 ಸ್ಪರ್ಧೆ: ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಬಿಬಿಎ ತಂಡಕ್ಕೆ “ಬೆಸ್ಟ್ ಮ್ಯಾನೇಜರ್” ಪ್ರಶಸ್ತಿ

ಅದ್ವೈತ-೨೦೨೨ ರ ಸ್ಪರ್ಧೆಯಲ್ಲಿ ಭಾಗವಹಿಸಿ “ಬೆಸ್ಟ್ ಮ್ಯಾನೇಜರ್” ಪ್ರಶಸ್ತಿ ಧಾರವಾಡ: ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಬಿ.ಎ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವು ಬೆಳಗಾವಿಯ ಗೋಗಟೆ ಮಹಾವಿದ್ಯಾಲಯದ ಅದ್ವೈತ-2022 ಸ್ಪರ್ಧೆಯಲ್ಲಿ ಭಾಗವಹಿಸಿ “ಬೆಸ್ಟ್ ಮ್ಯಾನೇಜರ್” ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಜನತಾ ಶಿಕ್ಷಣ ಸಮಿತಿಯ ಪರವಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ … Continued

ಧಾರವಾಡ: ಜೆಎಸ್‌ಎಸ್‌ ಮಂಜುನಾಥೇಶ್ವರ ಐಟಿಐ ಕಾಲೇಜಿಗೆ ಕರ್ಣಾಟಕ ಬ್ಯಾಂಕಿನಿಂದ ಬೊಲೆರೊ ವಾಹನ ಹಸ್ತಾಂತರ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಕರ್ಣಾಟಕ ಬ್ಯಾಂಕಿನವರು ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿಗೆ ನೀಡುತ್ತಿರುವ ಬೊಲೆರೋ ವಾಹನವನ್ನು ಕರ್ಣಾಟಕ ಬ್ಯಾಂಕಿನ ಎ.ಜಿ.ಎಂ ವಾದಿರಾಜ. ಕೆ. ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ಹರ್ಷೇಂದ್ರಕುಮಾರ. ಜೆ.ಎಸ್.ಎಸ್ ಆಡಳಿತ ಮಂಡಳಿ ಸದಸ್ಯರಾದ ಎಂ.ಎನ್ ತಾವರಗೇರಿ, ಶ್ರೀಕಾಂತ … Continued

ಧಾರವಾಡದಲ್ಲೂ ಅಗ್ನಿಪಥವಿರೋಧಿಸಿ ಪ್ರತಿಭಟನೆ: ಪೊಲೀಸರಿಂದ ಲಾಠಿ ಪ್ರಹಾರ

ಧಾರವಾಡ: ರಾಜ್ಯದಲ್ಲೂ ಅಗ್ನಿಪಥ ಸೇನಾ ನೇಮಕಾತಿ ಯೋಜನೆ ವಿರೋಧಿಸಿದ ಪ್ರತಿಭಟನೆ ಆರಂಭಗೊಂಡಿದೆ. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು,ಶನಿವಾರ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಧಾರವಾಡದ ಹಳೆ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಅಗ್ನಿಪಥ ಯೋಜನೆ ಜಾರಿ ವಿರೋಧಿಸಿ, ಯುವಕರು ಪ್ರತಿಭಟನೆ ನಡೆಸಿದರು. … Continued

ಧಾರವಾಡ: ಮುಂಬೈ ವ್ಯಕ್ತಿಗೆ ಕಿರುಕುಳ ನೀಡುತ್ತಿದ್ದ ಐವರು ಲೋನ್ ಆಪ್ ಏಜೆಂಟ್‌ಗಳನ್ನು ಬಂಧಿಸಿದ ಮಹಾರಾಷ್ಟ್ರ ಸೈಬರ್ ಸೆಲ್

ಮುಂಬೈ: ಸಾಲವನ್ನು ಮರುಪಾವತಿಸಲು ವಿಫಲವಾದರೆ ಅವರ ಮಾರ್ಫ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಸಂತ್ರಸ್ತರಿಂದ ಹಣ ವಸೂಲಿ ಮಾಡುತ್ತಿದ್ದ ಐವರು ಸಾಲದ ಆ್ಯಪ್ ಆಪರೇಟರ್‌ಗಳು ಮತ್ತು ಏಜೆಂಟ್‌ಗಳ ಗ್ಯಾಂಗ್ ಅನ್ನು ಧಾರವಾಡದಲ್ಲಿ ಮಹಾರಾಷ್ಟ್ರ ಸೈಬರ್ ಸೆಲ್ ಸೋಮವಾರ ಬಂಧಿಸಿದೆ. ಆರೋಪಿಗಳೆಲ್ಲರೂ ಸುಶಿಕ್ಷಿತರು ಎಂದು ಹೇಳಿದರು. ಆರೋಪಿಗಳನ್ನು ಸುಹೇಲ್ ನಾಸಿರುದ್ದೀನ್ ಸಯ್ಯದ್ (24), … Continued

ಪ್ರಿಯಕರನ ಜೊತೆ ಸೇರಿ ತಾಯಿಗೆ ಚಾಕುವಿನಿಂದ ಇರಿದ ಅಪ್ರಾಪ್ತ ಮಗಳು!

ಧಾರವಾಡ: ಪ್ರಿಯಕರನ ಜೊತೆ ಸೇರಿ ತಾಯಿಗೆ ಚೂರಿ ಇರಿದ ಅಪ್ರಾಪ್ತ ವಯಸ್ಸಿನ ಮಗಳು ನಂತರ ಆತನ ಜತೆ ಪರಾರಿಯಾದ ಆಘಾತಕಾರಿ ಘಟನೆ ಧಾರವಾಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಚಾಕುವಿನಿಂದ ಇರಿತಕ್ಕೊಳಗಾದ ಮಹಿಳೆಯನ್ನು ಜೀಜಾಬಾಯಿ ಎಂದು ಗುರುತಿಸಲಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್​​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಆರೋಪಿ ಪರಶುರಾಮ ಹಾಗೂ ಅವರ ಮಗಳು ಕೆಲ ದಿನಗಳ … Continued

ಧಾರವಾಡದ ಕಲ್ಲೂರಿನಲ್ಲಿ ಭಾರೀ ಜಂಗಿ ನಿಕಾಲಿ ಕುಸ್ತಿ: ವಿಜೇತ ಪರಶುರಾಮ ಬೊಮ್ಮನಹಳ್ಳಿಗೆ ಬೆಳ್ಳಿ ಗದೆ

ಧಾರವಾಡ : ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಜೈ ಹನುಮಾನ್ ಕುಸ್ತಿ ಸಂಘದ ವತಿಯಿಂದ ಭಾರಿ ಜಂಗಿ ನಿಕಾಲಿ ಕುಸ್ತಿ ನಡೆಯಿತು. ಗ್ರಾಮದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಮೈದಾನದಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಒಟ್ಟು ೫೨ ಪುರುಷ ಜೋಡಿಗಳು, ೫ … Continued

ಧಾರವಾಡ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ನಾಲ್ವರ ಬಂಧನ

ಧಾರವಾಡ: ಹಿಂದೂಯೇತರ ಅಂಗಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆ ಸಂಬಂಧ ನಬಿಸಾಬ್ ಅವರು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ಅವರನ್ನು ಬಂಧಿಸಲಾಗಿದೆ. ಅವರು ನಬಿಸಾಬ್ ಮಾಲೀಕತ್ವದ ಕಲ್ಲಂಗಡಿ … Continued