ಪ್ರಿಯಕರನ ಜೊತೆ ಸೇರಿ ತಾಯಿಗೆ ಚಾಕುವಿನಿಂದ ಇರಿದ ಅಪ್ರಾಪ್ತ ಮಗಳು!

ಧಾರವಾಡ: ಪ್ರಿಯಕರನ ಜೊತೆ ಸೇರಿ ತಾಯಿಗೆ ಚೂರಿ ಇರಿದ ಅಪ್ರಾಪ್ತ ವಯಸ್ಸಿನ ಮಗಳು ನಂತರ ಆತನ ಜತೆ ಪರಾರಿಯಾದ ಆಘಾತಕಾರಿ ಘಟನೆ ಧಾರವಾಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಚಾಕುವಿನಿಂದ ಇರಿತಕ್ಕೊಳಗಾದ ಮಹಿಳೆಯನ್ನು ಜೀಜಾಬಾಯಿ ಎಂದು ಗುರುತಿಸಲಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್​​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಆರೋಪಿ ಪರಶುರಾಮ ಹಾಗೂ ಅವರ ಮಗಳು ಕೆಲ ದಿನಗಳ … Continued

ಧಾರವಾಡದ ಕಲ್ಲೂರಿನಲ್ಲಿ ಭಾರೀ ಜಂಗಿ ನಿಕಾಲಿ ಕುಸ್ತಿ: ವಿಜೇತ ಪರಶುರಾಮ ಬೊಮ್ಮನಹಳ್ಳಿಗೆ ಬೆಳ್ಳಿ ಗದೆ

ಧಾರವಾಡ : ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಜೈ ಹನುಮಾನ್ ಕುಸ್ತಿ ಸಂಘದ ವತಿಯಿಂದ ಭಾರಿ ಜಂಗಿ ನಿಕಾಲಿ ಕುಸ್ತಿ ನಡೆಯಿತು. ಗ್ರಾಮದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಮೈದಾನದಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಒಟ್ಟು ೫೨ ಪುರುಷ ಜೋಡಿಗಳು, ೫ … Continued

ಧಾರವಾಡ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ನಾಲ್ವರ ಬಂಧನ

ಧಾರವಾಡ: ಹಿಂದೂಯೇತರ ಅಂಗಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆ ಸಂಬಂಧ ನಬಿಸಾಬ್ ಅವರು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ಅವರನ್ನು ಬಂಧಿಸಲಾಗಿದೆ. ಅವರು ನಬಿಸಾಬ್ ಮಾಲೀಕತ್ವದ ಕಲ್ಲಂಗಡಿ … Continued

ಧಾರವಾಡ: ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದೂಯೇತರ 4 ಅಂಗಡಿಗಳ ಮೇಲೆ ದಾಳಿ

ಧಾರವಾಡ : ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದೂಯೇತರ ವ್ಯಾಪಾರಿಗಳ 4 ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ. ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಬಿಸಾಬ್ ಎಂಬುವವರ ಅಂಗಡಿ ಸೇರಿದಂತೆ ಇತರೆ ನಾಲ್ಕು ಅಂಗಡಿಗಳಿಗೆ ಹಾನಿಮಾಡಲಾಗಿದೆ. ಅಂಗಡಿಯಲ್ಲಿದ್ದ ಕಲ್ಲಂಗಡಿ ಹಣ್ಣು, ತೆಂಗಿನಕಾಯಿ ಒಡೆದು ಹಾಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಕಳೆದ 15 … Continued

ನನಗೆ ಅಧಿಕಾರ ಕೊಟ್ಟಿದ್ದು ಶಿಕ್ಷಕ ಸಮುದಾಯ, ಅವರಿಗೆಂದೂ ಅನ್ಯಾಯ ಮಾಡಲು ಬಿಡುವುದಿಲ್ಲ: ಸಭಾಪತಿ ಹೊರಟ್ಟಿ

ಧಾರವಾಡ : ಕಳೆದ ನಲವತ್ತೆರಡು ವರ್ಷಗಳ ಹಿಂದೆ ಶಿಕ್ಷಕ ಸಮುದಾಯ ನನ್ನ ಕೈಗೆ ಅಧಿಕಾರವನ್ನು ಕೊಟ್ಟರು. ಅಂದಿನಿಂದ ಇಂದಿನ ವರೆಗೂ ನನಗೆ ಅಧಿಕಾರ ಕೊಟ್ಟ ಶಿಕ್ಷಕ ಸಮುದಾಯದವರಿಗೆ ನಾನೆಂದೂ ಕೈಕೊಟ್ಟಿಲ್ಲ, ಅನ್ಯಾಯ ಮಾಡಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಇಲ್ಲಿಯ ಜನತಾ ಶಿಕ್ಷಣ ಸಮಿತಿಯ (ಜೆ.ಎಸ್.ಎಸ್) ಪರವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ … Continued

ರಂಗಕರ್ಮಿ ಡಾ.ಶ್ರೀಪಾದ ಭಟ್ಟರಿಗೆ ಅಭಿನಯ ಭಾರತಿ ರಂಗ ಪ್ರಶಸ್ತಿ ಪ್ರದಾನ

ಧಾರವಾಡ: ಖ್ಯಾತ ರಂಗಭೂಮಿ ನಿರ್ದೇಶಕ ಡಾ.ಶ್ರೀಪಾದ್ ಭಟ್ ಅವರಿಗೆ ರಂಗಾಯಣ ಧಾರವಾಡದ ಸಂಸ್ಕೃತಿ ಸಮುಚ್ಚಯದಲ್ಲಿ ಅಭಿನಯ ಭಾರತಿ ಕೊಡಮಾಡುವ 2022ನೇ ಸಾಲಿನ ಅಭಿನಯ ಭಾರತಿ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ಸಂಸ್ಥೆ ನೀಡುವ 27ನೆ ಪ್ರಶಸ್ತಿಯಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಶ್ರೀಪಾದ್ ಭಟ್ ಅವರು ಡಾ.ಬೇಂದ್ರೆ, ಡಾ.ಕೀರ್ತಿನಾಥ ಕುರ್ತಕೋಟಿ ಮತ್ತು ಅಭಿನಯ ಭಾರತಿ ಅವರೊಂದಿಗಿನ … Continued

ಧಾರವಾಡ ಅಭಿನಯ ಭಾರತಿ ವಿನೂತನ ಪ್ರಯತ್ನ: ರಂಗಭೂಮಿ ದಿನಾಚರಣೆ ನಿಮಿತ್ತ 24 ತಾಸುಗಳ ನಿರಂತರ ಫೇಸ್ಬುಕ್ ಲೈವ್‌ ಶೋ..!

ಧಾರವಾಡ: ಕರ್ನಾಟಕದ ಪ್ರತಿಷ್ಠಿತ ರಂಗಸಂಸ್ಥೆಗಳಲ್ಲಿ ಒಂದಾದ ಅಭಿನಯ ಭಾರತಿ ಪ್ರತಿವರ್ಷದಂತೆ ಈ ಬಾರಿಯೂ ವಿಶ್ವ ರಂಗಭೂಮಿ ದಿನಾಚರಣೆಯನ್ನು ಮಾರ್ಚ್ 27ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಧಾರವಾಡ ದ ರಂಗಾಯಣ ಆವರಣದಲ್ಲಿರುವ ಸಂಸ್ಕೃತಿ ಸಮುಚ್ಚಯ ಸಭಾಗೃಹದಲ್ಲಿ ಆಚರಿಸಲಿದೆ. ಈ ಬಾರಿ ಧಾರವಾಡದ ರಂಗಾಯಣವೂ ಅಭಿನಯ ಭಾರತೀಯಜೊತೆ ಕೈಗೂಡಿಸಿದ್ದು ಸಂಯುಕ್ತ ಆಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಹಮ್ಮಿಕೊಂಡಿದೆ ನಿರಂತರ 24 … Continued

ಸ್ವಾಸ್ಥ್ಯ ಸಮಾಜಕ್ಕೆ ಲಿಂಗ ಸಮಾನತೆ ಅವಶ್ಯ: ವಾಣಿಶ್ರೀ ಪ್ರಸಾದ

ಧಾರವಾಡ: ಸಮಾಜದಲ್ಲಿ ಮಹಿಳೆಯರು, ಪುರುಷರು ಪ್ರತಿಯೊಂದರಲ್ಲೂ ಸರಿ ಸಮಾನರು. ಇದರಲ್ಲಿ ಯಾವುದೇ ಭೇದ-ಭಾವ ಇರಬಾರದು ಎಂದು ಧಾರವಾಡದ ವಾಣಿಶ್ರೀ ಅಜಿತ ಪ್ರಸಾದ ಹೇಳಿದರು. ವಿದ್ಯಾಗಿರಿಯ ಜೆ.ಎಸ್.ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸ, ಉದ್ಯೋಗಾವಕಾಶ … Continued

ಶೀಘ್ರವೇ ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆ : ಸಚಿವ ಶಿವರಾಮ ಹೆಬ್ಬಾರ

ಧಾರವಾಡ : ವಿವಿಧ ರೀತಿಯ ವಾಹನಗಳನ್ನು ದಿನನಿತ್ಯ ಓಡಿಸುವ ಚಾಲಕರು, ಕ್ಲೀನರ್‌ಗಳ ಬದುಕು ರಕ್ಷಿಸಲು ಮತ್ತು ಅವರ ಮಕ್ಕಳು, ಕುಟುಂಬ ಸದಸ್ಯರಿಗೆ ನೆರವಾಗಲು ಕಾರ್ಮಿಕ ಕಲ್ಯಾಣ ಮಂಡಳಿಯಂತೆ ರಾಜ್ಯದಲ್ಲಿ ಶೀಘ್ರವಾಗಿ ಚಾಲಕರ ಕಲ್ಯಾಣ ಮಂಡಳಿ (ಡ್ರೈವರ್ ಬೋರ್ಡ್) ಸ್ಥಾಪನೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾ ಹೇಳಿದ್ದಾರೆ. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ … Continued

ವ್ರತ-ಧರ್ಮಾಚರಣೆ ಇಂದಿನ ಅವಶ್ಯ : ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ

ಧಾರವಾಡ: ಅಹಿಂಸೆ, ಅಪರಿಗ್ರಹ ಇಂದಿನ ಅವಶ್ಯಕತೆಗಳಾಗಿವೆ. ಹಿಂಸೆಯಿಂದ ಇಡೀ ವಿಶ್ವವೇ ನಲುಗಿ ಹೋಗಿದೆ. ವ್ರತ-ಧರ್ಮಾಚರಣೆಯಿಂದ ಮನಸ್ಸಿಗೆ ಶಾಂತಿ ಪ್ರಾಪ್ತಿಯಾಗಿ ನಮ್ಮಲ್ಲಿರುವ ಕೆಟ್ಟ ವಿಚಾರಗಳನ್ನು ದೂರವಿಡಬಹುದು. ಆಗ ಸಮಾಜದಲ್ಲಿ ಶಾಂತಿ, ಸಾಮರಸ್ಯ ಉಂಟಾಗುತ್ತದೆ ಎಂದು ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು. ಧಾರವಾಡ ನಗರದ ಸನ್ಮತಿ ಜಿನ ಮಂದಿರದಲ್ಲಿ ನಡೆದ ನೂತನ ಏಕಶಿಲಾ … Continued