ಜನಿಸಿದಾಗ ಸೇಬು ಹಣ್ಣಿನಷ್ಟು ತೂಕವಿದ್ದ ವಿಶ್ವದ ಅತ್ಯಂತ ಸಣ್ಣ ಮಗು 13 ತಿಂಗಳ ಆಸ್ಪತ್ರೆ ವಾಸದ ನಂತರ ಎಷ್ಟಾಗಿದೆಯೆಂದರೆ..

ಆರೋಗ್ಯ ಸಮಸ್ಯೆ ಅಥವಾ ಇತರೆ ಕಾರಣಗಳಿಂದ 9 ತಿಂಗಳಿಗೆ ಜನಿಸುವ ಮಗು 7 ಅಥವಾ 8 ನೇ ತಿಂಗಳಿಗೆ ಜನಿಸುತ್ತದೆ. ಆಗ ನಿಗದಿತ ಅವಧಿಗೂ ಮುನ್ನ ಜನಿಸಿದ ಮಕ್ಕಳನ್ನು ಸ್ವಲ್ಪ ಹೆಚ್ಚಾಗಿ ವಿಶೇಷ ಆರೈಕೆ ಮಾಡಬೇಕಾಗುತ್ತದೆ. ಅದಕ್ಕೂ ಮುಂಚೆ ಜನಿಸಿದರೆ ಆ ಮಗು ಬದುಕುವ ಸಾಧ್ಯತೆ ತೀರಾ ಕಡಿಮೆಯಿರುತ್ತದೆ. ಆದರೆ ಸಿಂಗಾಪುರದಲ್ಲಿ ​ ಕಳೆದ ವರ್ಷ … Continued

ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆ ಇತ್ತೀಚಿನ ವರದಿಯಲ್ಲಿ, ಭಾರತಕ್ಕೆ ಪ್ರಮುಖ ಸಂಕೇತಗಳು ಯಾವವು?

ಹವಾಮಾನ ಬದಲಾವಣೆಯ ಕುರಿತು ಅಂತರ್ ಸರ್ಕಾರಿ ಸಮಿತಿಯು (Intergovernmental Panel on Climate Change, ಐಪಿಸಿಸಿ) ತನ್ನ ಬಹುನಿರೀಕ್ಷಿತ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ‘ಹವಾಮಾನ ಬದಲಾವಣೆ 2021: ಭೌತಿಕ ವಿಜ್ಞಾನ ಆಧಾರ’ ಎಂಬ ಶೀರ್ಷಿಕೆಯ ವರದಿಯು ಐಪಿಸಿಸಿಯ ಆರನೇ ಮೌಲ್ಯಮಾಪನ ವರದಿಯ (ಎಆರ್ 6) ಮೊದಲ ಭಾಗವಾಗಿದೆ ಮತ್ತು 2040 ಕ್ಕಿಂತ ಮೊದಲು 1.5 … Continued

ಭಾರತದಲ್ಲಿ 147 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಕೊರೊನಾ ಸೋಂಕು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೊರನಾ ವೈರಸ್ಸಿನ 28,204 ಹೊಸ ಪ್ರಕರಣಗಳನ್ನು ಭಾರತವು ದಾಖಲಿಸಿದೆಇದೇ ಸಮಯದಲ್ಲಿ ಸೋಂಕಿನಿಂದಾಗಿ 373 ಸಾವುಗಳು ಸಂಬವಿಸಿವೆ. ಇದು 147 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಸೋಂಕುಗಳಾಗಿದೆ. ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 41,511 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ … Continued

ಕಡಲ್ಗಳ್ಳತನ -ಭಯೋತ್ಪಾದನೆಗಾಗಿ ಸಾಗರ ಮಾರ್ಗಗಳ ದುರ್ಬಳಕೆ: ಯುಎನ್‌ಎಸ್‌ಸಿ ಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ‘ಸಮುದ್ರ ಭದ್ರತೆಯನ್ನು ಹೆಚ್ಚಿಸುವುದು-ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಒಂದು ಪ್ರಕರಣ’ (Enhancing Maritime Security – A Case for International Cooperation’)ಕುರಿತು ಉನ್ನತ ಮಟ್ಟದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಮುಕ್ತ ಚರ್ಚೆ ಅಧ್ಯಕ್ಷತೆ ವಹಿಸಿದ್ದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ತಮ್ಮ ಮೊದಲ … Continued

ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಡಿಐಸಿಜಿಸಿ ಮಸೂದೆ ಲೋಕಸಭೆಯಲ್ಲೂ ಅಂಗೀಕಾರ

ನವದೆಹಲಿ: ಬ್ಯಾಂಕ್​ಗಳಲ್ಲಿ ಹಣ ಠೇವಣಿ ಇಡುವ ಸಣ್ಣ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಮಹತ್ವದ ಮಸೂದೆಗೆ ಇಂದು (ಸೋಮವಾರ) ಲೋಕಸಭೆ ಒಪ್ಪಿಗೆ ನೀಡಿದೆ. ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್(ತಿದ್ದುಪಡಿ) ಮಸೂದೆ -2021 (ಡಿಐಸಿಜಿಸಿ)ಕ್ಕೆ ಲೋಕಸಭೆ ಸೋಮವಾರ ಒಪ್ಪಿಗೆ ನೀಡಿದೆ. ಇದು ಜಾರಿಯಾಗುವುದರಿಂದ ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಣೆಯಾಗಲಿದ್ದು, ಬ್ಯಾಂಕ್​ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು … Continued

ಇದು ಅಸಾಮಾನ್ಯ: ಆಕ್ಸಿಜನ್‌ ಸಪೋರ್ಟ್‌ ಮೇಲೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಈ ಬಾಲಕಿಗೆ 625ಕ್ಕೆ 625 ಅಂಕ..!

ಬಾಗಲಕೋಟೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020-21 ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದ್ದು, ಬಾಗಲಕೋಟೆ ತಾಲೂಕಿನ ಗಂಗಮ್ಮ ಹುಡೇದ ಎಲ್ಲ ಕೊರತೆಗಳನ್ನು ಮೆಟ್ಟಿ ನಿಂತು 625ಕ್ಕೆ 625 ಅಂಕ ಪಡೆದು ಎಲ್ಲರಿಗೂ ಪ್ರೇರಣೆದಾಯಕ ಸಾಧನೆ ಮಾಡಿದ್ದಾಳೆ ಎಂದು ವರದಿಯಾಗಿದೆ. ಅವಳ ಸಾಧನೆ ಯಾಕೆ ಮಹತ್ವದ್ದು ಹಾಗೂ … Continued

ಬಾಂಗ್ಲಾದೇಶದ ನಾಲ್ಕು ಹಿಂದೂ ದೇವಾಲಯಗಳ ಮೇಲೆ ದುಷ್ಕರ್ಮಿಗಳಿಂದ ದಾಳಿ, ವಿಗ್ರಹಗಳು ಧ್ವಂಸ: ಹತ್ತು ಜನರ ಬಂಧನ

ಢಾಕಾ: ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಹಿಂದೂ ದೇವಾಲಯಗಳು, ಕೆಲವು ಅಂಗಡಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮನೆಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಲಾಗಿದೆ. ಈ ಸಂಬಂಧ ಹತ್ತು ಜನರನ್ನು ಬಂಧಿಸಿದ್ದು, ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶುಕ್ರವಾರ ರಾತ್ರಿ ರೂಪಾ ಉಪಜಿಲಾದ ಶಿಯಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶುಕ್ರವಾರ ರಾತ್ರಿ ಹಿಂದೂ … Continued

ಸಚಿವ ಸಂಪುಟ ರಚನೆಯಲ್ಲಿ ಆರಂಭವಾಯ್ತು ಅಸಮಾಧಾನ:ಇದು ಕೇವಲ ಗೊಣಗಾಟವೇ ಅಥವಾ ನೂತನ ಸಿಎಂಗೆ ಗಂಭೀರ ಸವಾಲೇ..? ,

ರಘುಪತಿ ಯಾಜಿ ಬೆಂಗಳೂರು: ಯಾವುದೇ ಮುಖ್ಯಮಂತ್ರಿಗೆ ಸಚಿವರ ಖಾತೆ ಹಂಚಿಕೆ ಮಾಡುವುದು ಒಂದು ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಇಲ್ಲಿಂದಲೇ ಸಮಸ್ಯೆಗಳು ಉದ್ಭವಾಗಬಹುದು. ಈಗ ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಇದೇ ಸಮಸ್ಯೆ ಎದುರಾಗಿದೆ. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದವರನ್ನು ಬಿಟ್ಟು ಬಿಡಿ. ಅವರಿಂದೇನೂ ಅಂಥ ಸಮಸ್ಯೆ ಬರಲಿಕ್ಕಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ … Continued

ಹವಾಮಾನ ಬದಲಾವಣೆ..:2040 ವೇಳೆಗೆ ಜಾಗತಿಕ ತಾಪಮಾನ 1.5° ಸೆಂಟಿಗ್ರೇಡ್‌ ಮಿತಿ ದಾಟಬಹುದು- ಐಪಿಸಿಸಿ ಹೊಸ ವರದಿಯಲ್ಲಿ ಎಚ್ಚರಿಕೆ..!

ಮುಂದಿನ 20 ವರ್ಷಗಳಲ್ಲಿ ಭೂಮಿಯ ಸರಾಸರಿ ಮೇಲ್ಮೈ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ದಾಟುತ್ತದೆ ಮತ್ತು ಹೊರಸೂಸುವಿಕೆ (emissions) ತಗ್ಗಿಸದೆ ಇದ್ದರೆ ಈ ಶತಮಾನದ ಮಧ್ಯಭಾಗದಲ್ಲಿ 2ಡಿಗ್ರಿ ಸೆಲ್ಸಿಯಸ್‌ ದಾಟುವಷ್ಟು ಹವಾಮಾನ ಬದಲಾವಣೆ ಕುರಿತು ಅಂತರ್ ಸರ್ಕಾರಿ ಸಮಿತಿಯ (ಐಪಿಸಿಸಿ) ಇತ್ತೀಚಿನ ವರದಿಯಲ್ಲಿ ಎಚ್ಚರಿಸಿದೆ. ಮುಂಬರುವ ದಶಕಗಳಲ್ಲಿ ಜಾಗತಿಕ ಹೊರಸೂಸುವಿಕೆಗೆ ತಕ್ಷಣದ, ಬಲವಾದ ಮತ್ತು ಕ್ಷಿಪ್ರವಾದ … Continued

ಲವ್ ಯೂ ರಚ್ಚು’ಚಲನಚಿತ್ರ ಶೂಟಿಂಗ್ ವೇಳೆ ವಿದ್ಯುತ್‌ ತಗುಲಿ ಫೈಟರ್ ಸಾವು : ನಾಲ್ವರು ಪೊಲೀಸ್ ವಶಕ್ಕೆ

ಬೆಂಗಳೂರು: ಸಿನಿಮಾ ಶೂಟಿಂಗ್​ ವೇಳೆ ಅವಘಡವೊಂದು ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಚಿತ್ರ ನಿರ್ದೇಶಕ ಆರ್.ಶಂಕರ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಫೈಟರ್ ವಿವೇಕ್ ಮೃತಪಟ್ಟ ಪ್ರಕರಣದ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್, ಇನ್ಸ್ ಪೆಕ್ಟರ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ … Continued