ಮದುವೆಗೆ ಮೊದಲು ಕೌನ್ಸೆಲಿಂಗ್‌ ಕಡ್ಡಾಯ: ವಿಚ್ಛೇದನ ಹೆಚ್ಚಳ ತಡೆಗೆ ಈ ಕಾನೂನು ಜಾರಿಗೆ ತರಲು ಹೊರಟ ಗೋವಾ ಸರ್ಕಾರ..!

ಪಣಜಿ: ವಿಚ್ಛೇದನ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಉಲ್ಲೇಖಿಸಿ ಗೋವಾ ಸರ್ಕಾರ ವಿವಾಹಪೂರ್ವ ಸಮಾಲೋಚನೆ (ಕೌನ್ಸೆಲಿಂಗ್‌)ಯನ್ನು ಕಡ್ಡಾಯಗೊಳಿಸುವ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ. ರಾಜ್ಯ ಸರ್ಕಾರದ ಗೋವಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ (ಜಿಪಾರ್ಡ್) ಕೌನ್ಸೆಲಿಂಗ್ ಕೋರ್ಸ್ ಮತ್ತು ಅದರ ಸ್ವರೂಪವನ್ನು ಅಂತಿಮಗೊಳಿಸುತ್ತದೆ ಎಂದು ರಾಜ್ಯ ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್ ಹೇಳಿದ್ದಾರೆ. … Continued